ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ 9 ತಿಂಗಳು ಕಳೆದಿದೆ. ಅಪ್ಪು ಅವರನ್ನ ಅಮರವಾಗಿರಿಸಲು ಅಭಿಮಾನಿಗಳು ಇನ್ನಿಲ್ಲದ ಕೆಲಸಗಳನ್ನ ಮಾಡ್ತಿದ್ದಾರೆ. ಪುನೀತ್ ಹೆಸರಿಗೆ ಒಂದು ಚೂರು ನೋವಾಗದಂತೆ ಅಭಿಮಾನಿಗಳು ನೋಡಿ ಕೊಳ್ತಿದ್ದಾರೆ. ಈ ಮಧ್ಯೆ ಪುನೀತ್ ರಾಜ್ ಕುಮಾರ್ ಟ್ವಿಟರ್ ಖಾತೆಯಿಂದ ಮಾಯವಾಗಿದ್ದ ಬ್ಲೂ ಟಿಕ್ ಮತ್ತೆ ಮರಳಿ ಬಂದಿದೆ.
ಕಳೆದ ಒಂಬತ್ತು ತಿಂಗಳಿನಿಂದ ಪುನೀತ್ ರಾಜ್ ಕುಮಾರ್ ಅವರ ಟ್ವಿಟರ್ ಖಾತೆ ನಿಷ್ಕ್ರಿಯಗೊಂಡಿದೆ. ಹೀಗಾಗಿ ಅವರ ಟ್ವೀಟರ್ ಖಾತೆಯಲ್ಲಿದ್ದ ಬ್ಲೂಟಿಕ್ ತೆಗೆದುಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಟ್ವೀಟರ್ ವಿರುದ್ಧ ಗರಂ ಆಗಿದ್ದರು. ಈಗ ಟ್ವಿಟರ್ ಸಂಸ್ಥೆ ಎಚ್ಚೆತ್ತುಕೊಂಡಿದ್ದು ಪುನೀತ್ ಟ್ವೀಟರ್ ಖಾತೆಯಲ್ಲಿದ್ದ ಬ್ಲೂಮಾರ್ಕ್ ಮರಳಿ ನೀಡಿದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಸಾಕಷ್ಟು ಮಂದಿ ಸಂತಸ ಹಂಚಿಕೊಂಡಿದ್ದಾರೆ.

ಖ್ಯಾತ ವ್ಯಕ್ತ ಹಾಗೂ ಸಂಸ್ಥೆಗಳ ಟ್ವಿಟರ್ ಖಾತೆಗಳಿಗೆ ಬ್ಲೂಟಿಕ್ ನೀಡಲಾಗುತ್ತದೆ. ಬಹುತೇಕ ಎಲ್ಲಾ ಸೆಲೆಬ್ರಿಟಿಗಳ ಟ್ವೀಟರ್ ಖಾತೆಗೂ ಬ್ಲೂಮಾರ್ಕ್ ನೀಡಲಾಗಿದೆ. ಟ್ವಿಟರ್ ಖಾತೆ ಆರು ಅಥವಾ ಅದಕ್ಕಿಂತ ಹೆಚ್ಚು ಸಮಯ ಯಾವುದೇ ಆಕ್ಟೀವಿಟಿ ನಡೆಯದಿದ್ರೆ ಆ ಸಮಯದಲ್ಲಿ ಖಾತೆಗೆ ನೀಡಲಾಗಿರುವ ಬ್ಲೂಟಿಕ್ ತೆಗೆದು ಹಾಕಲಾಗುತ್ತದೆ. ನಿರ್ದಿಷ್ಟ ಖಾತೆ ಅಧಿಕೃತವಾಗಿದೆ ಎಂಬುದನ್ನು ಈ ಬ್ಲೂಟಿಕ್ ಸೂಚಿಸುತ್ತದೆ.