ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟ ಆಲಿ ಫಜಲ್ ಜೊತೆ ಹಸೆಮಣೆ ಏರಲಿರೋ ಸ್ಯಾಂಡಲ್ ವುಡ್ ‘ಶಕೀಲಾ’ ಖ್ಯಾತಿಯ ನಟಿ ರಿಚಾ ಚಡ್ಡ
ನಟಿ ರಿಚಾ ಚಡ್ಡಾ ಕನ್ನಡದ ಪ್ರೇಕ್ಷಕರಿಗೂ ಚಿರ ಪರಿಚಿತ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಬಯೋಪಿಕ್ ಶಕೀಲಾ ಸಿನಿಮಾದಲ್ಲಿ ರಿಚಾ ಚಡ್ಡ ಬಣ್ಣ ಹಚ್ಚಿದ್ದರು. ಸಾಕಷ್ಟು ವರ್ಷಗಳಿಂದ ಡೇಟಿಂಗ್ ನಲ್ಲಿರುವ ಜೋಡಿಗಳು ಇದೀಗ ಹಸೆಮಣೆ ಏರಲು ಸಜ್ಜಾಗಿದ್ದು ಮದುವೆ ಕಾರ್ಯಗಳು ಆರಂಭವಾಗಿವೆ. ಸದ್ಯ ಮದುವೆ ಶಾಸ್ತ್ರದ ಫೋಟೋಗಳನ್ನು ಜೋಡಿಗಳು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.
2020ರಲ್ಲಿ ರಿಚಾ ಹಾಗೂ ಅಲಿ ಫಜಲ್ ಮದುವೆಯಾಗೋದಾಗಿ ಹೇಳಿದ್ದರು. ಆದರೆ ಕೋವಿಡ್ ಕಾರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಸದ್ಯ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದುಇಂದಿನಿಂದ ಮದುವೆಯ ಶಾಸ್ತ್ರಗಳು ಆಂಭಗೊಂಡಿವೆ.ಅಕ್ಟೋಬರ್ 4ರಂದು ರಿಚಾ ಹಾಗೂ ಆಲಿ ಫಾಜಲ್ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.
