• March 14, 2026

ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ‘ಕಮಲಿ’ ಖ್ಯಾತಿಯ ಅಂಕಿತಾ

ಕಿರುತೆರೆಯ ಜನಪ್ರಿಯ ಧಾರವಾಹಿ `ಕಮಲಿ’ ಖ್ಯಾತಿಯ ನಿಂಗಿ ಅಲಿಯಾಸ್ ಅಂಕಿತಾ ಇಂದು ಸುಹಾಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಎಂಗೇಜ್ ಮೆಂಟ್ ಫೋಟೋ ಹಂಚಿಕೊಂಡಿದ್ದ ಅಂಕಿತಾ ಇಂದು ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಅಂಕಿತಾ ಮದುವೆಯಲ್ಲಿ ಕಮಲಿ ಧಾರವಾಹಿ ತಂಡ ಭಾಗಿಯಾಗಿದ್ದು ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಇಂದು ಅದ್ದೂರಿಯಾಗಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ಸುಹಾಸ್ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ನವ ಜೋಡಿಗಳಿಗೆ ಕಿರುತೆರೆ ರಂಗದವರ ಜೊತೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now