• June 2, 2026

ಮನೆಮನೆಯಲ್ಲೂ ಅಪ್ಪು ನೆನೆಪು: ಸಿಡ್ನಿಯಲ್ಲೂ ಪುನೀತ್ ಗೆ ವಿಶೇಷ ಗೌರವ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲದೆ ಒಂದು ವರ್ಷ ಕಳೆದು ಹೋಯಿತು. ಆದರೆ ಇಂದಿಗೂ ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಇಂದಿಗೂ ಅಪ್ಪುಗಾಗಿ ಕೋಟ್ಯಾಂತರ ಹೃದಯಗಳು ಮಿಡಿಯುತ್ತಿವೆ. ಅಪ್ಪು ಅವರ ಮೊದಲ ವರ್ಷದ ಪುಣ್ಯತಿಥಿಯನ್ನು ಪ್ರತಿಯೊಂದು ಕಡೆಯೂ ಆಚರಿಸಲಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಅಪ್ಪು ಅವರ ಮೊದಲ ವರ್ಷದ ಪುಣ್ಯತಿಥಿಯನ್ನು ಆಚರಿಸಲಾಗಿದೆ. ನಟ, ಸಮಾಜ ಸೇವಕ ಪುನೀತ್ ರಾಜ್ ಕುಮಾರ್ ಕರ್ನಾಟಕದಲ್ಲಿ ಮಾತ್ರವಲ್ಲ ಪ್ರತಿಯೊಂದು ಕಡೆಯೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಅಪ್ಪು ಅವರ ಪುಣ್ಯ ತಿಥಿಯನ್ನು ಆಚರಿಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲೂ ಅಪ್ಪುಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಫಲಕವನ್ನು ಅನಾವರಣ ಮಾಡಲಾಗಿದೆ. ಸಿಡ್ನಿಯ ಪಾರ್ಕ್‌ ಒಂದಕ್ಕೆ ಅಪ್ಪು ಹೆಸರಿಟ್ಟು ಅಪ್ಪು ನೆನಪಿಗೆ ಫಲಕ ನಿರ್ಮಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆ ದಿನ ಅನಾವರಣ ಮಾಡಿ ಗೌರವ ಸಲ್ಲಿಸಿದ್ದಾರೆ. ಸಂಪ್ರದಾಯಬದ್ದವಾಗಿ ಅಪ್ಪು ಫಲಕ ಅನಾವರಣ ಮಾಡಿದ ರೀತಿ ಕನ್ನಡಿಗರ ಗಮನ ಸೆಳೆಯುತ್ತಿದೆ. ಫಲಕಕ್ಕೆ ಬಾಳೆ ಗಿಡ ನಿಲ್ಲಿಸಿ ಪೂಜೆ ಮಾಡಿ ಅನಾವರಣ ಮಾಡಲಾಗಿದೆ. ಇನ್ನೂ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ನವೆಂಬರ್ 1ರಂದು ವಿಧಾನಸೌದದ ಮುಂಬಾಗ ಪ್ರಶಸ್ತಿ ನೀಡಲಾಗುತ್ತಿದ್ದು ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಜೂನಿಯರ್ ಎನ್ ಟಿ ಆರ್ ಗೆ ಆಹ್ವಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now