• January 2, 2026

ಥ್ಯಾಂಕ್ ಗಾಡ್ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ಅಜಯ್ ದೇವಗನ್,ಸಿದ್ದಾರ್ಥ್ ಮೆಲ್ಹೋತ್ರ ವಿರುದ್ಧ ದೂರು ದಾಖಲು

ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಕಾರಣಕ್ಕೆ ಅಜಯ್ ದೇವಗನ್ ಸೇರಿದಂತೆ ಮೂವರು ಮೇಲೆ ದೂರು ದಾಖಲಾಗಿದೆ. ಇನ್ನೆಷ್ಟೇ ಥ್ಯಾಂಕ್ ಗಾಡ್ ಚಿತ್ರದ ಟ್ರೈಲರ್ ಬಿಡಗುಡೆ ಆಗಿದ್ದು ಟ್ರೈಲರ್ ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸನ್ನಿವೇಶವಿದೆ ಎಂದು ಹಿಮಾಂಶು ಶ್ರೀವಾಸ್ತವ್ ಎನ್ನುವವರು ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಮೋನಿಕಾ ಮಿಶ್ರಾ ಅವರ ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಥ್ಯಾಂಕ್ ಗಾಡ್ ಚಿತ್ರದಲ್ಲಿ ಚಿತ್ರಗುಪ್ತ ದೇವರನ್ನು ಪೂಜಿಸುವ ಕಾಯಸ್ಥ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಮಾಂಶು ಆರೋಪ ಮಾಡಿದ್ದಾರೆ. ಇದೇ ಕಾರಣಕ್ಕೆ ನಟ ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಇಂದ್ರ ಕುಮಾರ್ ಮೇಲೆ ದೂರು ನೀಡಿದ್ದರು. ಟಿ ಸಿರೀಸ್ ಮತ್ತು ಮಾರುತಿ ಇಂಟರ್ನ್ಯಾಷನಲ್ ನಿರ್ಮಾಣದ ಈ ಹಾಸ್ಯ ಚಿತ್ರವನ್ನು ಇಂದ್ರ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ‘ಥ್ಯಾಂಕ್ ಗಾಡ್’ ಚಿತ್ರ ಇದೇ ಅಕ್ಟೋಬರ್ ತಿಂಗಳ 25ನೇ ತಾರೀಖಿನಂದು ಬಿಡುಗಡೆ ಆಗುತ್ತಿದೆ. ಅಜಯ್ ಮತ್ತು ಸಿದ್ಧಾರ್ಥ್ ಅವರ ಫಸ್ಟ್ ಲುಕ್ ಪೋಸ್ಟರ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಚಿತ್ರದ ಟ್ರೈಲರ್ ಹಂಚಿಕೊಂಡಿರುವ ‘ಶೆರ್ಶಾಹ್’ ಚಿತ್ರದ ನಟ “ಈ ದೀಪಾವಳಿ ಹಬ್ಬಕ್ಕೆ, ನಾವು ‘ದ ಗೇಮ್ ಆಫ್ ಲೈಫ್’ ಅನ್ನು ಪ್ರಾರಂಭಿಸಲು ಸಜ್ಜಾಗಿದ್ದೇವೆ, ಅಲ್ಲಿ ಆಗುತ್ತೆ ಎಲ್ಲರ ಕರ್ಮದ ಲೆಕ್ಕಾಚಾರ! ಈಗ ‘ಥ್ಯಾಂಕ್ ಗಾಡ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ” ಎಂದು ಬರೆದುಕೊಂಡಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now