ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಜಯ್ ದೇವರಕೊಂಡ ಶರ್ಟ್ ತೊಟ್ಟು ಕ್ಯಾಮೆರಾಗೆ ಫೋಸ್ ಕೊಟ್ರಾ ರಶ್ಮಿಕಾ?
ಕಳೆದ ನಾಲ್ಕು ದಿನಗಳ ಹಿಂದೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕೆಲವೇ ಕೆಲವು ಸೆಕೆಂಡ್ ಗಳ ಅಂತರದಲ್ಲಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಜೋಡಿಗಳು ಮಾಲ್ಡೀವ್ಸ್ ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಮಾಲ್ಡೀವ್ಸ್ ನಿಂದ ರಶ್ಮಿಕಾ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದು ಅಭಿಮಾನಿಗಳು ವಿಜಯ್ ದೇವರಕೊಂಡ ಜೊತೆಗಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.
ಮಾಲ್ಡೀವ್ಸ್ ಪ್ರವಾಸದಲ್ಲಿರುವ ರಶ್ಮಿಕಾ ಮಂದಣ್ಣ ನೀಲಿ ನೀರಿನ ಮುಂದೆ ಕುಳಿತು ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್ ನಿಂದ ಶೇರ್ ಮಾಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವಿಮ್ ಸೂಟ್ ಧರಿಸಿರುವ ರಶ್ಮಿಕಾ ಮೇಲೆ ಉದ್ದವಾದ ಶರ್ಟ್ ಹಾಕಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ವಿಜಯ್ ದೇವರಕೊಂಡ ಶರ್ಟ್ ಇದು ಎಂದು ಕಾಲೆಳೆಯುತ್ತಿದ್ದಾರೆ.
