ಲೈಂಗಿಕ ದೌರ್ಜನ್ಯ ಆರೋಪ: ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಮುರುಘಾ ಶ್ರೀ

ಚಿತ್ರದುರ್ಗ: ಹಾಸ್ಟೇಲ್ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರು ಬಂಧನ ಭೀತಿ ಎದುರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದುರ್ಗದ ಎರಡನೇ ಸೆಷನ್ಸ್ ಕೋರ್ಟ್ ನಲ್ಲಿ ಮುರುಘಾ ಶ್ರೀಗಳ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 1ಕ್ಕೆ ನಿಗದಿಪಡಿಸಿದೆ. ಮುರುಘಾ ಮಠದ ಡಾ.ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯ್ದೆ ಅಡಿ […]readmore

ಜಂಕಾರ್ ಮ್ಯೂಸಿಕ್ ನಿಂದ ಬಿಡುಗಡೆಯಾಯ್ತು ವಿನಾಯಕ ಚೌತಿಗೆ ವಿಶೇಷ ಹಾಡು.

ಹಲವು ವರ್ಷಗಳಿಂದ ಸಂಗೀತ ಕ್ಷೇತ್ರಕ್ಕೆ ತನ್ನದೇ‌ ಆದ ಕೊಡುಗೆ ನೀಡುತ್ತಿರುವ ಜಂಕಾರ್ ಮ್ಯೂಸಿಕ್ ಸಂಸ್ಥೆ ಈ ಬಾರಿ ವಿನಾಯಕ ಚೌತಿಗೆ “ಗಣೇಶ ದಿ ಪವರ್” ಎಂಬ ವಿಶಿಷ್ಟ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದೆ‌. ಇದು ಮಾಮೂಲಿ ತರಹದ  ಭಕ್ತಿಗೀತೆಗಳ ಹಾಗಿಲ್ಲ. ಈಗಿನ ಯುವಪೀಳಿಗೆಗೆ ಹಿಡಿಸುವ ಹಾಗೆ ಈ ಹಾಡು ಇದೆ. ಟ್ರಾನ್ಸ್ ಮ್ಯೂಸಿಕ್ ಶೈಲಿಯಲ್ಲಿ ವಿನಾಯಕನ ಕುರಿತ ಈ ಸುಮಧುರ ವಿಡಿಯೋ ಹಾಡು ಮೂಡಿಬಂದಿದೆ. ನೂರಾರು ಗಣಪತಿ ಮೂರ್ತಿಗಳ ಸನ್ನಿಧಿಯಲ್ಲಿ ಈ ಹಾಡು ಚಿತ್ರೀಕರಣವಾಗಿದೆ. ಜೆಮ್ ಶಿವು […]readmore

‘ಕೋಬ್ರಾ’ ಸಿನಿಮಾದ ಪ್ರಮೋಷನ್ ಗೆ ಬೆಂಗಳೂರಿಗೆ ಬಂದ ಚಿಯಾನ್ ವಿಕ್ರಂ: ಸ್ಟಾರ್ ನಟನನ್ನು

ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೋಬ್ರಾ ರಿಲೀಸ್ ಗೆ ಸಜ್ಜಾಗಿದೆ. ಇದೇ 31ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸ್ತಿದ್ದು, ಈ ಹಿನ್ನೆಲೆ ಚಿತ್ರತಂಡ ಭರ್ಜರಿ ಪ್ರಮೋಷನ್ ನಡೆಸ್ತಿದೆ. ನಿನ್ನೆ ಕೇರಳದಲ್ಲಿ ಪ್ರಚಾರದ ಭರಾಟೆ ಮುಗಿಸಿದ ಕೋಬ್ರಾ ಬಳಗ ಇವತ್ತು ಬೆಂಗಳೂರಿಗೆ ಆಗಮಿಸಿತ್ತು. ಚಿತ್ರದ ನಾಯಕ ಚಿಯಾಮ್ ವಿಕ್ರಮ್ ಸೇರಿದಂತೆ ಮೂವರು ನಾಯಕರು ಮಾಧ್ಯಮದ ಮುಂದೆ ಹಾಜರಾಗಿ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ವಿಕ್ರಮ್ ನೋಡಲು ಅಭಿಮಾನಿಗಳ […]readmore

ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗುತ್ತಿದ್ದೆ ಯೋಗರಾಜ್ ಭಟ್ ನಿರ್ದೇಶನದ, ಶಿವಣ್ಣ, ಪ್ರಭುದೇವ ಕಾಂಬಿನೇಷನ್ ನ

ಕನ್ನಡ ಚಿತ್ರರಂಗದ ಪ್ರತಿಷ್ಠಿತ ಸಂಸ್ಥೆ ರಾಕ್‌ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ “ಪ್ರೊಡಕ್ಷನ್ ನಂ 47” ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಶಿವರಾಜಕುಮಾರ್, ಪ್ರಭುದೇವ, ತನಿಕೆಲ್ಲ ಭರಣಿ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಯಾಗಿದ್ದಾರೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ […]readmore

ವಿಜಯ್ ದೇವರಕೊಂಡಗೂ ಮೊದಲು ಲೈಗರ್ ಕಥೆಯನ್ನು ಬೇರೊಬ್ಬ ನಾಯಕನಿಗೆ ಹೇಳಿದ್ದ ಪೂರಿ ಜಗನ್ನಾಥ್

ವಿಜಯ್ ದೇವರಕೊಂಡ ಲೈಫ್ ನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ತೆರೆಗೆ ಬಂದಿರುವ ಲೈಗರ್ ಸಿನಿಮಾ ಅಂದುಕೊಂಡಷ್ಟು ಮಟ್ಟಿಗಿನ ಸಕ್ಸಸ್ ಕಂಡಿಲ್ಲ. ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾದಲ್ಲಿ ಬಾಕ್ಸರ್ ಕಥೆಯನ್ನು ಹೇಳಲಾಗಿದೆ. ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮಕಾಡೆ ಮಲಗಿದೆ. ಸಿನಿಮಾದ ಕುರಿತಾಗಿ ಅತ್ಯಂತ ಕೆಟ್ಟ ವಿಮರ್ಶೆಗಳು ಕೇಳಿ ಬಂದಿವೆ. ಲೈಗರ್ ಸಿನಿಮಾದಲ್ಲಿ ನಟಿಸೋಕೆ ವಿಜಯ್ ದೇವರಕೊಂಡಾಗೂ ಮೊದಲು ನಟ ಮಹೇಶ್ ಗೆ ಆಫರ್ ಮಾಡಲಾಗಿತ್ತಂತೆ. ಆದರೆ ಮಹೇಶ್ […]readmore

ಅನುಶ್ರೀ ಕೈಯಿಂದ ದುಬಾರಿ ಉಡುಗೊರೆ ಪಡೆದ ಕಾಫಿ ನಾಡು ಚಂದು

ತಮ್ಮದೇ ಶೈಲಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಕಾಫಿ ನಾಡು ಚಂದುಗೆ ದುಬಾರಿ ಉಡುಗೊರೆಯೊಂದು ಸಿಕ್ಕಿದೆ. ಜೀ ಕನ್ನಡದ ರಿಯಾಲಿಟಿ ಶೋಗೆ ಅತಿಥಿಯಾಗಿ ಬಂದಿದ್ದ ಕಾಫಿ ನಾಡು ಚಂದು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಖುಷಿ ಪಟ್ಟಿದ್ದಾರೆ.  ಬಳಿಕ ಕಾಫಿ ನಾಡು ಚಂದುಗೆ ಅನುಶ್ರೀ ಉಡುಗೊರೆಯೊಂದನ್ನು ನೀಡಿದ್ದಾರೆ. ಕಾಫಿ ನಾಡು ಚಂದು ಅವರಿಗೆ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕು ಎಂಬುದು ಬಹುದಿನಗಳ ಕನಸಾಗಿತ್ತು.ಇದೀಗ ಅದು ಡಿಕೆಡಿ ವೇದಿಕೆಯಲ್ಲಿ ನೆರವೇರಿದೆ. ಡಿಕೆಡಿ […]readmore

ಸಿನಿಮಾಗಾಗಿ ಮನೆ ಮಠ ಕಳೆದುಕೊಂಡ್ರು ಜನರ ಪ್ರೀತಿ ಗಳಿಸಿದೆ: ಹಿರಿಯ ನಟ ದ್ವಾರಕೀಶ್

ಸಿನಿಮಾಗಳಿಗಾಗಿ ನಾನು ಮನೆ, ಆಸ್ತಿಗಳನ್ನು ಕಳೆದುಕೊಂಡೆ. ಎಲ್ಲವನ್ನು ಮಾರಿ ಕಷ್ಟಗಳನ್ನು ಅನುಭವಿಸಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನಾನು ಮಾರಲಿಕ್ಕೇ ಆಗದೆ ಇರುವ ಮನೆಯನ್ನು ಮಂತ್ರಾಲಯದಲ್ಲಿ ಕಟ್ಟಿದ್ದೇನೆ. ಕಳೆದುಕೊಳ್ಳುವುದಕ್ಕೆ ಆಗದೆ ಇರುವಂತಹ ಆಸ್ತಿಯನ್ನು ಚಿತ್ರರಂಗದಲ್ಲಿ ಸಂಪಾದಿಸಿದ್ದೇನೆ’ ಎಂದು ಹೇಳುತ್ತ ಹಿರಿಯ ನಟ ದ್ವಾರಕೀಶ್‌ ಭಾವುಕರಾದರು. ದ್ವಾರಕೀಶ್ ಅವರಿಗೆ 80 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ದ್ವಾರಕೀಶ್, ನಾನು 20 ವರ್ಷಕ್ಕೆ ಚಿತ್ರರಂಗಕ್ಕೆ ಬಂದೆ. ಇದುವರೆಗೂ 300ಕ್ಕೂ […]readmore

ಗುಜರಾತ್ ನ ಖ್ಯಾತ ಗಾಯಕಿ ಶವ ಕಾರಿನಲ್ಲಿ ಪತ್ತೆ: ಕೊಲೆ ಶಂಕೆ

ವಲ್ಸಾದ್: ಗುಜರಾತ್​ನ ಖ್ಯಾತ ಗಾಯಕಿ ವೈಶಾಲಿ ಬಲ್ಸಾರಾ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ವಲ್ಸಾದ್ ಜಿಲ್ಲೆಯ ಪಾರ್ ನದಿಯ ದಡದಲ್ಲಿ ಸಾಕಷ್ಟು ಸಮಯದಿಂದ ಕಾರು ನಿಂತಲ್ಲೇ ನಿಂತಿತ್ತು. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಅದರಲ್ಲಿ ಗಾಯಕಿ ಶವ ಸಿಕ್ಕಿದೆ. ಗಾಯಕಿ ವೈಶಾಲಿ ಬಲ್ಸಾರಾ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಗಾಯಕಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನದಿಯ ದಡದಲ್ಲಿ ಸಾಕಷ್ಟು ಸಮಯದಿಂದ ಕಾರು ನಿಂತಿದ್ದು ನೋಡಿದ ಸ್ಥಳೀಯರು ಮಾಲೀಕರಿಗಾಗಿ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ ಯಾರೂ […]readmore

ತೆಲುಗಿನಲ್ಲಿ ಮಾತನಾಡಿ ಕೋಬ್ರಾ ಸಿನಿಮಾದ ಪ್ರಚಾರ ಮಾಡಿದ ನಟಿ ಶ್ರೀನಿಧಿ ಶೆಟ್ಟಿ: ಅಚ್ಚರಿ

ಯಶ್ ನಟನೆಯ ಕೆಜಿಎಫ್ ಸಿನಿಮಾದ ಬಳಿಕ ನಟಿ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್ ಬಳಿಕ ಶ್ರೀನಿಧಿ ಶೆಟ್ಟಿಗೆ ದೊಡ್ಡ ದೊಡ್ಡ ಸಿನಿಮಾದ ಆಫರ್ ಗಳು ಬರುತ್ತಿವೆ. ಸದ್ಯ ಚಿಯಾನ್ ವಿಕ್ರಂ ಜೊತೆ ತಮಿಳಿನಲ್ಲಿ ನಟಿಸಿರುವ ಕೋಬ್ರಾ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ಕೋಬ್ರಾ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ದೊಡ್ಡ ಮಟ್ಟದಲ್ಲಿ ತೆರೆಗೆ ಬರಲು ಸಿದ್ದವಾಗಿರೋ ಕೋಬ್ರಾ ಸಿನಿಮಾ ಭರ್ಜರಿಯಾಗಿಯೇ ಪ್ರಮೋಷನ್ ಮಾಡುತ್ತಿದೆ. ನಟ ಚಿಯಾನ್ ವಿಕ್ರಂಗೆ ಆಂಧ್ರ ಹಾಗೂ […]readmore

ಕೋಟಿ ಖರ್ಚಾದರೂ ಪರವಾಗಿಲ್ಲ, ನಾನಿದ್ದೀನಿ: ಹರೀಶ್ ರಾಯ್ ಚಿಕಿತ್ಸೆಗೆ ಭರವಸೆ ನೀಡಿದ ಸ್ಯಾಂಡಲ್

ಕನ್ನಡದ ಖ್ಯಾತ ಖಳನಟ ಹರೀಶ್ ರಾಯ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕೆಲ ಕಾಲ ಸಿನಿಮಾ ರಂಗದಿಂದ ದೂರವಿದ್ದು ಹರೀಶ್ ರಾಯ್ ಕೆಜಿಎಫ್ ಸಿನಿಮಾದ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಆದರೆ ಇದೀಗ ಹರೀಶ್ ರಾಯ್ ಗೆ ಮತ್ತೆ ಸಂಕಷ್ಟು ಎದುರಾಗಿದೆ. ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರಾಯ್ ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕ್ಯಾನ್ಸರ್ ಕೊನೆಯ ಹಂತದಲ್ಲಿದ್ದು ಸಂದರ್ಶನವೊಂದರಲ್ಲಿ ಹರೀಶ್ ರಾಯ್ ಈ ಕುರಿತು ಬಾಯಿ ಬಿಟ್ಟಿದ್ದಾರೆ. ಹರೀಶ್ ರಾಯ್ ಆರೋಗ್ಯದ ಕುರಿತು ತಿಳಿದುಕೊಂಡ ಸಾಕಷ್ಟು ಮಂದಿ […]readmore

Phone icon
Call Now
Reach us!
WhatsApp icon
Chat Now