ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಕಣ್ಣಿನ ಆಸ್ಪತ್ರೆಗೆ 50 ಲಕ್ಷ ರೂ ನೀಡಿದ ನಿರ್ದೇಶಕ ಪ್ರಶಾಂತ್ ನೀಲ್
75ನೇ ಸ್ವಾತಂತ್ರ್ಯ ಮಹೋತ್ಸವದ ಸಂದರ್ಭದಲ್ಲಿ ಹುಟ್ಟೂರಾದ ನೀಲಕಂಠಪುರಂ ಎಂಬ ಹಳ್ಳಿಗೆ ಭೇಟಿ ನೀಡಿದ ಪ್ರಶಾಂತ್ ನೀಲ್ ಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಎಲ್ ವಿ ಪ್ರಸಾದ್ ಐ ಹಾಸ್ಟಿಟಲ್ ಗೆ ಸುಮಾರು 50ಲಕ್ಷ ರೂ. ಹಣವನ್ನು ದೇಣಿಯಾಗಿ ನೀಡಿದ್ದಾರೆ. ಈ ಬಗ್ಗೆ ಪ್ರಶಾಂತ್ ನೀಲ್ ಸಂಬಂಧಿ ಡಾ.ಎನ್ ರಘುವೀರ ರೆಡ್ಡಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಪ್ರಶಾಂತ್ ನೀಲ್ ತಂದೆ ಶುಭಾಷ್ ಹುಟ್ಟಿದ್ದೂ ಆಗಸ್ಟ್ 15, 1947. ಅಂದೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನ. ಈ ಕಾರಣಕ್ಕೆ ಈ ದಿನ ತುಂಬಾನೇ ಸ್ಪೆಷಲ್ ಆಗಿದ್ದು ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹಣ ದೇಣಿಗೆ ನೀಡಿದ್ದಾರೆ.
