ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
18ನೇ ವಯಸ್ಸಿನ ಫೋಟೋ ಹಂಚಿಕೊಂಡ ನಟಿ ರಮ್ಯಾ
ನಟಿ ರಮ್ಯಾ ಲಕ್ಷಾಂತರ ಹುಡುಗರ ಕನಸಿನ ಕನ್ಯೆ. ನಟನೆಯ ಜೊತೆಗೆ ತಮ್ಮ ಬ್ಯೂಟಿಯಿಂದಲೂ ಸಿನಿ ರಸಿಕರ ಮನ ಗೆದ್ದಿರುವ ರಮ್ಯಾ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಸದ್ಯ ರಮ್ಯಾ ತಮ್ಮ ಕಾಲೇಜು ದಿನಗಳ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಎಂಟ್ರಿಕೊಡುವ ಮುನ್ನ ತಮ್ಮ ಕಾಲೇಜು ದಿನಗಳ ಐಡಿ ಕಾರ್ಡ್ ನ ಫೋಟೋವನ್ನ ಹಂಚಿಕೊಂಡಿದ್ದಾರೆ. 18ನೇ ವಯಸ್ಸಿನಲ್ಲಿ ನಾನು’ ಎಂಬ ಅಡಿಬರಹದೊಂದಿಗೆ ರಮ್ಯಾ ಶೇರ್ ಮಾಡಿದ್ದಾರೆ. ರಮ್ಯಾರ ಕಾಲೇಜು ದಿನಗಳ ಫೋಟೋ ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
