• January 1, 2026

ನಾನು ಯಾವ ಸ್ಟಾರ್ ನಟನನ್ನೂ ಮದುವೆ ಆಗುತ್ತಿಲ್ಲ: ನಟಿ ನಿತ್ಯಾ ಮೆನನ್

ಕಳೆದೊಂದೆರಡು ದಿನಗಳಿಂದ ನಟಿ ನಿತ್ಯಾ ಮೆನನ್ ಮದುವೆಯ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.ಮಲಯಾಳಂ ಸ್ಟಾರ್ ನಟನ ಜೊತೆ ನಿತ್ಯಾ ಹಸೆ ಮಣೆ ಏರಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ಈ ಬಗ್ಗೆ ನಟಿ ನಿತ್ಯಾ ಮೆನನ್ ಪ್ರತಿಕ್ರಿಯಿಸಿದ್ದು ನಾನು ಯಾವ ಸ್ಟಾರ್ ನಟನನ್ನು ವಿವಾಹವಾಗುತ್ತಿಲ್ಲ ಎಂದಿದ್ದಾರೆ. ನಿತ್ಯಾ ಮೆನನ್ ಸ್ಟಾರ್ ನಟನೊಂದಿದೆ ವಿವಾಹವಾಗುತ್ತಾರೆ ಅನ್ನೋ ಸುದ್ದಿ ಕೇಳಿ ಸಾಕಷ್ಟು ಮಂದಿ ಖುಷಿಯಾಗಿದ್ದರು. ಜೊತೆಗೆ ನಿತ್ಯಾ ಮೆನನ್ ಕೈ ಹಿಡಿಯಲಿರೋ ಆ ಸ್ಟಾರ್ ನಟ ಯಾರು ಅನ್ನೋ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿತ್ತು. ಇದಕ್ಕೆಲ್ಲ ಸ್ವತಃ ನಿತ್ಯಾ ಮೆನನ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ನಾನು ಯಾರೊಂದಿಗೆ ಡೇಟಿಂಗ್ ಮಾಡುತ್ತಿಲ್ಲ. ಯಾವ ಸ್ಟಾರ್ ನಟನನ್ನೂ ಮದುವೆ ಆಗುತ್ತಿಲ್ಲ. ಸದ್ಯ ಮದುವೆ ಆಗುವ ಬಗ್ಗೆ ಯೋಚನೆ ಕೂಡ ಮಾಡಿಲ್ಲ. ಅಲ್ಲದೇ, ಮದುವೆಯಾಗುವಷ್ಟು ಸಲುಗೆಯನ್ನು ಯಾರೊಂದಿಗೂ ನಾನು ಇಟ್ಟುಕೊಂಡಿಲ್ಲ. ಅನೇಕ ಸ್ಟಾರ್ ನಟರು ಆತ್ಮೀಯರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರನ್ನು ಮದುವೆ ಆಗುತ್ತಿದ್ದೇನೆ ಎನ್ನುವುದು ಸುಳ್ಳು. ನಾನು ನನ್ನ ಕೆಲಸದಲ್ಲಿ ಬ್ಯುಸಿ ಆಗಿರುವೆ. ಮದುವೆ ಮಾತು ದೂರ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. 2006ರಲ್ಲಿ 7 ಒ ಕ್ಲಾಕ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಿತ್ಯಾ ಮೆನನ್ ರನ್ನ ಗಾಂಧಿನಗರ ಯಾಕೋ ಕೈ ಹಿಡಿಯಲಿಲ್ಲ. ಹೀಗಾಗಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಿತ್ಯಾ ಮೆನನ್ ಅಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ಒಂದರ ಹಿಂದೊಂದರಂತೆ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಿತ್ಯಾ ಮೆನನ್ ಬಳಿಕ ತಮಿಳು ಹಾಗೂ ತೆಲುಗು ಸಿನಿ ರಂಗದಲ್ಲೂ ಹೆಸರು ಮಾಡಿದ್ದಾರೆ. ಸದ್ಯ ನಿತ್ಯಾ ಮೆನನ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿತ್ಯಾ ಮೆನನ್ ನಟನೆಯ 19(1)(2) ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಸದ್ಯದಲ್ಲೇ  ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.    

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now