ದಕ್ಷಿಣ ಭಾರತದ ಖ್ಯಾತ ನಟ ಸುಮನ್ ಕುರಿತಾಗಿ ದುಷ್ಕರ್ಮಿಗಳು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯಲ್ಲಿ ಹರಿ ಬಿಟ್ಟಿದ್ದರು. ವಿಷಯ ತಿಳಿದ ಅಭಿಮಾನಿಗಳು ಕಂಗಾಲಾಗಿದ್ದು ಇದೀಗ ಸ್ವತಃ ನಟ ಸುಮನ್ ಸ್ಪಷ್ಟನೆ ನೀಡಿದ್ದಾರೆ. ಕಳೆದ ನಾಲ್ಕು ದಶಗಳಿಂದ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸುಮನ್ ಕನ್ನಡದಲ್ಲೂ ನಟಿಸಿದ್ದಾರೆ. ಯುಟ್ಯೂಬ್ ಚಾನಲ್ ಒಂದು ಸುಮನ್ ಮೃತಪಟ್ಟಿದ್ದಾರೆ ಎಂದು ಸುದ್ದಿ ಹರಿಬಿಟ್ಟಿತ್ತು. ಇದನ್ನು ನೋಡಿದ ಅಭಿಮಾನಿಗಳು ಕಂಗಾಲಾಗಿದ್ದರು. ವಿಷಯ ತಿಳಿದ ಸುಮನ್ ಸ್ಪಷ್ಟನೆ ನೀಡಿದ್ದು ಜೊತೆಗೆ ಕೆಲವು ಯೂಟ್ಯೂಬ್ ಚಾನಲ್ ಗಳ ವಿರುದ್ಧ ಕಾನೂನು […]readmore
ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಪಕರಾದ ವಿಘ್ನೇಶ್ವರ್ ಯು ಮತ್ತು ವಿಜಯ್ ಗೌಡ ಬಿದರಹಳ್ಳಿ ಅತೀವ ಸಿನಿಮೋತ್ಸಾಹದಿಂದ ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿರುವ ಹಿರಣ್ಯ ಸಿನಿಮಾದ ಹೊಸ ಪೋಸ್ಟರ್ ಗಣೇಶ್ ಚತುರ್ಥಿಗೆ ಬಿಡುಗಡೆಯಾಗಿದೆ. ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಾಯಕನಾಗಿ ಮಾಸ್ ಅವತಾರದಲ್ಲಿ ಧಗಧಗಿಸಿದ್ದು, ಬಾಯಲ್ಲಿ ಸಿಗರೇಟ್ ಹಿಡಿದು, ಪಕ್ಕ ರಾ ಲುಕ್ ನಲ್ಲಿ ಮಿಂಚಿದ್ದಾರೆ. ಬಿಚ್ಚುಗತ್ತಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಾಜವರ್ಧನ್ ಮೊದಲ ಹೆಜ್ಜೆಯಲ್ಲಿಯೇ ಗೆಲುವು ತಮ್ಮದಾಗಿಸಿಕೊಂಡಿದ್ದರು. ಸದ್ಯ ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಬ್ಯುಸಿಯಾಗಿದ್ದು, […]readmore
ನಟಿ ಹಾಗೂ ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಸಾವಿನ ಕುರಿತಾಗಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಿದೆ. ಮೊದಲು ಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು. ಆ ಬಳಿಕ ಸೋನಾಲಿ ಸಹೋದರರು ನೋಡಿದ ಮೇರೆಗೆ ಕೇಸು ದಾಖಲಿಸಿಕೊಂಡು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಸೋನಾಲಿ ಅವರದ್ದು ಹೃದಯಾಘಾತವಲ್ಲ, ಆಕೆಗೆ ಬಲವಂತವಾಗಿ ಡ್ರಗ್ಸ್ ನೀಡಿ ಕೊಲೆ ಮಾಡಲಾಗಿದೆ ಎನ್ನುವುದು ತನಿಖೆಯಿಂದ ಬಯಲಾಗಿತ್ತು. ಇದೀಗ ಅವರ ಮರಣೋತ್ತ ಪರೀಕ್ಷಾ ವರದಿ ಬಂದಿದ್ದು, ನಟಿಯ ದೇಹದ ಮೇಲೆ ಬರೋಬ್ಬರಿ 46 ಗಾಯದ ಗುರುತುಗಳನ್ನು ಪತ್ತೆ […]readmore
ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ನಟನೆಯ ಖೆಯೊಸ್ ಸಿನಿಮಾಗೆ ನಟ ಡಾಲಿ ಧನಂಜಯ್ ಸಾಥ್ ನೀಡಿದ್ದಾರೆ. ಖೆಯೊಸ್ ಸಿನಿಮಾದ ಫಸ್ಟ್ ಲುಕ್ ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಧನಂಜಯ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈಗಾಗ್ಲೆ ಅಕ್ಷಿತ್ ಶಶಿಕುಮಾರ್ ಓ ಮೈ ಲವ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ, ಸದ್ಯ ಬಿಡುಗಡೆ ಆಗಿರುವ ಖೆಯೊಸ್ ಸಿನಿಮಾದ ಪೋಸ್ಟರ್ ನಲ್ಲಿ ಅಕ್ಷಿತ್ ಸಖತ್ ರಗಡ್ ಲುಕ್ […]readmore
ಗಾಂಧಿನಗರದಲ್ಲಿ ಗಾಸಿಪ್ ಗಳೇನು ಹೊಸದಲ್ಲ. ನಿತ್ಯ ಒಂದಲ್ಲ ಒಂದು ಗಾಸಿಪ್ ಗಳು ಹರಡಿ ಸಂಜೆಗೆಲ್ಲಾ ತಣ್ಣಗಾಗಿ ಹೋಗುತ್ತವೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಕುರಿತಾಗಿ ಗಾಳಿ ಸುದ್ದಿಯೊಂದು ಹರಡಿದ್ದು ಇದೀಗ ಸೈಲೆಂಟ್ ಆಗಿದೆ. ಅಯೋದ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಸಾಕಷ್ಟು ಮಂದಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಅಂತೆಯೇ ಇತ್ತೀಚೆಗೆ ಯಶ್ 50 ಕೋಟಿ ದೇಣಿಗೆ ನೀಡಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದ್ರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ.ಬರೀ ಅಂತೆಕಂತೆಗಳಷ್ಟೇ ಸುದ್ದಿಯಾಗಿತ್ತು. ಇದು ಸುಳ್ಳು ಸುದ್ದಿ […]readmore
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ 10 ತಿಂಗಳು ಕಳೆದಿದೆ. ಇಂದಿಗೂ ಅಪ್ಪು ಅವರನ್ನು ನೆನಪು ಮಾಡಿಕೊಂಡರೆ ಅಭಿಮಾನಿಗಳು ಭಾವುಕರಾಗುತ್ತಾರೆ. ಸದ್ಯ ಪುನೀತ್ ನಟನೆಯ ಲಕ್ಕಿ ಮ್ಯಾನ್ ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಅದಕ್ಕೂ ಮೊದಲು ಚಿತ್ರದ ಟ್ರೈಲರ್ ನಲ್ಲಿ ಅಪ್ಪು ಅವರನ್ನು ನೋಡಿ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಇತ್ತೀಚೆಗಷ್ಟೇ ಲಕ್ಕಿಮ್ಯಾನ್ ಸಿನಿಮಾದ ಸುದ್ದಿಗೋಷ್ಠಿ ಸಾಕಷ್ಟು ಅದ್ದೂರಿಯಾಗಿ ನೆರವೇರಿತ್ತು. ಈ ವೇಳೆ ಸುದೀಪ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದರು. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ […]readmore
ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದಲ್ಲಿ ರಾರಾ ರಕ್ಕಮ್ಮ ಹಾಡಿಗೆ ಸೊಂಟ ಬಳುಕಿಸಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ದೆಹಲಿಯ ಪಟಿಯಾಲ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಬೆಂಗಳೂರು ಮೂಲಕ ವಂಚಕ ಸುಕೇಶ್ ಚಂದ್ರಶೇಖರ್ ನಿಂದ ಭಾರೀ ಮೊತ್ತದ ಉಡುಗೊರೆ ಪಡೆದ ಕಾರಣಕ್ಕೆ ಇಡಿ ಜಾಕ್ವೆಲಿನ್ ಮೇಲೂ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ಉದ್ಯಮಿಯ ಪತ್ನಿಯಿಂದ ಸುಕೇಶ್ ಚಂದ್ರಶೇಖರ್ 200 ಕೋಟಿ ಪಡೆದುಕೊಂಡಿದ್ದ. ಈ ದುಡ್ಡಿನಲ್ಲಿ ಜಾಕ್ವೆಲಿನ್ ಗೆ ದುಭಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದ. […]readmore
ವಿಕ್ಟರಿ, ಅಧ್ಯಕ್ಷ, ಮುಕುಂದ ಮುರಾರಿ ಸೇರಿದಂತೆ ಕನ್ನಡದ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ನಿರ್ದೇಶಕ ನಂದ ಕಿಶೋರ್ ಸದ್ಯ ರಾಣಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ನಂದಕಿಶೋರ್ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ಸಿನಿಮಾ ಮಾಡಲಿದ್ದಾರೆ. ನಂದಕಿಶೋರ್ ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಸ್ವತಃ ಮೋಹನ್ ಲಾಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಂದಕಿಶೋರ್ ಸಿನಿಮಾದಲ್ಲಿ ನಟಿಸಲು ಎಕ್ಸೈಟ್ ಆಗಿದ್ದೇನೆ ಎಂದು ಬರೆದಿದ್ದಾರೆ. ನಂದಕಿಶೋರ್ ಹಾಗೂ ಮೋಹನ್ ಲಾಲ್ ಕಾಂಬಿನೇಷನ್ ನ ಸಿನಿಮಾಗೆ ವೃಷಭ ಎಂದು […]readmore
ಸಮಂತಾ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರವಾದ ‘ಯಶೋದಾದ ಟೀಸರ್ ಸೆ. 09ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.ಇದಕ್ಕೂ ಮುನ್ನ, ಬಿಡುಗಡೆಯಾದ ಚಿತ್ರದ ಸ್ನೀಕ್ ಪೀಕ್, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಈಗ ನಿರ್ದೇಶಕರಾದ ಹರಿ-ಹರೀಶ್ ಈ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟು ಎದೆಬಡಿತ ಹೆಚ್ಚಿಸುವುದಕ್ಕೆ ಸಿದ್ಧರಾಗಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆ ಘೋಷಣೆ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಪೋಸ್ಟರ್ ವೀಕ್ಷಕರ ಗಮನಸೆಳೆದಿದೆ. ‘ಯಶೋದಾ’ ಚಿತ್ರವು ಮೂಡಿಬಂದಿರುವ ಬಗ್ಗೆ ಖುಷಿಯಾಗಿರುವ ಶ್ರೀದೇವಿ ಮೂವೀಸ್ನ ನಿರ್ಮಾಪಕ ಶಿವಲೆಂಕ ಕೃಷ್ಣಪ್ರಸಾದ್, ಈ […]readmore
ಪುರಿ ಜಗನ್ನಾಥ್ ನಿರ್ದೇಶನದ, ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ಸಿನಿಮಾ ಲೈಗರ್ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಾಗಿದೆ. ಸಿನಿಮಾ ವಿಮರ್ಶೆಯಲ್ಲಿ ಸೋಲು ಕಂಡ ಬೆನ್ನಲ್ಲೇ ಕಲೆಕ್ಷನ್ ನಲ್ಲೂ ಡಲ್ ಹೊಡೆದಿದೆ. ಅಂದ ಲೈಗರ್ ಬಾಕ್ಸರ್ ಕಥೆಯಾಧಾರಿತ ಸಿನಿಮಾವಾಗಿದ್ದು ಚಿತ್ರದ ಕೊನೆಯಲ್ಲಿ ಮೈಕ್ ಟೈಸನ್ ಎಂಟ್ರಿಕೊಡುತ್ತಾರೆ. ಇದಕ್ಕಾಗಿ ಟೈಸನ್ ಪಡೆದುಕೊಂಡಿರುವ ಸಂಭಾವನೆ ಹುಬ್ಬೇರಿಸುವಂತೆ ಮಾಡಿದೆ. ಬಾಕ್ಸಿಂಗ್ ಲೋಕದಲ್ಲಿ ಟೈಸನ್ ದೊಡ್ಡ ಮಟದಲ್ಲಿ ಹೆಸರು ಮಾಡಿದ್ದಾರೆ. ಜೊತೆಗೆ ಲೈಗರ್ ಕೂಡ ಬಾಕ್ಸಿಂಗ್ ಕಥೆಯಾಧಾರಿಸಿ ಸಿನಿಮಾ ಆಗಿರೋ ಕಾರಣಕ್ಕೆ ರಿಯಲ್ […]readmore
