• January 1, 2026

ಕಾಂತಾರ ಸಿನಿಮಾ ನೋಡಿ ಭಾವುಕರಾದ ಕಂಗಾನ ರಣಾವತ್: ಈ ಅನುಭವದಿಂದ ಆಚೆ ಬರಲು ಒಂದು ವಾರವಾದರೂ ಬೇಕು ಎಂದ ನಟಿ

ಪುನೀತ್ ರಾಜ್ ಕುಮಾರ್ ನಟನೆಯ ಕಾಂತಾರ ಸಿನಿಮಾವನ್ನು ಈಗಾಗ್ಲೆ ಸಾಕಷ್ಟು ಮಂದಿ ವೀಕ್ಷಿಸಿದ್ದು ಚಿತ್ರಕ್ಕೆ ಜೈ ಅಂದಿದ್ದಾರೆ. ಅಲ್ಲದೆ ಇತ್ತೀಚೆಗೆ ನಟಿ ಕಂಗಾನ ರಣಾವತ್ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದೇನೆ ಎಂದಿದ್ದರು. ಇದೀಗ ಕಂಗಾನ ಕಾಂತಾರ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಕುಟುಂಬ ಸಮೇತರಾಗಿ ನಾನು ಕಾಂತಾರ ಸಿನಿಮಾವನ್ನು ನೋಡಿದೆ. ಥಿಯೇಟರ್ ನಿಂದ ಆಚೆ ಬಂದ ಮೇಲೂ ನಾನೂ ಇನ್ನೂ ನಡುಗುತ್ತಲೇ ಇದ್ದೇನೆ. ಚಿತ್ರಕಥೆ, ಅದನ್ನು ತೋರಿಸಿದ ರೀತಿ, ರಿಷಬ್ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದ್ಭುತವಾದ ಸಿನಿಮಾವನ್ನು ನೋಡಿದ ತೃಪ್ತಿ ಇದೆ. ಈ ಅನುಭವದಿಂದ ಆಚೆ ಬರಲು ನನಗೆ ಒಂದು ವಾರವಾದರೂ ಬೇಕು. ಆ ರೀತಿಯಲ್ಲಿ ಕಾಂತಾರ ಸಿನಿಮಾ ಮೂಡಿ ಬಂದಿದೆ ಎಂದರು. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾಗೆ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕನ್ನಡದಲ್ಲಿ ತೆರೆಕಂಡು ಬಳಿಕ ಪರಭಾಷೆಯಲ್ಲೂ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಅಲ್ಲದೆ ಟಾಪ್ 250 ಸಿನಿಮಾಗಳ ಪಟ್ಟಿಯಲ್ಲೂ ಕಾಂತಾರ ಮೊದಲ ಸ್ಥಾನ ಪಡೆದುಕೊಂಡಿದೆ. ಈಗಾಗ್ಲೆ ಕಾಂತಾರ ಸಿನಿಮಾಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ನಟ ಪ್ರಭಾಸ್, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಸೇರಿದಂತೆ ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದು ಇದೀಗ ಕಂಗಾನ ಕೂಡ ಕಾಂತಾರಕ್ಕೆ ಜೈ ಅಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now