ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಿರ್ದೇಶಕ ಪುರಿ ಜಗನ್ನಾಥ್ ಗೆ ಜೀವ ಬೆದರಿಕೆ: ದೂರು ದಾಖಲು
ತಮಗೆ ಸಿನಿಮಾ ವಿತರಕರಿಂದ ಜೀವ ಬೆದರಿಕೆ ಇದೆ ನಿರ್ದೇಶಕ ಪುರಿ ಜಗನಾಥ್ ಚೆನ್ನೈನ ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನಷ್ಟಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ವಿತರಕರು ಪುರಿ ಜಗನ್ನಾಥ್ ಮನೆಯ ಮುಂದೆ ಧರಣಿ ಕೂರುವುದಾಗಿ ಹೇಳಿದ್ದರು. ಅದಕ್ಕೂ ಪ್ರತಿಕ್ರಿಯೆ ನೀಡಿದ್ದ ಪುರಿ, ಇಂತಹ ಬೆದರಿಕೆಗೆ ನಾನು ಬಗ್ಗುವುದಿಲ್ಲ. ಹೆದರುವುದೂ ಇಲ್ಲ ಎಂದಿದ್ದರು. ಇದೀಗ ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ವಿತರಕರಾದ ವರಂಗಲ್ ಶ್ರೀನು ಹಾಗೂ ಫೈನಾನ್ಸಿಯರ್ ಶೋಭನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನ ಲೈಗರ್ ಚಿತ್ರ ಆಗಸ್ಟ್ 25ರಂದು ತೆರೆಕಂಡಿತ್ತು. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿತ್ತು.
ಚಿತ್ರಕ್ಕೆ ಅದ್ದೂರಿ ಪ್ರಚಾರ ನೀಡಿ ಅದಿಕ ಸಂಖ್ಯೆಯ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆ ಮಾಡಲಾಗಿತ್ತು. ಲೈಗರ್ ಕೈ ಹಿಡಿಯಲಿದೆ ಎಂಬ ಕಾರಣಕ್ಕೆ ವಿತರಕರು ಸಾಕಷ್ಟು ಹಣ ಕೊಟ್ಟು ಚಿತ್ರ ಖರೀದಿಸಿದ್ದರು. ಆದ್ರೆ ಸಿನಿಮಾ ಬಿಡುಗಡೆ ಆದ ವಾರದೊಳಗೆ ಲೈಗರ್ ಥಿಯೇಟರ್ ನಿಂದ ಎತ್ತಂಗಡಿ ಆಗಿತ್ತು.
