ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಮಗನ ಮದುವೆಗೆ ಆಹ್ವಾನಿಸಿದ ರವಿಚಂದ್ರನ್
ಮುಖ್ಯಮಂತ್ರಿಗಳನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ರವಿಚಂದ್ರನ್ ಕುಟುಂಬ ಸಮೇತ ಮದುವೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದೇ ಆಗಸ್ಟ್ 20 ಹಾಗೂ 21 ರಂದು ಬೆಂಗಳೂರಿನಲ್ಲಿ ಮನೋರಂಜನ್ ಮತ್ತು ಸಂಗೀತಾ ವಿವಾಹ ನಡೆಯಲಿದೆ. ಈಗಾಗ್ಲೆ ಸಿನಿಮಾ ರಂಗದವರು ಹಾಗೂ ರಾಜಕೀಯ ಗಣ್ಯರಿಗೆ ರವಿಚಂದ್ರನ್ ಆಹ್ವಾನ ನೀಡಿದ್ದಾರೆ. ಈ ಹಿಂದೆ ಮಗಳ ಮದುವೆಯನ್ನು ಸಾಕಷ್ಟು ಅದ್ದೂರಿಯಾಗಿ ಮಾಡಿದ್ದ ರವಿಚಂದ್ರನ್ ಇದೀಗ ಮಗನ ಮದುವೆಯನ್ನೂ ಸಾಕಷ್ಟು ಅದ್ದೂರಿಯಾಗಿಯೇ ಮಾಡುತ್ತಿದ್ದಾರೆ.
ಮಗಳು ಗೀತಾಂಜಲಿ ಮದುವೆಯನ್ನು ವಿಭಿನ್ನ ಥೀಮ್ ನಲ್ಲಿ ರೂಪಿಸಿದ್ದ ರವಿಚಂದ್ರನ್ ಇದೀಗ ಮಗನ ಮದುವೆಯನ್ನೂ ವಿಶೇಷವಾಗಿ ಮಾಡಲಿದ್ದಾರೆ.
