• January 2, 2026

ಬಿಗ್ ಬಾಸ್ 16 ಸೀಸನ್ ನಲ್ಲಿ ರಾಖಿ ಸಾವಂತ್, ಆದಿಲ್ ಮದುವೆ?

ಬಾಲಿವುಡ್ ನಟಿ ರಾಖಿ ಸಾವಂತ್ ಕಳೆದ ಐದಾರು ತಿಂಗಳುಗಳಿಂದ ಮೈಸೂರು ಮೂಲದ ಉದ್ಯಮಿ ಆದಿಲ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಮುಂಬೈನಲ್ಲಿ ಇಬ್ಬರು ಕೈ ಕೈ ಹಿಡಿದು ಸುತ್ತಾಡುತ್ತಿದ್ದು ಸಾಕಷ್ಟು ಭಾರಿ ಒಟ್ಟಿಗೆ ಪಾಪರಾಜಿಗಳಿಗೆ ಫೋಸ್ ನೀಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಆದಿಲ್ ಜೊತೆ ಮದುವೆಯಾಗೋ ಇಂಗಿತವನ್ನು ರಾಖಿ ಸಾವಂತ್ ವ್ಯಕ್ತಪಡಿಸಿದ್ದಾರೆ. ವೆಬ್ ಸೈಟ್ ಒಂದಕ್ಕೆ ಮಾತನಾಡಿದ ರಾಖಿ ಸಾವಂತ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಡುವ ಬಗ್ಗೆ ಮಾತನಾಡಿದ್ದಾರೆ. ಆದಿಲ್ ಜೊತೆ ಬಿಗ್ ಬಾಸ್ 16 ಸೀಸನ್ ನಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಖಿ ಸಾವಂತ್, ‘ನನಗೆ ಗೊತ್ತಿಲ್ಲ. ಇದು ಸಾರ್ವಜನಿಕರ ಕೈಯಲ್ಲಿದೆ. ಸಲ್ಮಾನ್ ಭಾಯ್ ಕೈಯಲ್ಲಿದೆ. ಇದು ಕಲರ್ಸ್ ಕೈಯಲ್ಲಿದೆ. ಜನರು ಯಾವಾಗಲೂ ನಾನು ಅಳುವುದನ್ನು ನೋಡಿದ್ದಾರೆ. ನನ್ನ ರೋಮ್ಯಾಂಟಿಕ್ ಸೈಡ್‌,ಪ್ರೀತಿ, ಯಾವತ್ತೂ ನೋಡಿಲ್ಲ.ಮತ್ತು ನನಗೆ ಅಂತಹ ಹುಡುಗ ಸಿಕ್ಕಿರಲಿಲ್ಲ. ಈಗನನಗೆ ಆದಿಲ್ ಸಿಕ್ಕಿದ್ದು, ಆದಿಲ್‌ ಇನ್ನೊಂದು ಹೆಸರೇ ಪ್ರೀತಿ, ಲವ್‌, ರೋಮ್ಯಾನ್ಸ್‌ ಎಂದಿದ್ದಾರೆ. ಬಿಗ್ ಬಾಸ್ 16ಗೆ ಜೋಡಿಯಾಗಿ ಹೋಗುವ ಅವಕಾಶ ಸಿಕ್ಕರೆಖಂಡಿತ ಹೋಗುತ್ತೇಎ. ಜೊತೆಗೆ ಸಲ್ಮಾನ್ ಭಾಯ್ ಗೆ ನನ್ನ ಕನ್ಯಾದಾನ ಮಾಡುವಂತೆ ಕೇಳಿಕೊಳ್ಳುತ್ತೇನೆ. ಸಿಂಗಲ್ ಆಗಿ ಹೋಗಿ, ಮಿಂಗಲ್ ಆಗಿ ಹೊರಗೆ ಬರುತ್ತೇನೆ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಮೈಸೂರು ಮೂಲಕ ಆದಿಲ್ ರಾಖಿ ಸಾವಂತ್ ಗೆ ಬಿಎಂಡಬ್ಲ್ಯು ಕಾರು ಗಿಫ್ಟ್ ನೀಡಿ ಪ್ರಪೋಸ್ ಮಾಡಿದ್ದಾಗಿ ರಾಖಿ ಹೇಳಿಕೊಂಡಿದ್ದಾರೆ. ಜೊತೆಗೆ ಮುಂಬೈನಲ್ಲಿ ಆಕೆಯನ್ನು ಮನೆಯನ್ನೂ ಖರೀದಿಸಿ ಕೊಟ್ಟಿದ್ದಾರಂತೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now