ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸ್ಟಾರ್ ನಟನ ಜೊತೆ ‘ಮೈನಾ’ ಸುಂದರಿ ನಿತ್ಯಾ ಮೆನನ್ ಮದುವೆ
2016ರಲ್ಲಿ ಸುದೀಪ್ ನಟನೆಯ ಕೋಟಿಗೊಬ್ಬ ಸಿನಿಮಾದಲ್ಲಿ ಕಾಣಿಸಿಕೊಂಡು ಕನ್ನಡಿಗರ ಹೃದಯಕ್ಕೆ ಮತ್ತೆ ಲಗ್ಗೆ ಇಟ್ಟಿದ್ದ ನಿತ್ಯಾ ಮೆನನ್ ಇದೀಗ ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಸಿನಿ ರಂಗದಲ್ಲಿ ಮದುವೆಯ ಸೀಸನ್ ಶುರುವಾಗಿದೆ. ಕತ್ರಿನಾ ಕೈಫ್- ವಿಕ್ಕಿ ಕೌಶಲ್, ರಣಬೀರ್ ಕಪೂರ್- ಆಲಿಯಾ ಭಟ್, ನಯನತಾರಾ- ವಿಘ್ನೇಶ್ ಶಿವನ್ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ. ಇದೀಗ ನಿತ್ಯಾ ಮೆನನ್ ಮದುವೆ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ನಿತ್ಯಾ ಮೆನನ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಸದ್ಯ ನಿತ್ಯಾ ಮೆನನ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿತ್ಯಾ ಮೆನನ್ ನಟನೆಯ 19(1)(2) ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಸದ್ಯದಲ್ಲೇ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.
