ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಚಿರಂಜೀವಿ ಎದುರು ‘ಲೈಗರ್’ ಸೋಲಿನ ನೋವು ಬಿಚ್ಚಿಟ್ಟ ಪುರಿ ಜಗನ್ನಾಥ್
ಸಿನಿಮಾದ ಮೇಲೆ ಚಿತ್ರತಂಡಕ್ಕೆ ಅದೆಷ್ಟರ ಮಟ್ಟಿಗೆ ವಿಶ್ವಾಸವಿತ್ತು ಎಂದರೆ ರಿಲೀಸ್ ಗೂ ಮುನ್ನ ಡಿಜಿಟಲ್ ರೈಟ್ಸ್ ನೂರಾರು ಕೋಟಿಗೆ ಕೇಳಿದ್ದರು ಚಿತ್ರತಂಡ ಕೊಡಲು ಹಿಂದೇಟು ಹಾಕಿತ್ತು. ರಿಲೀಸ್ ಬಳಿಕ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿತ್ತು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ನಿರೀಕ್ಷೆಯನ್ನು ಹುಸಿಗೊಳಿಸಿದೆ.
ಇದೀಗ ಪುರಿ ಜಗನ್ನಾಥ್ ವಿಡಿಯೋ ಕಾಲ್ ಮೂಲಕ ಮೆಗಾಸ್ಟಾರ್ ಚಿರಂಜೀವಿ ಜೊತೆ ಲೈಗರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ನೀವು ಎಲ್ಲಿದ್ದೀರಿ? ಸ್ಕ್ರಿಪ್ಟ್‌ಗಳನ್ನು ನೋಡುತ್ತಿದ್ದೀರ? ಒಂದೊಮ್ಮೆ ಅಂದುಕೊಂಡ ರಿಸಲ್ಟ್ ಸಿನಿಮಾಗಳಿಂದ ಬರದಾಗ ಅದನ್ನು ಹೇಗೆ ಸ್ವೀಕಾರ ಮಾಡುತ್ತೀರಿ?” ಎಂದು ಚಿರಂಜೀವಿ, ಪುರಿ ಜಗನ್ನಾಥ್ ಅನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪುರಿ ಜಗನ್ನಾಥ್, ನಾನೀಗ ಮುಂಬೈನಲ್ಲಿದ್ದೇನೆ. ಚಿತ್ರಕತೆಗಳನ್ನು ನೋಡುತ್ತಿದ್ದೇನೆ. ಅದನ್ನು ಬಿಡಲು ಆಗುವುದಿಲ್ಲ” ಎಂದಿದ್ದಾರೆ.
”ಯಶಸ್ಸು ಬಂದರೆ ಬಹಳ ಎನರ್ಜಿ ಬರುತ್ತದೆ. ಸಿನಿಮಾ ಫೇಲ್ ಆದರೆ ಇದ್ದ ಎನರ್ಜಿಯೂ ಹೊರಟು ಹೋಗುತ್ತದೆ. ಯಶಸ್ಸು ಬಂದಾಗ, ನಾವೇ ಬುದ್ಧಿವಂತರು ಎನಿಸುತ್ತದೆ. ಸಿನಿಮಾ ಸೋತರೆ ನಮಗಿಂತ ಯಾರೂ ದಡ್ಡರಿಲ್ಲ ಎನಿಸುತ್ತದೆ. ಸಿನಿಮಾ ಸೋತಾಗ ನಂಬಿದವರು ಸಹ ಕೈಬಿಟ್ಟು ಹೋಗುತ್ತಾರೆ. ಎಲ್ಲವೂ ತಲೆಕೆಳಗಾಗುತ್ತದೆ. ಬೇರೆ-ಬೇರೆ ರೀತಿಯ ಸಮಸ್ಯೆಗಳು ಬರುತ್ತವೆ. ಆ ಸಮಯದಲ್ಲಿ ಧೈರ್ಯವಾಗಿ ಇರಬೇಕೆಂದರೆ ಖಂಡಿತ ಶಕ್ತಿ ಬೇಕು” ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.
ಈ ವೇಳೆ ಪುರಿ ಜಗನ್ನಾಥ್ ಗೆ ಸಮಾಧಾನ ಹೇಳಿದ ಚಿರಂಜೀವಿ, ತಮ್ಮ ಸಿನಿಮಾನೂ ಸೋತ ಬಗ್ಗೆ ಉದಾಹರಣೆ ಕೊಟ್ಟಿದ್ದಾರೆ. ‘ನೀನು ಪ್ರತಿಭಾವಂತ ತಂತ್ರಜ್ಞ. ಸೋಲನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ. ನನ್ನ ಒಂದು ಸಿನಿಮಾ ಸೋತಿತು. ಈಗ ಮತ್ತೊಂದು ಸಿನಿಮಾ ಗೆದ್ದಿದೆ. ನೀನೂ ಗೆಲ್ಲುತ್ತೀಯಾ’ ಎಂದಿದ್ದಾರೆ.
