• January 1, 2026

Tags : meet

ಎಬಿಡಿ ಭೇಟಿ ಮಾಡಿದ ನಟ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ದೇಶ ವಿದೇಶದಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಕಾಂತಾರ ಸಕ್ಸಸ್ ಖುಷಿಯಲ್ಲಿದ್ದು ಈ ಮಧ್ಯೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಆಟಗಾರ ಎಬಿ ಡಿವಿಲಿಯರ್ಸ್‌ ಭೇಟಿ ಮಾಡಿದ್ದಾರೆ. ರಿಷಬ್ ಹಾಗೂ ಎಬಿ ಡಿವಿಲಿಯರ್ಸ್‌ ಭೇಟಿಯ ಫೋಟೋಗಳನ್ನು ಹೊಂಬಾಳೆ ಫಿಲ್ಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಸಿನಿಮಾದ 360 ಡಿಗ್ರಿ ಹಾಗೂ ಕ್ರಿಕೆಟ್‌ನ 360 ಡಿಗ್ರಿ ಮುಖಾಮುಖಿಯಾಗಿದ್ದಾರೆ ಎಂದು ಹೊಂಬಾಳೆ ಫಿಲ್ಸ್ಂ ಟ್ವೀಟ್ […]Read More

ಅನಾರೋಗ್ಯದ ಸುದ್ದಿ ಬೆನ್ನಲ್ಲೆ ಸಮಂತಾರನ್ನು ಭೇಟಿ ಮಾಡಲಿದ್ದಾರೆ ನಾಗಚೈತನ್ಯ

ಟಾಲಿವುಡ್ ನಟಿ ಸಮಂತಾ `ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಈ ಸುದ್ದಿಯ ಬೆನ್ನಲ್ಲೆ ಸಮಂತಾ ಕುರಿತ ಮತ್ತೊಂದು ಸುದ್ದಿಯೊಂದು ಹರಿದಾಡುತ್ತಿದೆ. ಸಮಂತಾಗೆ ಅನಾರೋಗ್ಯದಿಂದಾಗಿ ಸಾಕಷ್ಟು ನೋವಿ ಅನುಭವಿಸಿದ್ದಾರೆ. ಆರೋಗ್ಯ ಕೈಕೊಟ್ಟ ಬೆನ್ನಲ್ಲೇ ಮಾಜಿ ಪತ್ನಿ ಸಮಂತಾರನ್ನು ನಾಗಚೈತನ್ಯ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಮಂತಾ `ಮೈಯೋಸಿಟಿಸ್’ ಕಾಯಿಲೆಯಿಂದ ಬಳುತ್ತಿರುವುದು ಹೇಳಿಕೊಂಡಿದ್ದು ಆದಷ್ಟು ಬೇಗ ಅದರಿಂದ ಆಚೆ ಬರುವುದಾಗಿ ಹೇಳಿದ್ದಾರೆ,. ಸಮಂತಾರಾ ಆರೋಗ್ಯದ ಸುದ್ದಿ ತಿಳಿದ ಸಾಕಷ್ಟು […]Read More

ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿದ ನಿರ್ಮಾಪಕ ವಿಜಯ್ ಕಿರಗಂದೂರು

ಕೆಜಿಎಫ್ ಸಿನಿಮಾದ ಮೂಲಕ ದೇಶ, ವಿದೇಶದಲ್ಲೂ ಸದ್ದು ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಮಾಲಿಕ ವಿಜಯ್ ಕಿರಗಂದೂರು ಇದೀಗ ಕಾಂತಾರದ ಮೂಲಕ ಕಮಾಲ್ ಮಾಡುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಮಿಂಚುತ್ತಿರುವ ಕಾಂತಾರ ತುಳು ನಾಡಿನ ಭೂತ ಕೋಲದ ಕುರಿತಾದ ಸಿನಿಮಾವಾಗಿದೆ. ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ನಿರ್ಮಾಪಕ ವಿಜಯ್ ಕಿರಗಂದೂರು ಇದೀಗ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದಾರೆ. ಅನುರಾಗ್ ಠಾಕೂರ್ ಭೇಟಿಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಜಯ್ ಕಿರಗಂದೂರು ಅದೊಂದು […]Read More

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಹಿರಿಯ ನಟಿ ಲೀಲಾವತಿ

ಕನ್ನಡದ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಜೊತೆಗೆ ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಿದ್ದಾರೆ. ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ನೆಲೆಸಿರುವ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಿದ್ದು, ಅದರ ಉದ್ಘಾಟನೆಗೆ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದಾರೆ. ಈ ಹಿಂದೆ ಸಣ್ಣದೊಂದು ಆಸ್ಪತ್ರೆ ಕಟ್ಟಿಸಿದ್ದ ಲೀಲಾವತಿ ಹಾಗೂ ವಿನೋದ್ ರಾಜ್ ಇದೀಗ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ಕಟ್ಟಿದ್ದಾರೆ. ಚೆನೈ ನಲ್ಲಿ […]Read More

‘ಮರಾಠ ಮಂದಿರ್’ ಮಾಲೀಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿಜಯ್ ದೇವರಕೊಂಡ: ವಿವಾದಕ್ಕೆ

ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು ನಿರೀಕ್ಷೆಯನ್ನು ತಲುಪುವಲ್ಲಿ ಸೋಲನುಭವಿಸಿದೆ. ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಗಲ್ಲ ಪೆಟ್ಟಿಯಲ್ಲಿ ಮುಗ್ಗರಿಸಿತ್ತು. ಸಿನಿಮಾದ ಪ್ರಮೋಷನ್ ವೇಳೆ ವಿಜಯ್ ದೇವರಕೊಂಡ ನೀಡಿದ ಹೇಳಿಕೆಯೊಂದು ಪರ-ವಿರೋಧಕ್ಕೆ ಕಾರಣವಾಗಿತ್ತು. ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ‘ನಮ್ಮ ಸಿನಿಮಾವನ್ನು ಯಾರು ತಡೆಯುತ್ತಾರೋ ನೋಡೋಣ’ ಎಂದು ಅವರು ಹೇಳಿದ್ದಕ್ಕೆ ಮುಂಬೈನ ‘ಮರಾಠ ಮಂದಿರ್​’ ಚಿತ್ರಮಂದಿರದ ಮಾಲಿಕರಾದ ಮನೋಜ್​ ದೇಸಾಯಿ ಗರಂ ಆಗಿದ್ದರು. ಅಲ್ಲದೆ ವಿಜಯ್ ಅವರದ್ದು ಅಹಂಕಾರದ ಸ್ವಭಾವ’ ಎಂದು ಹೇಳಿದ್ದರು. ಸದ್ಯ […]Read More

ಜೂ.NTR ತೆಲುಗು ಚಿತ್ರರಂಗದ ರತ್ನ: ಅಮಿತ್ ಶಾ

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್ ಟಿ ಆರ್ ರನ್ನು ಭೇಟಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲುಗು ಚಿತ್ರರಂಗದಲ್ಲಿ ನೀವೊಂದು ರತ್ನ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ತೆಗೆದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಜೂನಿಯರ್ ಎನ್ ಟಿ ಆರ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಕೆಲಸದ ನಿಮಿತ್ತ ಅಮಿತ್ ಶಾ ಅವರು ತೆಲಂಗಾಣಕ್ಕೆ ಬಂದಿದ್ದಾರೆ. ಈ ವೇಳೆ ಜೂನಿಯರ್ ಎನ್ ಟಿ ಆರ್ ರನ್ನು ಭೇಟಿ ಮಾಡಿದ್ದು, […]Read More

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾದ ಡಾ. ರಾಜ್ ಕುಮಾರ್ ಕುಟುಂಬಸ್ಥರು

ಡಾ. ರಾಜ್ ಕುಮಾರ್ ಕುಟುಂಬದ ಸದಸ್ಯರು ಇಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತು ಕತೆ ನಡೆಸಿದರು. ಕಂಠೀರವ ಸ್ಟುಡಿಯೋ ಜಾಗದಲ್ಲಿ ರಾಜ್ ಕುಮಾರ್ ಕುಟುಂಬದ ಮೂವರ ಸಮಾಧಿಗಳು ಇರುವುದರಿಂದ ಅವುಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗಳಿವೆ. ಅಲ್ಲದೆ ಡಾ.ರಾಜ್ ಕುಮಾರ್ ಪುಣ್ಯಭೂಮಿ ಟ್ರಸ್ಟ್ ಕೂಡ ಅಲ್ಲೇ ಇದೆ. […]Read More

Phone icon
Call Now
Reach us!
WhatsApp icon
Chat Now