• January 2, 2026

ಸಿನಿಮಾದ ಕಥೆ ಕೇಳುವುದನ್ನು ನಿಲ್ಲಿಸಿದ ರಣಬೀರ್ ಕಪೂರ್

ಬಾಲಿವುಡ್ ನಟ ರಣಬೀರ್ ಕಪೂರ್ ಇದೀಗ ಸ್ಟಾರ್ ನಟನಾಗಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ರಣಬೀರ್ ಹಾಗೂ ಆಲಿಯಾ ಭಟ್ ನಟನೆಉ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಬ್ರಹ್ಮಾಸ್ತ್ರ ಸೂಪರ್ ಹಿಟ್ ಆಗುತ್ತಿದ್ದಂತೆ ರಣಬೀರ್ ಗೆ ಸಾಕಷ್ಟು ಆಫರ್ ಗಳು ಬರ್ತಿವೆ. ಆದರೆ ರಣಬೀರ್ ಆಫರ್ ನಿರಾಕರಿಸುತ್ತಿದ್ದಾರೆ. ರಣಬೀರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಾಯ್ ಕಾಟ್ ನಡುವೆಯೂ ಗೆಲುವಿನ ನಗೆ ಬೀರಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಇಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿಯನ್ನು ಮೆಚ್ಚಿಕೊಂಡಿದ್ದಾರೆ. ಆದರೆ ರಣಬೀರ್ ಮಾತ್ರ ಸದ್ಯಕ್ಕೆ ಯಾವುದೇ ಹೊಸ ಪ್ರಜೆಕ್ಟ್ ಗೂ ಸಹಿ ಮಾಡುತ್ತಿಲ್ಲವಂತೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಆಲಿಯಾ ಭಟ್ ಕೈ ಹಿಡಿದ ರಣಬೀರ್ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಆಲಿಯಾ ಭಟ್ ರ ಸೀಮಂತ ಶಾಸ್ತ್ರ ಮಾಡಿರುವ ರಣಬೀರ್ ಪತ್ನಿಯ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಸದ್ಯಕ್ಕೆ ಯಾವುದೇ ಚಿತ್ರವನ್ನು ರಣಬೀರ್ ಒಪ್ಪೊಕೊಳ್ಳುತ್ತಿಲ್ಲವಂತೆ. ಸದ್ಯಕ್ಕೆ ಸಿನಿಮಾಗಳಿಂದ ದೂರವಾಗಿರೋ ರಣಬೀರ್ ಮಗು ಹುಟ್ಟಿದ ಕೆಲ ಸಮಯದ ಬಳಿಕ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದ್ದಾರೆ. ಅಲ್ಲಿಯವರೆಗೂ ಯಾವುದೇ ಸಿನಿಮಾಗಳ ಕಥೆ ಕೇಳದಿರಲು ರಣಬೀರ್ ನಿರ್ಧರಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now