ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮನೆ ಕೆಲಸದ ಮಹಿಳೆಯ ಮಗನ ಮದುವೆಯಲ್ಲಿ ಪಾಲ್ಗೊಂಡ ನಟ ಚಿಯಾನ್ ವಿಕ್ರಂ
ನಟ ವಿಕ್ರಂ ಮನೆಯಲ್ಲಿ ಸಾಕಷ್ಟು ವರ್ಷಗಳಿಂದ ಒಲಿಮಾರನ್ ಹಾಗೂ ಆತನ ಪತ್ನಿ ಮೇರಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಒಲಿಮಾರನ್ ಮೃತಪಟ್ಟಿದ್ದು ಮೇರಿ ಅಲ್ಲಿಯೇ ಕೆಲಸ ಮುಂದುವರೆಸಿದ್ದಾರೆ. ಕೆಲವು ದಿನಗಳ ಹಿಂದೆ ಮೇರಿಯ ಮಗನ ಮದುವೆ ನೆರವೇರಿದ್ದು ವಿವಾಹ ಸಮಾರಂಭಕ್ಕೆ ವಿಕ್ರಂ ಆಗಮಿಸಿದ್ದರು.
ಬಿಳಿ ಶರ್ಟ್ ಹಾಗೂ ಪಂಚೆ ಧರಿಸಿ ಸರಳ ಉಡುಪಿನಲ್ಲಿ ವಿಕ್ರಂ ಮದುವೆಗೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ವಿಕ್ರಂ ಅಭಿಮಾನಿ ಸಂಘದ ಅಧ್ಯಕ್ಷರು ಭಾಗಿಯಾಗಿದ್ದರು. ಸದ್ಯ ವಿಕ್ರಂ ನಟನೆಯ ಕೋಬ್ರಾ ಸಿನಿಮಾ ಇತ್ತೀಚೆಗೆ ತೆರೆಕಂಡಿದ್ದು ಹೇಳಿಕೊಳ್ಳುವ ಮಟ್ಟಿಗಿನ ಸಕ್ಸಸ್ ಕಂಡಿಲ್ಲ. ಜೊತೆಗೆ ಇದೇ ಸೆಪ್ಟೆಂಬರ್ 30ರಂದು ಬಹುನಿರೀಕ್ಷಿತ ಪೊನ್ನಿಯಲ್ ಸೆಲ್ವನ್ ಸಿನಿಮಾ ಬಿಡುಗಡೆ ಆಗಲಿದೆ.
.@chiyaan today attended the wedding of Deepak with Varshini and blessed the young couple. Deepak is the son of Mary, a member of the housekeeping section of #ChiyaanVikram's home for over 40 years.pic.twitter.com/bpmGCopZRe
— Yuvraaj (@proyuvraaj) September 12, 2022
