ದುನಿಯಾ, ಕಡ್ಡಿಪುಡಿ, ದೊಡ್ಮನೆ ಹುಡುಗ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ದುನಿಯಾ ಸೂರಿ ಸೋಷಿಯಲ್ ಮೀಡಿಯಾದಿಂದ ಸದಾ ದೂರ. ಸೂರಿ ಇನ್ ಸ್ಟಾಗ್ರಾಂ ಖಾತೆ ಹೊಂದಿದ್ದರು ಹೆಚ್ಚು ಫೋಸ್ಟ್ ಗಳನ್ನು ಹಂಚಿಕೊಳ್ಳುವುದಿಲ್ಲ. ಇದೀಗ ದುನಿಯಾ ಸೂರಿ ಹೆಸರಿನಲ್ಲಿ ಸಾಕಷ್ಟು ಸೋಷಿಯಲ್ ಮೀಡಿಯಾ ಖಾತೆಗಳು ಓಪನ್ ಆಗಿದ್ದು ಈ ಬಗ್ಗೆ ಸೂರಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಕಿಡಿಗೇಡಿಗಳು ದುನಿಯಾ ಸೂರಿ ಹೆಸರಿನಲ್ಲಿ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆ ತೆರೆದಿದ್ದಾರಂತೆ. ಅವುಗಳ ಮೂಲಕ ದಿನವೂ […]readmore
ಶಿವರಾಜ್ಕುಮಾರ್ ಅವರ ವೃತ್ತಿಜೀವನದ ಅತಿ ಮುಖ್ಯ ಸಿನಿಮಾಗಳಲ್ಲಿ ‘ಜೋಗಿ’ ಚಿತ್ರಕ್ಕೆ ಪ್ರಮುಖ ಸ್ಥಾನವಿದೆ. ಈ ಸಿನಿಮಾ ನೋಡಿ ಡಾ. ರಾಜ್ಕುಮಾರ್, ರಜನಿಕಾಂತ್ ಮುಂತಾದ ದಿಗ್ಗಜರು ಮೆಚ್ಚಿಕೊಂಡಿದ್ದರು. ಜೋಗಿ ಅಂದಾಕ್ಷಣ…..ತಾಯಿ-ಮಗನ ಮಮತೆ, ರೌಡಿಸಂ, ಸೂಪರ್ ಹಿಟ್ ಗೀತೆಗಳು..ಜೋಗಿ ಅಲಿಯಾಸ್ ಮಾದೇಶ, ಬಿಡ್ಡ, ಪಟ್ರೆ, ಕೋಟೆ ಸಿದ್ದ, ಪುಂಗ ಪಾತ್ರಗಳು ಥಟ್ ಅಂತ ನೆನಪಾಗುತ್ತೆ. ಅದು 2005ರ ಆಗಸ್ಟ್ ತಿಂಗಳು. ಇಡೀ ಕರ್ನಾಟಕವೇ ‘ಜೋಗಿ’ ಸಿನಿಮಾಗಾಗಿ ಕಾಯುತ್ತಿತ್ತು. ಅದಾಗಲೇ ಬಿಡುಗಡೆ ಆಗಿದ್ದ ಹಾಡುಗಳು ಧೂಳೆಬ್ಬಿಸಿದ್ದವು. ಶಿವರಾಜ್ಕುಮಾರ್ ಅವರ ವಿಭಿನ್ನ ಗೆಟಪ್ಗಳು ಪೋಸ್ಟರ್ಗಳಲ್ಲಿ […]readmore
ಬಾಲನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಬಳಿಕ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ನಟಿ ಅಮೂಲ್ಯ ಇದೀಗ ಮುದ್ದು ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಕೃಷ್ಣ ಜನ್ಮಷ್ಟಮಿಯ ಪ್ರಯುಕ್ತ ಮೊದಲ ಭಾರಿಗೆ ಅಮೂಲ್ಯ ಮುದ್ದು ಮಕ್ಕಳ ಮುಖವನ್ನು ತೋರಿಸಿದ್ದಾರೆ. ಸಿನಿಮಾ ರಂಗದಿಂದ ದೂರವಿದ್ದು ನಟಿ ಅಮೂಲ್ಯ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮಗು ಹುಟ್ಟಿದ ಕೆಲ ದಿನಗಳ ಬಳಿಕ ಮಕ್ಕಳ ಬೆರಳುಗಳನ್ನ ಮಾತ್ರವೇ ತೋರಿಸಿದ್ದ ಅಮೂಲ್ಯ ಇದೀಗ ಅವಳಿ ಮಕ್ಕಳ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. […]readmore
ಝೀ ಕನ್ನಡದ ಖ್ಯಾತ ಧಾರವಾಹಿ ಜೊತೆ ಜೊತೆಯಲ್ಲಿ ತಂಡದಿಂದ ನಟ ಅನಿರುದ್ಧ್ ಅವರನ್ನು ಕೈ ಬಿಡಲಾಗಿದೆ. ಅನಿರುದ್ಧ್ ಹಾಗೂ ಧಾರವಾಹಿ ತಂಡದಲ್ಲಿ ಮನಸ್ತಾಪ ಶುರುವಾಗಿದ್ದು ಇಂದು ಅನಿರುದ್ಧ್ ಇಲ್ಲದೆ ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ಅನಿರುದ್ಧ್ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಹೊಸ ಕಲಾವಿದರನ್ನು ಧಾರವಾಹಿ ತಂಡ ಹುಡುಕುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜೊತೆ ಜೊತೆಯಲಿ ಧಾರವಾಹಿಯ ನಿರ್ದೇಶಕ ಹಾಗೂ ನಿರ್ಮಾಪಕ ಆರೂರು ಜಗದೀಶ್, ‘ಜೊತೆ ಜೊತೆಯಲಿ ಧಾರಾವಾಹಿಗೆ ಕಥೆಯೇ ಹೀರೋ ಹಾಗೂ ಹಿರೋಯಿನ್. ಯಾರೇ ಇರಲಿ, ಇರದೇ ಇರಲಿ […]readmore
ಟಾಲಿವುಡ್ ನಟ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ಲೈಗರ್ ಸಿನಿಮಾ ಬಿಡುಗಡೆಗೆ ಕೆಲವೇ ಕೆಲವು ದಿನಗಳು ಮಾತ್ರ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಂದು ಸಿನಿಮಾದ ಪ್ರಚಾರದ ಸಲುವಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿದೆ. ಈ ವೇಳೆ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ಪುನೀತ್ ರಾಜ್ ಕುಮಾರ್ ಪುಣ್ಯ ಭೂಮಿಗೆ ಭೇಟಿ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನರಾಗಿ ಹಲವು ತಿಂಗಳುಗಳೇ ಕಳೆದಿದೆ. ಆದರೆ ಅಭಿಮಾನಿಗಳ ಮನಸ್ಸಲ್ಲಿ […]readmore
ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಹಿರಿಯ ಮಗ ಮನೋರಂಜನ್ ಮದುವೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರವಿಚಂದ್ರನ್ ಮಗನ ಮದುವೆಗೆ ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿಗಳನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ರವಿಚಂದ್ರನ್ ಕುಟುಂಬ ಸಮೇತ ಮದುವೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದೇ ಆಗಸ್ಟ್ 20 ಹಾಗೂ 21 ರಂದು ಬೆಂಗಳೂರಿನಲ್ಲಿ ಮನೋರಂಜನ್ ಮತ್ತು ಸಂಗೀತಾ ವಿವಾಹ ನಡೆಯಲಿದೆ. ಈಗಾಗ್ಲೆ ಸಿನಿಮಾ ರಂಗದವರು ಹಾಗೂ ರಾಜಕೀಯ ಗಣ್ಯರಿಗೆ ರವಿಚಂದ್ರನ್ ಆಹ್ವಾನ ನೀಡಿದ್ದಾರೆ. […]readmore
ಕಿರುತೆರೆಯಲ್ಲಿ ಸಾಕಷ್ಟು ಶೋ ಮತ್ತು ಸೀರಿಯಲ್ ಮೂಲಕ ಸದ್ದು ಮಾಡಿರುವ ಕಾನಿಷ್ಕಾ ಸೋನಿ ಕೂಡ ಇದೇ ರೀತಿಯ ಮದುವೆಯಿಂದ ಸಿಕ್ಕಾಪಟ್ಟೆ ಆಗ್ತಿದ್ದಾರೆ. ತನ್ನನ್ನು ತಾನೇ ಮದುವೆಯಾಗಿರುವ ನಟಿ ಕಾನಿಷ್ಕಾ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. `ದಿಯಾ ಔರ್ ಬಾತಿ ಹಮ್’ ಧಾರವಾಹಿ ಖ್ಯಾತಿಯ ನಟಿ ಕಾನಿಷ್ಕಾ ಸೋನಿ ಇತ್ತೀಚಿನ ದಿನಗಳಲ್ಲಿ ತಮ್ಮ ಖಾಸಗಿ ವಿಷಯಗಳಿಗೆ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಆಗಾಗ ತಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ […]readmore
ವಿಜಯ್ ದೇವರಕೊಂಡ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಸದ್ಯದಲ್ಲೇ ತೆರೆಗೆ ಬರಲಿದೆ. ಸಿನಿಮಾವನ್ನು ಜನರಿಗೆ ತಲುಪಿಸಲು ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಹಾಗೂ ಇಡೀ ಚಿತ್ರತಂಡ ಭಾರತದಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇನ್ನೆನ್ನೂ ಸಿನಿಮಾ ರಿಲೀಸ್ ಗೆ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಈ ಮಧ್ಯೆ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ದೊಡ್ಡ ಶಾಕ್ ನೀಡಿದೆ. ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರದಲ್ಲಿರು ಅಶ್ಲೀಲ ಭಾಷೆ ಕಂಡು ದಂಗಾಗಿದ್ದು ಬದಲಾವಣೆ ಮಾಡುವಂತೆ ಸೂಚನೆ […]readmore
ಮುಂಬೈನಲ್ಲಿ ಜಿಮ್ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಖ್ಯಾನ ಹಾಸ್ಯನಟ ರಾಜು ಶ್ರೀವಾತ್ಸವ್ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ವೆಂಟಿಲೇಟರ್ ನಲ್ಲಿ ರಾಜು ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ರಾಜು ಅವರನ್ನು ಉಳಿಸಿಕೊಳ್ಳುವ ಸರ್ವ ಪ್ರಯುತ್ನಗಳನ್ನು ವೈದ್ಯರು ಮಾಡುತ್ತಿದ್ದಾರೆ. ಕಳೆದ ಆಗಸ್ಟ್ 10ರಂದು ಜಿಮ್ ಮಾಡುತ್ತಿದ್ದ ವೇಳೆ ರಾಜು ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ರಾಜು ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು […]readmore
ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿಗಳಲ್ಲೊಂದು ಝಿ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ. ಧಾರವಾಹಿಯಲ್ಲಿ ನಟ ಅನಿರುದ್ಧ್ ಆರ್ಯವರ್ಧನ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು ವೀಕ್ಷಕರಿಂದ ಈ ಧಾರವಾಹಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ರೆ ಇದೀಗ ಧಾರವಾಹಿ ತಂಡದಲ್ಲಿ ಕಿರಿಕ್ ಶುರುವಾಗಿದ್ದು ನಟ ಅನಿರುದ್ಧ್ ಜೊತೆ ತಂತ್ರಜ್ಞರ ತಂಡ ಮುನಿಸಿಕೊಂಡಿದೆ ಎನ್ನಲಾಗುತ್ತಿದೆ. ಈ ಹಿಂದೆ ಧಾರವಾಹಿಯ ನಟಿ ಮೇಘಾ ಶೆಟ್ಟಿ ತಂಡದ ಜೊತೆ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಅವರು ಧಾರವಾಹಿಯಿಂದ ಹೊರ ನಡೆಯಲಿದ್ದು ಆ ಜಾಗಕ್ಕೆ ಮತ್ತೊಬ್ಬ ನಟಿ ಎಂಟ್ರಿಕೊಡ್ತಾರೆ […]readmore
