• December 22, 2025

ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ: ತನಿಖೆಗೆ ಸಹಕರಿಸದೆ ಆಸ್ಪತ್ರೆ ಸುತ್ತಾಟ

ಚಿತ್ರದುರ್ಗ: ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾದಿಪತಿ ಮುರುಘಾ ಶ್ರೀಗಳನ್ನು ಪೋಕ್ಸೋ ಕೇಸ್ ನಲ್ಲಿ ಶುಕ್ರವಾರದಿಂದ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶ್ರೀಗಳನ್ನು ವಿಚಾರಣೆಗೆ ಒಳಪಡಿಸಿದ್ದು ಶ್ರೀಮಗಳು ಮಾತ್ರ ವಿಚಾರಣೆಗೆ ಸಹಕರಿಸದೆ ಆರೋಗ್ಯದ ನೆಪದಲ್ಲಿ ಆಸ್ಪತ್ರೆ ಸುತ್ತಾಟ ನಡೆಸುತ್ತಿದ್ದಾರೆ. ಮುರುಘ ಶ್ರೀಗಳ ಮೇಲಿನ ಆರೋಪಿಗಳನ್ನು ತಳ್ಳಿ ಹಾಕಿರುವ ಶ್ರೀಗಳು,ನನ್ನ ವಿರುದ್ಧ ಷಡ್ಯಂತ್ರ್ಯ ನಡೆದಿದೆ. ಬೇಕೆಂದು ಈ ಪ್ರಕರಣದಲ್ಲಿ ನನನ್ನು ಸಿಲುಕಿಸಿದ್ದಾರೆ ಎಂದು ಶ್ರೀಗಳು ಆರೋಪಿಸಿದ್ದಾರೆ. ವಿಚಾರಣೆ ಮಧ್ಯೆದಲ್ಲೇ ಶ್ರೀಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದ ಪೊಲೀಸರು ಇಸಿಜಿ, ಎಕೋ ಸೇರಿ ಹಲವು ಟೆಸ್ಟ್ ಮಾಡಿಸಿದ್ದಾರೆ. ಜೊತೆಗೆ ಶ್ರೀಗಳ ಉಗುರು, ಕೂದಲು ಸಂಗ್ರಹಿಸಿದ್ದು ಪುರುಷತ್ವ ಪರೀಕ್ಷೆ ಕೂಡ ನಡೆಸಿದ್ದಾರೆ. ಪುರುಷತ್ವ ಪರೀಕ್ಷೆ ಫಲಿತಾಂಶ ಪಾಸಿಟೀವ್ ಬಂದಿದೆ. ಗುರುವಾರ ರಾತ್ರೋರಾತ್ರಿ ಬಂಧನಕ್ಕೊಳಗಾದ ಶ್ರೀಗಳು ಶುಕ್ರವಾರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಶ್ರೀಗಳ ಜಾಮೀನು ಅರ್ಜಿ ರದ್ದಾದ ಹಿನ್ನೆಲೆಯಲ್ಲಿ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಪೊಲೀಸ್ ಕಸ್ಟಡಿ ಅವಧಿ ಮುಗಿಯೋವರೆಗೂ ಜಾಮೀನು ಅರ್ಜಿ ಸಲ್ಲಿಸದಂತೆ ಕೋರ್ಟ್ ಸೂಚಿಸಿದೆ. ಘಟನೆಯ ಬಳಿಕ ಮಠದಲ್ಲಿ ಮೌನ ಮನೆ ಮಾಡಿದೆ. ಭಾನುವಾರ ಬಂತೆಂದರೆ ಭಕ್ತರಿಂದ ತುಂಬಿ ತುಳುಕುತ್ತಿದ್ದ ಮುರುಘಾ ಮಠದಲ್ಲಿ ಇಂದು ಜನವೇ ಇಲ್ಲದಂತಾಗಿದೆ. ಮಠದ ಸಿಬ್ಬಂದಿ ಹೊರತು ಪಡಿಸಿ ಯಾರು ಕೂಡ ಮಠದತ್ತ ಮುಖ ಹಾಕುತ್ತಿಲ್ಲ. ಮುರುಘಾ ಮಠದಲ್ಲಿ ಪ್ರತಿತಿಂಗಳು ಕಲ್ಯಾಣೋತ್ಸವ ನಡೆಯುತ್ತಿತ್ತು. ಆದರೆ ಈ ಬಾರಿ 9 ಜೋಡಿಗಳು ಕಲ್ಯಾಣೋತ್ಸವಕ್ಕೆ ನೊಂದಣಿ ಮಾಡಿಕೊಂಡಿದ್ದು ಅದರಲ್ಲಿ ಎರಡು ಜೋಡಿಗಳು ಮದುವೆ ರದ್ದು ಮಾಡಿಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now