ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮುರುಘ ಮಠಕ್ಕೆ ಶೂದ್ರರನ್ನು ಪೀಠಾಧಿಪತಿಯನ್ನಾಗಿ ನೇಮಿಸಿ: ಮಾಜಿ ನಗರಸಭೆ ಅಧ್ಯಕ್ಷ
ಮುರುಘಾ ಶ್ರೀ ಬದಲಾವಣೆಗೆ ಸಭೆ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂತರಾಜ್, ಶೂನ್ಯಪೀಠದ ಪರಂಪರೆಯ ಮಠದಲ್ಲಿ ಸರ್ವಧರ್ಮ, ಜಾತಿಗಳಿಗೂ ಸಮಾನ ಹಕ್ಕು ನೀಡಿರುವ ಪೀಠ ಇದಾಗಿದೆ. ಕೇವಲ ಒಂದು ಸಮುದಾಯಕ್ಕೆ ಮಠ ಸೀಮಿತವಾಗಿಲ್ಲ. ಮುರುಘಾಶ್ರೀ ಬದಲಾವಣೆಗೆ ಕೇವಲ ಒಂದು ಕೋಮಿನವರಿಗೆ ಅಧಿಕಾರ ಕೊಟ್ಟವರ್ಯಾರು? ಇದು ಬಸವತತ್ವದಡಿ ಬೆಳೆದು ನಿಂತಿರುವ ಪೀಠವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಮುರುಘಾ ಪೀಠಾಧ ಮೂಲ ಪೀಠಾಧ್ಯಕ್ಷರಾಗಿದ್ದವರು ಶೂದ್ರರಾದ ಅಲ್ಲಮ್ಮ ಪ್ರಭು. ಆದರೆ ಮುರುಘಾ ಶ್ರೀ ವಿರುದ್ಧ ಕೇಳಿಬಂದಿರುವ ಪೋಕ್ಸೋ ಆರೋಪದ ಬೆನ್ನಲ್ಲೇ ಶೂನ್ಯಪೀಠವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ ಸಭೆ ನಡೆಸಿದ್ದು ಸರಿಯಲ್ಲ. ಈ ಮುರುಘಾ ಮಠ ವೀರಶೈವ ಲಿಂಗಾಯತರ ಆಸ್ತಿಯಲ್ಲ. ಶೂದ್ರರನ್ನು ಮಠದಲ್ಲಿ ಕಡೆಗಣಿಸಲಾಗ್ತಿದೆ ಎಂದರು.
