• March 14, 2026

ಆಲಿಯಾ ಜೊತೆ ಮಲಗಲು ನಾನು ಕಷ್ಟಪಡುತ್ತೇನೆ: ರಣಬೀರ್ ಕಪೂರ್

ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಸದ್ಯ ಬ್ರಹ್ಮಾಸ್ತ್ರ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಮಧ್ಯೆ ದಂಪತಿ ಮುದ್ದು ಮಗುವಿನ ಆಗಮನಕ್ಕೆ ಎದುರು ನೋಡ್ತಿದ್ದಾರೆ. ಈ ವೇಳೆ ನಟ ರಣಬೀರ್ ಕಪೂರ್ ಪತ್ನಿಆಲಿಯಾ ಜೊತೆ ಮಲಗಿದ್ದ ಸಂದರ್ಭದಲ್ಲಿ ತಾವು ಅನುಭವಿಸುವ ಕಷ್ಟವನ್ನ ಹೇಳಿಕೊಂಡಿದ್ದಾರೆ. ಅನೇಕ ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದ ಜೋಡಿಗಳು 2022ರ ಏಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ಈ ಜೋಡಿಗಳಿದ್ದಾರೆ. ಸದ್ಯ ಬಾಲಿವುಡ್ ಬಬಲ್ ಗೆ ನೀಡಿದ ಸಂದರ್ಶನದಲ್ಲಿ ಆಲಿಯಾ ಭಟ್ ಜೊತೆ ಮಲಗುವುದು ಒಂದು ಹೋರಾಟ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.  ಆಲಿಯಾಳಲ್ಲಿ ಸಹಿಸಿಕೊಳ್ಳಬೇಕಾದ ಗುಣದ ಬಗ್ಗೆ ಹೇಳಿದ ಪ್ರಶ್ನೆಗೆ ಉತ್ತರಿಸಿದ ರಣಬೀರ್ ಕಪೂರ್, ಆಲಿಯಾ ಮಲಗಿದಾಗ ಚಲಿಸಲು ಪ್ರಾರಂಭಿಸುತ್ತಾಳೆ. ಕೊನೆಗೆ ನನಗೆ ಜಾಗವಿಲ್ಲದಂತಾಗುತ್ತದೆ. ಆಲಿಯಾ ತಲೆ ಎಲ್ಲೋ ಇರುತ್ತದೆ. ಅವಳ ಕಾಲುಗಳು ಎಲ್ಲೋ ಇವೆ, ಕೊನೆಗೆ ನಾನು ಹಾಸಿಗೆಯ ಮೂಲೆಯಲ್ಲಿರುತ್ತೇನೆ, ನಾನು ನಿದ್ದೆ ಮಾಡಲು ಕಷ್ಟಪಡುತ್ತೇನೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಇನ್ನೂ ರಣಬೀರ್ ನಲ್ಲಿ ಇಷ್ಟಪಡುವ ಗುಣ ಯಾವುದು ಎಂದ ಪ್ರಶ್ನೆಗೆ ಉತ್ತರಿಸಿದ ಆಲಿಯಾ ಭಟ್, ರಣಬೀರ್‌ನಲ್ಲಿ ನಾನು ಇಷ್ಟಪಡುವ ಒಂದು ವಿಷಯವೆಂದರೆ ಅವನ ಮೌನ. ಅವನು ತುಂಬಾ ಒಳ್ಳೆಯ ಕೇಳುಗ. ಕೆಲವೊಮ್ಮೆ ನಾನು ರಣಬೀರ್‌ಗೆ ಹೊಡೆದರೆ ಅವನು ಪ್ರತಿಕ್ರಿಯಿಸಬೇಕು ಆದರೆ ಅವನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now