• March 16, 2026

ವಿಜಯ್ ದೇವರಕೊಂಡಗೂ ಮೊದಲು ಲೈಗರ್ ಕಥೆಯನ್ನು ಬೇರೊಬ್ಬ ನಾಯಕನಿಗೆ ಹೇಳಿದ್ದ ಪೂರಿ ಜಗನ್ನಾಥ್

ವಿಜಯ್ ದೇವರಕೊಂಡ ಲೈಫ್ ನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ತೆರೆಗೆ ಬಂದಿರುವ ಲೈಗರ್ ಸಿನಿಮಾ ಅಂದುಕೊಂಡಷ್ಟು ಮಟ್ಟಿಗಿನ ಸಕ್ಸಸ್ ಕಂಡಿಲ್ಲ. ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾದಲ್ಲಿ ಬಾಕ್ಸರ್ ಕಥೆಯನ್ನು ಹೇಳಲಾಗಿದೆ. ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮಕಾಡೆ ಮಲಗಿದೆ. ಸಿನಿಮಾದ ಕುರಿತಾಗಿ ಅತ್ಯಂತ ಕೆಟ್ಟ ವಿಮರ್ಶೆಗಳು ಕೇಳಿ ಬಂದಿವೆ. ಲೈಗರ್ ಸಿನಿಮಾದಲ್ಲಿ ನಟಿಸೋಕೆ ವಿಜಯ್ ದೇವರಕೊಂಡಾಗೂ ಮೊದಲು ನಟ ಮಹೇಶ್ ಗೆ ಆಫರ್ ಮಾಡಲಾಗಿತ್ತಂತೆ. ಆದರೆ ಮಹೇಶ್ ಚಿತ್ರವನ್ನು ತಿರಸ್ಕರಿಸಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿರುವ ಲೈಗರ್ ಸಿನಿಮಾದಲ್ಲಿ ನಟಿಸಲು ಪೂರಿ ಜಗನ್ನಾಥ್ ಮೊದಲಿಗೆ ಮಹೇಶ್ ಬಾಬು ಅವರಿಗೆ ಆಫರ್ ನೀಡಿದ್ದರಂತೆ. ಮಹೇಶ್ ಹಾಗೂ ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ತೆರೆಗೆ ಬಂದ ಪೋಕಿರಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಲೈಗರ್ ಸಿನಿಮಾದ ಕಥೆ ಕೇಳಿ ಮಹೇಶ್ ರಿಜೆಕ್ಟ್ ಮಾಡಿದ್ದರು. ಮಹೇಶ್ ಬಾಬು ನಿರಾಕರಿಸಿದ ಬಳಿಕ ವಿಜಯ್ ದೇವರಕೊಂಡರನ್ನು ಅಪ್ರೋಚ್ ಮಾಡಿದ್ದರಂತೆ.  ಸಿನಿಮಾದ ಕುರಿತಾಗಿ ನೆಗೆಟಿವ್ ಕಾಮೆಂಟ್ ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಹೇಶ್ ಈ ಸಿನಿಮಾವನ್ನು ಒಪ್ಪಿಕೊಳ್ಳದೆ ಇದ್ದದ್ದು ಒಳ್ಳೆಯದಾಯಿತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now