• February 10, 2026

ಡಾಲಿ ಬ್ಯಾನರ್ ನಿಂದ ವರ್ಷಕ್ಕೆ ಎರಡು ಸಿನಿಮಾ ಘೋಷಿಸಿದ ಧನಂಜಯ್

ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಇಂದು 36ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪುನೀತ್ ನಿಧನದ ಹಿನ್ನೆಲೆಯಲ್ಲಿ ಈ ವರ್ಷದ ಹುಟ್ಟುಹಬ್ಬಕ್ಕೆ ಧನಂಜಯ್ ಬ್ರೇಕ್ ಹಾಕಿದ್ರು. ಆದರೂ ಅವರ ಅಭಿಮಾನಿಗಳು ಬರ್ತಡೇ ಸೆಲೆಬ್ರೇಟ್ ಮಾಡಿದ್ದಾರೆ.  ಈ ಹಿನ್ನೆಲೆಯಲ್ಲಿ ಧನಂಜಯ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಕಾಲೇಜು ವಿದ್ಯಾಬ್ಯಾಸ ಮುಗಿಸಿದ ಧನಂಜಯ್ ಗೆ ಕೈತುಂಬಾ ಸಂಬಳ ಸಿಗುವ ಉದ್ಯೋಗ ಸಿಕ್ಕಿತ್ತು. ಆದರೆ ಅದನ್ನು ನಿರಾಕರಿಸಿದ ಧನಂಜಯ್ ಮೈಸೂರಿನ ರಂಗಾಯಣ ಸೇರಿ ನಟನೆಯನ್ನು ಕರಗತ ಮಾಡಿಕೊಂಡರು. 2013ರಲ್ಲಿ ತೆರೆಗೆ ಬಂದ ಡೈರೆಕ್ಟರ್ ಸ್ಪೆಷನ್ ಸಿನಿಮಾದ ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಧನಂಜಯ್ ಗೆ ಜಯನಗರ 4th ಬ್ಲಾಕ್ ಕಿರುಚಿತ್ರ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಬಳಿಕ `ರಾಟೆ’,`ಬಾಕ್ಸರ್’,`ಜೆಸ್ಸಿ’ ಬದ್ಮಾಷ್ ಸಿನಿಮಾದಲ್ಲಿ ನಟಿಸಿದ ಧನಂಜಯ್ ಗೆ 2017 ರಲ್ಲಿ ನಟಿಸಿದ ಐತಿಹಾಸಿಕ ಚಿತ್ರ `ಅಲ್ಲಮ’ಕ್ಕಾಗಿ ಫಿಲ್ಮ ಫೇರ್ ವಿಮರ್ಶಕರ ಅತ್ತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಯಾವುದೇ ಗಾಡ್ ಫಾದರ್ ಇಲ್ಲದೆ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಡಾಲಿ ಧನಂಜಯ್ ಇಂದು ಪರಭಾಷೆಯಲ್ಲೂ ಸದ್ದು ಮಾಡ್ತಿದಾರೆ. ಸದ್ಯ ಧನಂಜಯ್ ಕೈಯಲ್ಲಿ ಏಳು ಸಿನಿಮಾಗಳಿದ್ದು ಈ ಮಧ್ಯೆ ಡಾಲಿ ಡಾಲಿ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನೂ ಹುಟ್ಟು ಹಾಕಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಡಾಲಿ ಪಿಕ್ಚರ್ಸ್ ಕಡೆಯಿಂದ ಖುಷಿಯ ಸುದ್ದಿಯೊಂದನ್ನ ಧನಂಜಯ್ ನೀಡಿದ್ದಾರೆ. ವರ್ಷಕ್ಕೆ ಎರಡು ಸಿನಿಮಾಗಳ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇದು ಹುಟ್ಟು ಹಬ್ಬಕ್ಕೆ ಕೊಡುತ್ತಿರುವ ಗಿಫ್ಟ್ ಎಂದು ಡಾಲಿ ಸಂಸ್ಥೆ ಹೇಳಿಕೊಂಡಿದೆ. ವರ್ಷಕ್ಕೆ ಡಾಲಿ ಪಿಕ್ಚರ್ಸ್ ಕಡೆಯಿಂದ ಎರಡು ಸಿನಿಮಾಗಳು ಬಿಡುಗಡೆ ಆಗಲಿದೆ. ಅದರಲ್ಲಿ ಒಂದು ಸಿನಿಮಾ ಸಂಪೂರ್ಣವಾಗಿ ಹೊಸಬರಿಗೆ ಮೀಸಲಿಟ್ಟಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಡಾಲಿ ಪಿಕ್ಚರ್ಸ್ ಮುಂದಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now