• January 2, 2026

ಇಂದಿನಿಂದ 3 ದಿನಗಳ ಕಾಲ ರವಿಚಂದ್ರನ್ ಪುತ್ರನ ಮದುವೆ ಸಂಭ್ರಮ

ಕ್ರೇಜಿಸ್ಟಾರ್ ರವಿಚಂದ್ರನ್ ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಒಟ್ಟು ಮೂರು ದಿನಗಳ ಕಾಲ ವಿವಿಧ ಶಾಸ್ತ್ರಗಳನ್ನು ಕುಟುಂಬ ಹಮ್ಮಿಕೊಂಡಿದೆ. ಇವತ್ತು ಈಗಾಗಲೇ ಅರಿಶಿನ ಮತ್ತು ಮೆಹಂದಿ ಶಾಸ್ತ್ರಗಳು ಮುಗಿದಿದ್ದು, ಸಂಜೆ ವಧುವಿನ ಕಡೆಯಿಂದ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಸಂಜೆ ವಧುವಿನ ಕಡೆಯಿಂದ ಹಮ್ಮಿಕೊಂಡಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ. ಆಗಸ್ಟ್ 21 ರಂದು ಮದುವೆ ಶಾಸ್ತ್ರಗಳು ನಡೆಯಲಿದ್ದು, ಮನೋರಂಜನ್ ಮತ್ತು ಸಂಗೀತಾ ಹಸೆ ಮಣೆ ಏರಲಿದ್ದಾರೆ. ಅದ್ದೂರಿ ಮದುವೆ ಸಮಾರಂಭಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿರುವ ವೈಟ್ ಪೆಟಲ್ಸ್ ತ್ರಿಪುರವಾಸಿನಿ ಸಿದ್ಧಗೊಂಡಿದೆ. ಮದುವೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಅಲ್ಲದೇ, ಸಿನಿಮಾ ರಂಗದ ಗಣ್ಯರು ಕೂಡ ಭಾಗಿಯಾಗಲಿದ್ದಾರೆ. ಆಗಸ್ಟ್ 22 ರಂದು ಮನೋರಂಜನ್ ಕಡೆಯಿಂದ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಿನಿಮಾ ರಂಗದ ಗೆಳೆಯರು, ರವಿಚಂದ್ರನ್ ಅವರ ಆಪ್ತರು ಹಾಗೂ ನಾನಾ ಸಿನಿಮಾ ರಂಗದ ಕಲಾವಿದರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದ ರವಿಚಂದ್ರನ್, ಮಗನ ಮದುವೆಯನ್ನು ಸರಳವಾಗಿ ಮಾಡುತ್ತಿರುವುದರಿಂದ ಕುಟುಂಬಸ್ಥರಿಗೆ ಮತ್ತು ಆಪ್ತರಿಗಷ್ಟೇ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now