• January 2, 2026

‘ಹೆಡ್ ಬುಷ್’ ಚಿತ್ರದಲ್ಲಿ ಧನಂಜಯ್ ಬದಲು ಆ ಸ್ಟಾರ್ ನಟ ನಟಿಸಬೇಕಿತ್ತು

ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಹೆಡ್ ಬುಷ್ ಚಿತ್ರದಲ್ಲಿ ಧನಂಜಯ್ ನಟನೆಯ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತಿದ್ದಾರೆ. ಹೀಗಾಗಿ ಚಿತ್ರವನ್ನು ಆದಷ್ಟು ಜನರಿಗೆ ರೀಚ್ ಮಾಡಿಸುವ ಜವಬ್ದಾರಿ ಧನಂಜಯ್ ಮೇಲಿದೆ. ಹೆಡ್ ಬುಷ್ ಬೆಂಗಳೂರು ಡಾನ್ ಜಯರಾಜ್ ಕುರಿತಾದ ಸಿನಿಮಾವಾಗಿದ್ದು ಈಗಾಗ್ಲೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಡಾಲಿ  ರೆಟ್ರೋ ಲುಕ್ ನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ ವಿದೇಶಕ್ಕೂ ರೆಟ್ರೊ ಗೆಟಪ್‌ನಲ್ಲಿಯೇ ಹೋಗಿ ಬಂದಿದ್ದು, ಇತ್ತೀಚೆಗೆ ನಡೆದ ಫಿಲಂಫೇರ್‌ ಕಾರ್ಯಕ್ರಮದಲ್ಲೂ ರೆಟ್ರೋ ಗೆಟಪ್ ನಲ್ಲಿ ಮಿಂಚಿದ್ದಾರೆ. ಆದರೆ ಈ ಸಿನಿಮಾದಲ್ಲಿ ಡಾಲಿ ಧನಂಜಯ್ ನಿರ್ವಹಿಸಿರುವ ಪಾತ್ರವನ್ನು ಕನ್ನಡದ ಸ್ಟಾರ್ ನಿರ್ವಹಿಸಬೇಕಾಗಿತ್ತಂತೆ. ‘ಹೆಡ್ ಬುಷ್’ ಸಿನಿಮಾಕ್ಕೆ ಜಯರಾಜ್ ಆಪ್ತರಾಗಿದ್ದ ಅಗ್ನಿ ಶ್ರೀಧರ್ ಕತೆ ಬರೆದಿದ್ದಾರೆ. ಸಿನಿಮಾದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತ ಜಯರಾಜ್ ಕುರಿತ ಸಾಕಷ್ಟು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಅಗ್ನಿ ಶ್ರೀಧರ್ ಬಿಚ್ಚಿಟ್ಟಿದ್ದಾರೆ. ಅಂದ ಹಾಗೆ ಜಯರಾಜ್ ಪಾತ್ರದಲ್ಲಿ ನಟಿಸಲು ಮೊದಲು ಶಿವಣ್ಣ ಇದ್ದರೆ ಚೆನ್ನಾಗಿರುತ್ತದೆ ಎಂದು ಅಗ್ನಿ ಶ್ರೀಧರ್ ಅಂದುಕೊಂಡಿದ್ದರಂತೆ. ಹೆಡ್ ಬುಷ್ ಚಿತ್ರದ ಕಥೆಯನ್ನು ಉಪೇಂದ್ರ ಸಹ ಕೇಳಿದ್ದರಂತೆ. ಆದರೆ ಜಯರಾಜ್‌ನ ಯೌವ್ವನದ ದಿನಗಳ ಕತೆ ಇದಾದ್ದರಿಂದ ಕಟ್ಟುಮಸ್ತು ದೇಹದ ಯುವಕನ ಅವಶ್ಯಕತೆ ಇತ್ತು. ಹಾಗಾಗಿ ಡಾಲಿ ಧನಂಜಯ್ ಅನ್ನು ಆಯ್ಕೆ ಮಾಡಿದ್ದಾಗಿ ಅಗ್ನಿ ಶ್ರೀಧರ್ ಹೇಳಿದ್ದಾರೆ. ‘ನನಗೆ ವೈಯಕ್ತಿಕವಾಗಿ ಶಿವರಾಜ್ ಕುಮಾರ್ ನಟನೆ ಇಷ್ಟ. ಅವರ ಕಣ್ಣುಗಳಂತೂ ನನಗೆ ಬಹಳ ಇಷ್ಟ. ಹಾಗಾಗಿ ಅವರೇ ಈ ಪಾತ್ರಕ್ಕೆ ಸೂಕ್ತ ಎಂದುಕೊಂಡಿದ್ದೆ. ಆದರೆ ಅದಾಗಲಿಲ್ಲ. ಆದರೆ ಧನಂಜಯ್ ಅದ್ಭುತವಾಗಿ ಈ ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರಕ್ಕಾಗಿ ಅವರು ತಯಾರಾದ ರೀತಿ ಅದ್ಭುತವಾಗಿತ್ತು. ಅವರ ದೇಹದ ಶೇಪ್, ಮಾತನಾಡುವ ವಿಧಾನ ಎಲ್ಲವೂ ಚೆನ್ನಾಗಿದೆ. ಅವರು ಮೊದಲು ನಟನಾಗಿ ಬಂದರು. ಆದರೆ ಕತೆ ಇಷ್ಟವಾಗಿ ಅವರೇ ನಿರ್ಮಾಪಕರೂ ಆಗಿದ್ದಾರೆ” ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ. ಹೆಡ್ ಬುಷ್ ಸಿನಿಮಾ ಇದೇ ಅಕ್ಟೋಬರ್ 21ರಂದು ತೆರೆಗೆ ಬರಲಿದೆ. ಅಲ್ಲದೆ ಇದೇ ಅ.16ರಂದು ದಾವಣಗೆರೆಯಲ್ಲಿ ಅದ್ದೂರಿ ಪ್ರೀರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಚಿತ್ರರಂಗದ ಸಾಕಷ್ಟು ಕಲಾವಿಧರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now