ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಜಯ್ ದೇವರಕೊಂಡ, ರಶ್ಮಿಕಾ ಲವ್ ಬ್ರೇಕ್ ಅಪ್ ಮಾಡಿದ ಕರಣ್ ಜೋಹರ್
ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋಗೆ ಬಾಲಿವುಡ್ ನಟಿ ನಿಹಾರಿಕಾ ಆಗಮಿಸಿದ್ದರು. ಈ ವೇಳೆ ಮಾತನಾಡುತ್ತಾ ಕರಣ್ ನನ್ನನ್ನು ವಿಕ್ಕಿ ಕೌಶಲ್ ಮದುವೆಗೆ ಆಹ್ವಾನಿಸಿಲ್ಲ. ಅದು ಯಾಕೆ ಅಂತಾನೇ ಗೊತ್ತಾಗಲಿಲ್ಲ ಎಂದರು. ಈ ವೇಳೆ ನಿಹಾರಿಕಾ, ನೀವೇನೂ ಬೇಸರ ಮಾಡಿಕೊಳ್ಳಬೇಡಿ. ನನ್ನ ಮದುವೆಗೆ ಖಡಿತಾ ಕರೆಯುತ್ತೇನೆ ಅಂತಾರೆ ಎಂದಿದ್ದಾರೆ. ನಿಹಾರಿಕಾ ಮದುವೆಗೆ ಆಹ್ವಾನ ನೀಡುತ್ತಿದ್ದಂತೆಯೇ ನಿಹಾರಿಕಾಳ ಮದುವೆ ಯಾರ ಜೊತೆ ಆಗಬೇಕು ಎಂದು ಕರಣ್ ಜೋಹರ್ ಚರ್ಚಿಸಿದ್ದಾರೆ.
ಮೊದಲು ನಿಹಾರಿಕಾಗೆ ನೀವು ಪ್ರಭಾಸ್ ಜೊತೆ ಮದುವೆ ಆಗಬಹುದು ಎನ್ನುತ್ತಾರೆ. ಪ್ರಭಾಸ್ ವಯಸ್ಸಲ್ಲಿ ದೊಡ್ಡವರು ಎಂದಾಗ. ಹಾಗಾದರೆ, ವಿಜಯ್ ದೇವರಕೊಂಡ ಜೊತೆ ಮದುವೆ ಆಗಬಹುದು. ಅವರು ಸಿಂಗಲ್ ಅನ್ನುತ್ತಾರೆ ಕರಣ್. ತಕ್ಷಣವೇ ವಿಜಯ್ ಮತ್ತು ರಶ್ಮಿಕಾ ಡೇಟಿಂಗ್ ವಿಚಾರ ಬರುತ್ತದೆ. ನನ್ನ ಪ್ರಕಾರ ಅವರಿಬ್ಬರ ಮಧ್ಯೆ ಅಂಥದ್ದೂ ಏನೂ ಇಲ್ಲ. ವಿಜಯ್ ಸಿಂಗಲ್ ಎನ್ನುವುದು ನನಗೆ ಗೊತ್ತು ಎಂದು ಹೇಳುವ ಮೂಲಕ ವಿಜಯ್ ಮತ್ತು ರಶ್ಮಿಕಾ ಲವ್ ಅನ್ನು ಬ್ರೇಕ್ ಅಪ್ ಕುರಿತು ಕರಣ್ ಜೋಹರ್ ಸ್ಪಷ್ಟನೆ ನೀಡಿದ್ದಾರೆ.
