• March 16, 2026

ಲೈಗರ್ ಸಿನಿಮಾದ ಸೋಲು: ಜನರ ಕಣ್ಣಿಂದ ದೂರವಾಗಲು ನಿರ್ಧರಿಸಿದ ಚಾರ್ಮಿ ಕೌರ್

ಬಾಲಿವುಡ್ ನಲ್ಲಿ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇದರಿಂದ ಇಡೀ ಲೈಗರ್ ಸಿನಿಮಾ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಲೈಗರ್ ಸಿನಿಮಾದ ಸೋಲಿನಿಂದ ನೊಂದಿರುವ ನಿರ್ಮಾಪಕಿ ಚಾರ್ಮಿ ಕೌರ್ ಸೋಷಿಯಲ್ ಮೀಡಿಯಾಗೆ ವಿರಾಮ ಘೋಷಿಸಿದ್ದಾರೆ. ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ಲೈಗರ್ ಸಿನಿಮಾ ಮೊದಲ ದಿನವೇ ಸೈಲೆಂಟ್ ಆಗಿ ಬಿಟ್ಟಿದೆ. ಹೀಗಾಗಿ ಲೈಗರ್ ಸಿನಿಮಾದಿಂದ ನಿರ್ಮಾಪಕರಿಗೆ ಆಗಿರುವ ನಷ್ಟವನ್ನು ಭರಿಸಲು ಸಂಭಾವನೆಯಲ್ಲಿ 6 ಕೋಟಿ ಹಿಂದಿರುಗಿಸಲು ವಿಜಯ್ ದೇವರಕೊಂಡ ಮುಂದಾಗಿದ್ದಾರೆ. ಜೊತೆಗೆ ಸಿನಿಮಾದ ಸೋಲಿನ ಬಳಿಕ ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಸೆಟ್ಟೇರಬೇಕಿದ್ದ ಜನ ಗಣ ಮನ ಸಿನಿಮಾದಿಂದ ನಿರ್ಮಾಪಕರು ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಲೈಗರ್ ಸಿನಿಮಾದ ಸೋಲಿನಿಂದ ನಟಿ ಅನನ್ಯಾ ಪಾಂಡೆ ಕೂಡ ಆಫರ್ ಕೈ ತಪ್ಪಿಸಿಕೊಂಡಿದ್ದಾರೆ. ಜೂನಿಯರ್ ಎನ್ ಟಿ ಆರ್ ನಟನೆಯ 30ನೇ ಸಿನಿಮಾದಲ್ಲಿ ಅನನ್ಯಾ ಪಾಂಡೆ ನಟಿಸಬೇಕಿತ್ತು.ಆದರೆ ಲೈಗರ್ ಚಿತ್ರದಲ್ಲಿ ಆಕೆಯ ನಟನೆ ನೋಡಿ ಬೆಚ್ಚಿ ಬಿದ್ದ ನಿರ್ದೇಶಕರು ಜೂನಿಯರ್ ಎನ್ ಟಿ ಆರ್ ಸಿನಿಮಾದಿಂದ ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಲೈಗರ್ ಸಿನಿಮಾ ಭಾರೀ ಸೋಲು ಕಂಡಿರುವ ಹಿನ್ನೆಲೆಯಲ್ಲಿ ನಿರ್ಮಾಪಕಿ ಚಾರ್ಮಿ ಕೌರ್ ಸೋಷಿಯಲ್ ಮೀಡಿಯಾಗೆ ಕೆಲ ಸಮಯ ವಿರಾಮ ಘೋಷಿಸಿದ್ದಾರೆ. ಚಿಲ್ ಗೈಸ್! ಸ್ವಲ್ಪ ವಿರಾಮ ತೆಗೆದುಕೊಳ್ಳುತ್ತೇನೆ. @PuriConnects ಮತ್ತೆ ಪುಟಿದೇಳುತ್ತಾರೆ. ಮತ್ತೆ ದೊಡ್ಡ ಹಾಗೂ ಉತ್ತಮ… ಅಲ್ಲಿಯವರೆಗೂ ಬದುಕಿ ಮತ್ತು ಬದುಕಲು ಬಿಡಿ ಎಂದು ಚಾರ್ಮಿ ಟ್ವೀಟ್ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now