ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮುರುಘಾ ಮಠದ ನೂತನ ಪೀಠಾಧಿಪತಿಗೆ ಹೆಚ್ಚಿದ ಒತ್ತಡ: ಶ್ರೀಗಳ ವಿಚಾರಣೆ ನಾಳೆಗೆ ಮುಂದೂಡಿಕೆ
ಈ ಬಗ್ಗೆ ಚಿತ್ರದುರ್ಗದಲ್ಲಿ ಸಭೆ ನಡೆಸಿದ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಮಠಕ್ಕೆ ನೂತನ ಪೀಠಾಧಿಪತಿಗಳನ್ನು ನೇಮಿಸಬೇಕು. ಅಲ್ಲದೆ ಕಳಂಕಿತ ಮುರುಘಾ ಸ್ವಾಮೀಜಿಯ ಬೆನ್ನಿಗೆ ನಿಂತಿರುವವರನ್ನು ಮಠದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಇದಕ್ಕೆ ಅಗತ್ಯ ಬಿದ್ದರೆ ಕಾನೂನು ಹೋರಾಟ ಮಾಡುವ ನಿರ್ಣಯ ಕೈಗೊಂಡಿದ್ದಾರೆ.
ಲಿಂಗಾಯತ ಮುಖಂಡರ ಮಾತಿನಿಂದ ಸ್ವಾಮೀಜಿ ಮತ್ತು ಎಸ್‍ಕೆ ಬಸವರಾಜನ್ ಬೆಂಬಲಿಗರು ಆಕ್ರೋಶಗೊಂಡ ಗದ್ದಲ ಎಬ್ಬಿಸಿದ್ದಾರೆ. ಸದ್ಯ ಜೈಲಿನಲ್ಲಿರುವ ಶ್ರೀಗಳು ಚೆಕ್ ಗಳಿಗೆ ಸಹಿ ಹಾಕಲು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಇದಕ್ಕೆ ಹೈಕೋರ್ಟ್ ಸಮ್ಮತಿ ನೀಡಿಲ್ಲ. ಅಲ್ಲದೆ ಚೆಕ್ ಗಳು ಶ್ರೀಗಳ ಹೆಸರಿನಲ್ಲೇಕಿದೆ?ಸಂಸ್ಥೆ ಹೆಸರಿನಲ್ಲಿ ಯಾಕಿಲ್ಲ ಎಂದು ಕೋರ್ಟ್ ಪ್ರಶ್ನಿಸಿದೆ. ಸಮರ್ಪಕ ಮಾಹಿತಿಯುಳ್ಳ ಮೆಮೋ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
