ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಷ್ಯಾ ಜನತೆಯನ್ನು ಹೆಚ್ಚಿಸಲು ಪುಟೀನ್ ಹೊಸ ಪ್ಲಾನ್: 10 ಮಕ್ಕಳನ್ನು ಹೆತ್ತವರಿಗೆ 10 ಲಕ್ಷ ರೂಬಲ್ ಬಂಪರ್ ಆಫರ್
ಈಗಾಗಲೇ ಕೋವಿಡ್ 19 ಹಾಗೂ ಯುದ್ಧದಿಂದಾಗಿ ರಷ್ಯಾದಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿದೆ, ಇದೀಗ ಮತ್ತೆ ಕೋವಿಡ್ ಸೋಂಕು ವ್ಯಾಪಿಸಿತ್ತು ಮತ್ತಷ್ಟು ಸಾವು ನೋವುಗಳು ಹೆಚ್ಚಾಗುವ ಸಂಭವವಿದೆ. ಉಕ್ರೇನ್ ಜೊತೆಗಿನ ಸಂಘರ್ಷ ಆರಂಭವಾದ ಬಳಿಕ ಇದುವರೆಗೂ ರಷ್ಯಾದ 50,000ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ.
10ನೇ ಮಗು ಹೆತ್ತ ಮಹಿಳೆಗೆ 10 ಲಕ್ಷ ರೂಬಲ್ ನಗದು ಪುರಸ್ಕಾರ ನೀಡಲಾಗುತ್ತದೆ. 10ನೇ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬದಂದು ಈ ಮೊತ್ತವನ್ನು ಪಾವತಿಸಲಾಗುತ್ತದೆ. ಆ ಮಗುವಿನ 9 ಮಂದಿ ಅಣ್ಣ/ಅಕ್ಕಂದಿರು ಜೀವಂತ ಇರಬೇಕು ಎಂಬ ನಿಯಮವಿದೆ. 1990ರ ನಂತರ ರಷ್ಯಾದಲ್ಲಿ ಜನಸಂಖ್ಯೆ ನಿರಂತರ ಕುಸಿತ ಕಾಣುತ್ತಿದೆ. ರಷ್ಯಾದ ಹಲವು ಪ್ರದೇಶಗಳಲ್ಲಿ ಜನರೇ ಕಾಣಿಸುತ್ತಿಲ್ಲ. ಹೀಗಾಗಿ ಇಂಥ ಹತಾಶ ಪ್ರಯತ್ನಕ್ಕೆ ರಷ್ಯಾ ಅಧ್ಯಕ್ಷರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
