• January 2, 2026

ಗಂಧದ ಗುಡಿ ಯಶಸ್ಸಿಗೆ ಚಿತ್ರದ ಟಿಕೇಟ್ ಇಟ್ಟು ಪೂಜೆ ಸಲ್ಲಿಸಿದ ನಿರ್ದೇಶಕ ಅಮೋಘ ವರ್ಷ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿ ಸಾಕ್ಷ್ಯ ಚಿತ್ರ ರಿಲೀಸ್ ಆಗಿದೆ.  ನಿನ್ನೆ ಚಿತ್ರದ ಪ್ರೀಮಿಯರ್ ಶೋ ರಿಲೀಸ್ ಆಗಿದ್ದು ಅಭೂತ ಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಇಂದು 225ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ರಾರಾಜಿಸುತ್ತಿದೆ. ಗಂಧದ ಗುಡಿ ಚಿತ್ರ ಯಶಸ್ಸು ಸಾಧಿಸಲಿ ಎಂದು ನಿರ್ದೇಶಕ ಅಮೋಘ ವರ್ಷ ಬೆಂಗಳೂರಿ ನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಗಂಧದ ಗುಡಿ ಚಿತ್ರದ ಟಿಕೇಟ್ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಗಂಧದ ಗುಡಿ ಚಿತ್ರ ಪಿಆರ್​ಕೆ ಪ್ರೊಡಕ್ಷನ್ಸ್​ ಅಡಿ ನಿರ್ಮಾಣ ಆಗಿದ್ದು ಅಮೋಘ ವರ್ಷ ನಿರ್ದೇಶನ ಮಾಡಿದ್ದಾರೆ. ನಿನ್ನೆ (ಅ.27) ರಾತ್ರಿಯೇ ಹಲವು ಕಡೆಗಳಲ್ಲಿ ‘ಗಂಧದ ಗುಡಿ’ ಪ್ರೀಮಿಯರ್​ ಶೋ ಆಯೋಜನೆಗೊಂಡಿದ್ದು,  ಅನೇಕ ಸೆಲೆಬ್ರಿಟಿಗಳು ಪ್ರೀಮಿಯರ್ ಶೋ ವೀಕ್ಷಿಸಲಿದ್ದಾರೆ. ಜೊತೆಗೆ ಸಾಕಷ್ಟು ಅಭಿಮಾನಿಳು ಚಿತ್ರ ವೀಕ್ಷಿಸಿದ್ದಾರೆ. ದಾಖಲೆ ಪ್ರಮಾಣದಲ್ಲಿ ‘ಗಂಧದ ಗುಡಿ’ ಶೋ ಆಯೋಜನೆಗೊಂಡಿದೆ. ರಾಜ್ಯಾದ್ಯಂತ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳು ಈ ಸಾಕ್ಷ್ಯಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ. ವಿದೇಶದಲ್ಲೂ ‘ಗಂಧದ ಗುಡಿ’ ತೆರೆಕಾಣುತ್ತಿದೆ. ಕರ್ನಾಟಕ ಸಂಸ್ಕೃತಿಗಳ ತವರು. ಕಾಡು ಮೇಡುಗಳ ನಾಡು, ಆರಾಧನೆಗಳ ಬೀಡು. ಎಲ್ಲವನ್ನೂ 96 ನಿಮಿಷಗಳಲ್ಲಿ ಹಿಡಿದಿಟ್ಟು ನಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಪುನೀತ್ ಹಾಗೂ ಅಮೋಘ ವರ್ಷ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now