ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೊನೆಯ ಕ್ಷಣದಲ್ಲಿ ಬ್ರಹ್ಮಾಸ್ತ್ರ ಚಿತ್ರದ ಪ್ರೀರಿಲೀಸ್ ಈವೆಂಟ್ ರದ್ದು: ಕಾರಣವೇನು ಗೊತ್ತಾ?
ಕಾರ್ಯಕ್ರಮ ನೋಡಬೇಕು, ಆಲಿಯಾ ಭಟ್, ರಣಬೀರ್, ಜೂನಿಯರ್ ಎನ್ ಟಿ ಆರ್ ನೋಡಬೇಕು ಎಂದು ಸಾಕಷ್ಟು ಅಭೀಮಾನಿಗಳು ಆಗಮಿಸಿದ್ದರು. ನೆಚ್ಚಿನ ನಟ ನಟಿಯನ್ನು ನೋಡಬೇಕು ಎಂದು ಕಾದು ಕೂತಿದ್ದ ಅಭಿಮಾನಿಗಳು ಕೊನೆಗೆ ಸೈಲೆಂಟ್ ಆಗಿ ಮನೆ ಕಡೆ ಹೆಜ್ಜೆ ಹಾಕಿದ್ದಾರೆ.
ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಜೂನಿಯರ್ ಎನ್ ಟಿ ಆರ್, ಆಲಿಯಾ ಭಟ್, ರಣ್ಬೀರ್ ಕಪೂರ್, ನಾಗಾರ್ಜುನ್, ಮೌನಿರಾಯ್, ನಿರ್ದೇಶಕ ರಾಜಮೌಳಿ, ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಚಿತ್ರತಂಡ Park Hyatt ಹೋಟೆಲ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಕಾರ್ಯಕ್ರಮ ರದ್ದಾಗಿದ್ದರ ಬಗ್ಗೆ ಮತ್ತು ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಮಾತನಾಡಿದರು.
ಹೆಚ್ಚಿನ ಭದ್ರತಾ ವ್ಯವಸ್ಥೆ ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿತು. ಗಣೇಶೋತ್ಸವ, ರಾಜಕೀಯ ಕಾರ್ಯಕ್ರಮವೊಂದರ ಸಲುವಾಗಿ ಭದ್ರತೆಗೆ ಪೊಲೀಸರು ನಿಯೋಜನೆಗೊಂಡಿದ್ದರು. ಹಾಗಾಗಿ ನಮಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಪೂರೈಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದರು. ಹೀಗಾಗಿ ನಾವು ಅವರಿಗೆ ಸಹಕಾರ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಪ್ರೀರಿಲೀಸ್ ಈವೆಂಟ್ ಕ್ಯಾನ್ಸಲ್ ಆಗಿದ್ದು ಈ ಸಣ್ಣ ವೇದಿಕೆಯಿಂದ ನಿಮ್ಮೊಂದಿಗೆ ಮಾತನಾಡುತ್ತಿದ್ದೇವೆ ಎಂದು ಜೂನಿಯರ್ ಎನ್ ಟಿ ಆರ್ ಹೇಳಿದರು.
ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಮಾಡಿದ್ದರು. ತಂಡವು ತುಂಬಾ ಶ್ರಮಿಸಿತ್ತು. ಆದರೆ ಅದು ಅಂದುಕೊಂಡಂತೆ ಆಗಲಿಲ್ಲ. ಕರಣ್ ಜೋಹರ್ ಸರಿಯಾಗಿ ಗಣೇಶ ಪೂಜೆ ಮಾಡುತ್ತಿಲ್ಲ, ಹಾಗಾಗಿ ಹೀಗಾಯಿತೇನೋ ಎಂದು ನಿರ್ದೇಶಕ ರಾಜಮೌಳಿ ತಮಾಷೆ ಮಾಡಿದರು.
ಬ್ರಹ್ಮಾಸ್ತ್ರ ಸಿನಿಮಾ ಇದೇ ಸೆಪ್ಟೆಂಬರ್ 9ರಂದು ಹಿಂದಿ,ತಮಿಳು, ತೆಲುಗು,ಕನ್ನಡ,ಮಲಯಾಳಂ ಸೇರಿ ಒಟ್ಟು ಐದು ಭಾಷೆಯಲ್ಲಿ ತೆರೆಗೆ ಬರ್ತಿದೆ. ಸದ್ಯ ಬ್ರಹ್ಮಾಸ್ತ್ರಕ್ಕೂ ಬಾಯ್ಕಾಟ್ ಬಿಸಿ ತಾಗಿದ್ದು ಸಿನಿಮಾ ಅದೆಷ್ಟರ ಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೊದನ್ನು ಕಾದು ನೋಡಬೇಕಿದೆ.
