ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಇದೇ ಮೊದಲ ಬಾರಿಗೆ ಮದುವೆಯ ಬಗ್ಗೆ ಮೌನ ಮುರಿದ ಮನೋರಂಜನ್: ಭಾವಿಯ ಪತ್ನಿಯ ಬಗ್ಗೆ ಕ್ರೇಜಿ ಪುತ್ರ ಹೇಳಿದ್ದೇನು ಗೊತ್ತಾ?
ಮದುವೆಯ ಬಗ್ಗೆ ಇದುವರೆಗೂ ರವಿಚಂದ್ರನ್ ಕುಟುಂಬ ಎಲ್ಲಿಯೂ ಅಧಿಕೃತವಾಯಿ ಮಾತನಾಡಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಮನೋರಂಜನ್ ಈ ಬಗ್ಗೆ ಮಾತನಾಡಿದ್ದಾರೆ.
“ನಾನು ನನ್ನ ಪೋಷಕರನ್ನು ಭೇಟಿ ಮಾಡಲು ಯಾರನ್ನೂ ಮನೆಗೆ ಕರೆದುಕೊಂಡು ಬಂದಿಲ್ಲ. ಸ್ವಲ್ಪ ದಿನಗಳಿಂದ ನನ್ನ ತಾಯಿ ನನಗೆ ಹುಡುಗಿ ಹುಡುಕುತ್ತಿದ್ದರು. ಸಂಗೀತಾ ಪ್ರಪೋಸಲ್ ಬಂದಾಗ ಅದನ್ನು ಮುಂದುವರೆಸಬಹುದು ಎಂದು ನಿರ್ಧರಿಸಿದರು, ಮೊದಲು ಅಪ್ಪ- ಅಮ್ಮ ಸಂಗೀತಾ ಅವರನ್ನು ಭೇಟಿಯಾದರು, ನಂತರ ಸಂಗೀತಾ ಮತ್ತು ನಾನು ಭೇಟಿಯಾದೆವು ಎಲ್ಲವೂ ಓಕೆಯಾಯಿತು”. ಎಂದಿದ್ದಾರೆ ಮನೋರಂಜನ್.
“ಇದು ಇದ್ದಕ್ಕಿದ್ದಂತೆ ಸಂಭವಿಸಿದ್ದಲ್ಲ, ನಾವು ಒಬ್ಬರನ್ನೊಬ್ಬರು ಅರಿತುಕೊಂಡೆವು ಮತ್ತು ವಿಶೇಷವಾಗಿ ನಾನು ನಟನಾಗಿರುವುದರಿಂದ, ಅವರಿಗೆ ನನ್ನನ್ನು ತಿಳಿದುಕೊಳ್ಳಲು ಸಮಯ ನೀಡಬೇಕು ಎಂದು ನಾನು ಭಾವಿಸಿದೆ, ಸಂಗೀತಾ ತುಂಬಾ ಪ್ರೊಫೆಷನಲ್ ತನಗೆ ಇಷ್ಟವಾದುದ್ದನ್ನು ಮಾಡುತ್ತಾಳೆ ಎಂದು ಭಾವಿ ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು.
ಅವಳು ಮದುವೆಯಾಗುತ್ತಿರುವುದು ಅನೇಕ ನಾಯಕಿಯರೊಂದಿಗೆ ಕೆಲಸ ಮಾಡುವ ಮತ್ತು ಸದಾ ಚಿತ್ರೀಕರಣದಲ್ಲಿರುವ ನಟನನ್ನು. ಹಾಗಾಗಿ ಅರಿತುಕೊಳ್ಳುವುದು ಇದೆ.” “ಹೆಚ್ಚು ತಿಳುವಳಿಕೆ ಮತ್ತು ಕಾಳಜಿಯುಳ್ಳ ವ್ಯಕ್ತಿಯನ್ನು ನಾನು ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಜೊತೆಗೆ ನಾನು ಸರಳ ವ್ಯಕ್ತಿಯನ್ನು ಬಯಸಿದ್ದೆ ಮತ್ತು ಸಂಗೀತಾ ಅದನ್ನು ಸಾಕಾರಗೊಳಿಸಿದ್ದಾಳೆ. ಅವಳು ನನ್ನ ಮೇಲೆ ಇಟ್ಟಿರುವ ನಂಬಿಕೆ ನನಗೆ ತುಂಬಾ ಇಷ್ಟ ಆಯ್ತು. ನನ್ನ ಪರ ನಿಲ್ಲುತ್ತಾಳೆ ಎನ್ನುವ ನಂಬಿಕೆ ಇದೆ.” ಎಂದಿದ್ದಾರೆ.
ಒಟ್ನಲ್ಲಿ ಗುರುಹಿರಿಯರು ನಿಶ್ಚಯಿಸಿರುವ ಮನ ಮೆಚ್ಚಿದ ಹುಡುಗಿಯ ಕೈಯನ್ನು ಮನೋರಂಜನ್ ಹಿಡಿಯುತ್ತಿದ್ದಾರೆ.
