• March 14, 2026

ಕೆಲವೇ ನಿಮಿಷಗಳ ಎಂಟ್ರಿಗೆ ಮೈಕ್ ಟೈಸನ್ ಪಡೆದುಕೊಂಡಿದ್ದು ಬರೋಬ್ಬರಿ 25 ಕೋಟಿ ರೂಪಾಯಿ

ಪುರಿ ಜಗನ್ನಾಥ್ ನಿರ್ದೇಶನದ, ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ಸಿನಿಮಾ ಲೈಗರ್ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಾಗಿದೆ. ಸಿನಿಮಾ ವಿಮರ್ಶೆಯಲ್ಲಿ ಸೋಲು ಕಂಡ ಬೆನ್ನಲ್ಲೇ ಕಲೆಕ್ಷನ್ ನಲ್ಲೂ ಡಲ್ ಹೊಡೆದಿದೆ. ಅಂದ ಲೈಗರ್ ಬಾಕ್ಸರ್ ಕಥೆಯಾಧಾರಿತ ಸಿನಿಮಾವಾಗಿದ್ದು ಚಿತ್ರದ ಕೊನೆಯಲ್ಲಿ ಮೈಕ್ ಟೈಸನ್ ಎಂಟ್ರಿಕೊಡುತ್ತಾರೆ. ಇದಕ್ಕಾಗಿ ಟೈಸನ್ ಪಡೆದುಕೊಂಡಿರುವ ಸಂಭಾವನೆ ಹುಬ್ಬೇರಿಸುವಂತೆ ಮಾಡಿದೆ. ಬಾಕ್ಸಿಂಗ್ ಲೋಕದಲ್ಲಿ ಟೈಸನ್ ದೊಡ್ಡ ಮಟದಲ್ಲಿ ಹೆಸರು ಮಾಡಿದ್ದಾರೆ. ಜೊತೆಗೆ ಲೈಗರ್ ಕೂಡ ಬಾಕ್ಸಿಂಗ್ ಕಥೆಯಾಧಾರಿಸಿ ಸಿನಿಮಾ ಆಗಿರೋ ಕಾರಣಕ್ಕೆ ರಿಯಲ್ ಬಾಕ್ಸರ್ ನನ್ನೆ ಕರೆ ತಂದಿದ್ದರು. ಟೈಟನ್ ಇದ್ದರೆ ಸಿನಿಮಾಗೆ ಹೆಚ್ಚಿನ ಮೈಲೇಜ್ ಸಿಗುತ್ತೆ ಅನ್ನೋದು ನಿರ್ದೇಶಕರ ಆಲೋಚನೆಯಾಗಿತ್ತು. ಪುರಿ ಜಗನ್ನಾಥ್ ದಲು ಟೈಸನ್ ಅವರನ್ನು ಸಿನಿಮಾದಲ್ಲಿ ಹಾಕಿಕೊಳ್ಳುವ ಯೋಚನೆ ಮಾಡಿದಾಗ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ಕರಣ್ ಜೋಹರ್ ಸಂಪೂರ್ಣವಾಗಿ ವಿರೋಧಿಸಿದ್ದರು. ಮೈಕ್ ಟೈಸನ್ ಸಿನಿಮಾದಲ್ಲಿ ನಟಿಸಿದರೆ ಯಾವುದೇ ಪ್ರಯೋಜನೆ ಆಗುವುದಿಲ್ಲ ಎಂದಿದ್ದರು. ಆದರೆ ಪುರಿ ಮಾತಿಗೆ ಕಟ್ಟು ಬಿದ್ದು ಸಿನಿಮಾದ ಟೈಸನ್ ಹಾಕಿಕೊಳ್ಳಲು ಸಮ್ಮತಿ ನೀಡಿದ್ದರು. ಮೈಕ್ ಟೈಸನ್ ಈ ಚಿತ್ರದಲ್ಲಿ ನಟಿಸೋಕೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಷ್ಟೇ ಅಲ್ಲ, ಅಮೆರಿಕಕ್ಕೆ ಬಂದು ಸಿನಿಮಾ ಶೂಟಿಂಗ್ ಮಾಡಬೇಕು ಎಂಬ ಷರತ್ತು ಇಟ್ಟಿದ್ದರು. ಈ ಕಾರಣಕ್ಕೆ ಇಡೀ ತಂಡದವರು ಅಮೆರಿಕಕ್ಕೆ ತೆರಳಿ ಶೂಟಿಂಗ್ ಮಾಡಿದ್ದರು. ಇದರಿಂದಾಗಿ ಸಿನಿಮಾದ ಬಜೆಟ್ ಕೂಡ ಹೆಚ್ಚಾಗಿತ್ತು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now