• June 4, 2026

ಬ್ರಹ್ಮಾಸ್ತ್ರ ಬಳಿಕ ಮತ್ತೆ ಒಂದಾದ ಆಲಿಯಾ, ರಣಬೀರ್: ಫ್ಯಾನ್ಸ್ ಫುಲ್ ಖುಷ್

ರೀಲ್ ಲೈಫ್ ನಲ್ಲಿ ಒಂದಾಗಿದ್ದ ಬಾಲಿವುಡ್ ಕಪಲ್ಸ್ ಆಲಿಯಾ ಭಟ್ ಹಾಗೂ ರಣಭೀರ್ ಕಪೂರ್ ರಿಯಲ್ ಲೈಫ್ ನಲ್ಲೂ ಒಂದಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಹಸೆಮಣೆ ಏರಿದ್ದ ಜೋಡಿಗಳು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ ರಣಬೀರ್ ಹಾಗೂ ಆಲಿಯಾ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಯ್ ಕಾಟ್ ನಡುವೆಯು ತೆರೆಗೆ ಬಂದ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ರಣಬೀರ್ ಆಲಿಯಾ ಜೋಡಿಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಆಲಿಯಾ ಗರ್ಭಿಣಿಯಾಗಿದ್ದ ಸದ್ಯಕ್ಕೆ ಈ ಜೋಡಿಯನ್ನು ತೆರೆ ಮೇಲೆ ನೋಡಲು ಸಾಧ್ಯವೇ ಇಲ್ಲ ಅಂದುಕೊಂಡಿದ್ರು. ಆದ್ರೆ ಇದೀಗ ಆಲಿಯಾ ಭಟ್ ಹಾಗೂ ರಣಬೀರ್ ಮತ್ತೆ ತೆರೆ ಮೇಲೆ ಒಂದಾಗಿದ್ದಾರೆ. ಹೌದು. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮತ್ತೆ ಒಟ್ಟಿಗೆ ಪರದೆ ಮುಂದೆ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಈ ಜೋಡಿಗಳು ಒಂದಾಗಿರೋದು ಸಿನಿಮಾದಲ್ಲಲ್ಲ. ಬದಲಾಗಿ ಜಾಹೀರಾತೊಂದರಲ್ಲಿ. ಇಬ್ಬರು ಟಿಎಂಟಿ ಕಂಬಿಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಈ ಜಾಹೀರಾತಿನ ವಿಡಿಯೋವನ್ನು ಟಿಎಂಟಿ ಕಂಪೆನಿ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಖ್ಯಾತ ನಿರ್ದೇಶಕ ಅಭಿಷೇಕ್ ವರ್ಮನ್ ನಿರ್ದೇಶನದ ಟಿಎಂಟಿ ಕಂಬಿಗಳು ಜಾಹೀರಾತಿಯಲ್ಲಿ ಆಲಿಯಾ, ರಣಬೀರ್ ಕಾಣಿಸಿಕೊಂಡಿದ್ದಾರೆ. ಜಾಹೀರಾತಿಯಲ್ಲಿ ಇಬ್ಬರು ಹೊಸ ಕಪಲ್ ಆಗಿಯೇ ಕಾಣಿಸಿಕೊಂಡಿದ್ದು ತಮ್ಮ ಕನಸಿನ ಮನೆ ಬಗ್ಗೆ ಚರ್ಚೆ ನಡೆಸುವ ಸನ್ನಿವೇಶವನ್ನು ಜಾಹೀರಾತಿನಲ್ಲಿ ಚಿತ್ರೀಕರಿಸಲಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now