ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಡಿವೋರ್ಸ್ ಬಳಿಕ ಬದುಕು ಬದಲಾಗಿದೆ: ನಾಗಚೈತನ್ಯ
ಕೊರೊನಾ ಸಮಯ ಮತ್ತು ಪತ್ನಿಯೊಂದಿಗಿನ ವಿಚ್ಛೇದನವು ನನ್ನ ಜೀವನದ ಅಂತ್ಯಂತ ಕಠಿಣ ಸಮಯವಾಗಿತ್ತು ಎಂದಿದ್ದಾರೆ. ಜೊತೆಗೆ ವಿಚ್ಥೇದನ ಬಳಿಕ ಒಬ್ಬ ವ್ಯಕ್ತಿಯಾಗಿ ನಾನು ಸಾಕಷ್ಟು ಬದಲಾಗಿದ್ದೇನೆ. ಮೊದಲು ಹೆಚ್ಚು ತೆರೆದುಕೊಳ್ಳಲು ಸಾಧ್ಯವಾಗಲಿಲ್ಲ ಆದರೆ ಈಗ ಹಾಗಿಲ್ಲ. ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಹೆಚ್ಚು ಹತ್ತಿರವಾಗಿದ್ದು, ಸಂಪೂರ್ಣ ಹೊಸ ವ್ಯಕ್ತಿಯಾಗಿ ನನ್ನನ್ನು ನೋಡಿಕೊಳ್ಳಲು ಸಂತೋಷವಾಗುತ್ತದೆ ಎಂದು ನಾಗಚೈತನ್ಯ ಹೇಳಿದ್ದಾರೆ.
ಸದ್ಯ ಸಮಂತ ಹಾಗೂ ನಾಗಚೈತನ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದು ಸಾಕಷ್ಟು ಬೇಡಿಕೆ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಇತ್ತ ನಾಗಚೈತನ್ಯ ಕೂಡ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ನಟಿಸಿದ್ದು ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ.
