ಬಿಟೌನ್ ನಲ್ಲಿ ರಶ್ಮಿಕಾ ಮಂದಣ್ಣಗೆ ಸಖತ್ ಡಿಮ್ಯಾಂಡ್: ಸ್ಟಾರ್ ನಟನ ಸಿನಿಮಾದಲ್ಲಿ ‘ಕಿರಿಕ್

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ರಶ್ಮಿಕಾ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಈ ಮಧ್ಯೆ ರಶ್ಮಿಕಾ ಬಾಲಿವುಡ್ ನಲ್ಲಿ ಭದ್ರವಾಗಿ ನೆಲೆಯೂರುತ್ತಾರಾ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಹೌದು. ನಟಿ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗ್ಲೆ ನಟಿಸಿರೋ ಸಿನಿಮಾಗಳು ಬಿಡುಗಡೆಗೂ ಮುನ್ನವೇ ರಶ್ಮಿಕಾ ಹೊಸ ಹೊಸ ಪ್ರಾಜೆಕ್ಟ್ ಗಳಿಗೆ ಸಹಿ ಮಾಡುತ್ತಿದ್ದಾರೆ. ಪುಷ್ಪ ಸಿನಿಮಾದ […]readmore

‘ಬ್ರಹ್ಮಾಸ್ತ್ರ’ಚಿತ್ರದಲ್ಲಿ ರಣಬೀರ್ ತಾಯಿ ಪಾತ್ರ ಮಾಡಿದ ರಣಬೀರ್ ಮಾಜಿ ಪ್ರೇಯಸಿ: ವೈರಲ್ ಆಯ್ತು

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.ಬಾಯ್ಕಾಟ್ ನಡುವೆಯೂ ತೆರೆಗೆ ಬಂದ ಬ್ರಹ್ಮಾಸ್ತ್ರ ಕೋಟಿ ಕೋಟಿ ಲೂಟಿ ಮಾಡುತ್ತಿದ್ದು ಇದರಿಂದ ಇಡೀ ಚಿತ್ರತಂಡ ಸಖತ್ ಖುಷಿಯಲ್ಲಿದೆ. ರಿಯಲ್ ಲೈಫ್ ನಲ್ಲಿ ಜೋಡಿಯಾಗಿರೋ ಆಲಿಯಾ ಹಾಗೂ ರಣಬೀರ್ ನನ್ನು ತೆರೆ ಮೇಲೆ ನೋಡಿದ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಇದೀಗ ಚಿತ್ರದ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ನ್ಯೂಸ್ ಸಿಕ್ಕಿದೆ. ಇದೇ ಮೊದಲ ಭಾರಿಗೆ ಆಲಿಯಾ ಹಾಗೂ ರಣಬೀರ್ […]readmore

ಸರ್ಕಾರಿ ಶಾಲೆಗಳ ಸಮಸ್ಯೆ ತೆರೆದಿಡುವ ‘ಕರುನಾಡ ಶಾಲೆ’ಚಿತ್ರದ ಹಾಡು ಬಿಡುಗಡೆ

ಶಿಕ್ಷಣ ಖಾಸಗೀಕರಣವಾದ ಮೇಲಂತೂ ಸರ್ಕಾರಿ ಶಾಲೆಗಳ ಪರಿಸ್ಥಿತಿಯಂತೂ ಅಧಪತನದತ್ತ ಸಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡರು ಅದು ಯಶಸ್ಸು ಕಂಡಿಲ್ಲ. ಹೀಗಿದ್ಮೇಲೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಬಗ್ಗೆ ವಿವರಿಸೋದು ಬೇಕಾಗಿಲ್ಲ. ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲಿರುವ ಪ್ರಯತ್ನಕ್ಕೆ ಕರುನಾಡ ಶಾಲೆ ಸಿನಿಮಾ ಕೈ ಹಾಕಿದೆ. ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ   ಚಿತ್ರತಂಡವು ಶಿಕ್ಷಕರ ದಿನಾಚರಣೆ ದಿನದಂದು […]readmore

ಡಬ್ಬಿಂಗ್ ಮುಗಿಸಿ ಬಿಡುಗಡೆಗೆ ಸಿದ್ದವಾದ ‘ದೂರದರ್ಶನ’ ಸಿನಿಮಾ

ವಿಭಿನ್ನ ಕಥಾನಕದ ಸುಳಿವು ನೀಡಿರುವ ದೂರದರ್ಶನ ಸಿನಿಮಾ ಆರಂಭದಿಂದಲೂ ಬಹಳಷ್ಟು ಸದ್ದು ಮಾಡುತ್ತಿದ್ದು, ಇದೀಗ ಡಬ್ಬಿಂಗ್ ಮುಗಿಸಿ, ಬಿಡುಗಡೆಗೆ ತಯಾರಾಗುತ್ತಿದೆ. ಸುಕೇಶ್ ಶೆಟ್ಟಿ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ದಿಯಾ ಸಿನಿಮಾ ಖ್ಯಾತಿ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ಆಯಾನಾ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ  ಕಾಣಿಸಿಕೊಂಡಿದ್ದು, ಉಳಿದಂತೆ  ಹರಿಣಿ, ದೀಪಕ್‌ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್‌, ಸೂರಜ್‌ ಮಂಗಳೂರು, ಸೂರ್ಯ […]readmore

ರಜನಿಕಾಂತ್ ನನ್ನ ಮಧ್ಯೆ ಅಸೂಯೆಗೆ ಜಾಗ ಇಲ್ಲ: ನಟ ಕಮಲ್ ಹಾಸನ್

ಮಣಿ ರತ್ನಂ ನಿರ್ದೇಶನದ ತಮಿಳಿನ ಬಹುನಿರೀಕ್ಷಿತ ಪೊನ್ನಿಯನ್ ಸೆಲ್ವನ್ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಸಾಕಷ್ಟು ಅದ್ದೂರಿಯಾಗಿ ತೆರೆಗೆ ಬರಲಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದ ಕುರಿತಾಗಿ ಸಾಕಷ್ಟು ನಿರೀಕ್ಷೆ ಇದೆ. ಬಿಡುಗಡೆಗೆ ಎದುರು ನೋಡುತ್ತಿರುವ ಪೊನ್ನಿಯ್ ಸೆಲ್ವನ್ ಸಿನಿಮಾ ತಂಡ ಇತ್ತೀಚೆಗೆ ಅದ್ದರಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ಮಣಿ ರತ್ನಂ ನಿರ್ದೇಶನದ ಪೊನ್ನೊಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯ ರೈ ಬಚ್ಚನ್, ಚಿಯನ್ ವಿಕ್ರಂ, ಜಯಂ ರವಿ, ತ್ರಿಷಾ, ಶೋಬಿತಾ ದೂಲಿಪಾಲ್, ಪ್ರಕಾಶ್ ರಾಜ್, ಕಾರ್ತಿ ಸೇರಿದಂತೆ […]readmore

ನಿರ್ದೇಶಕನಾಗಿ ಭಡ್ತಿ ಪಡೆದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್

ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಘಳಿಸಿರುವ ನಟ, ನಿರ್ಮಾಪಕ ಹಾಗೂ ನಿರೂಪಕ ಸೃಜನ್ ಲೋಕೇಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಚಿತ್ರರಂಗದ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿರುವ ಸೃಜನ್ ಲೋಕೇಶ್ ಇದೀಗ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಸೃಜಲ್ ಲೋಕೇಶ್ ಗೆ ಸಾಕಷ್ಟು ಸಿನಿಮಾಗಳ ಆಫರ್ ಗಳು ಬರುತ್ತಿವೆ. ಆದ್ರೆ ಅವುಗಳನ್ನು ಅಳೆದು ತೂಗಿ ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಸೃಜನ್ ಅಣಜಿ ನಾಗರಾಜ್ ನಿರ್ಮಾಣದ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ನಿರ್ದೇಶಕನಾಗಬೇಕು ಎನ್ನುವುದು ಸೃಜನ್ […]readmore

ಬಟ್ಟೆ ಬಗ್ಗೆ ಮಾತನಾಡಿದ್ದಕ್ಕೆ ಪಬ್ಲಿಕ್ ನಲ್ಲೇ ಪಾಪರಾಜಿಗಳ ಮೇಲೆ ಗರಂ ಆದ ಉರ್ಫಿ

ಬಿಗ್ ಬಾಸ್ ಒಟಿಟಿ ಖ್ಯಾತಿಯ, ನಟಿ ಊರ್ಫಿ ಜಾವೇದ್ ಕಾಣಿಸಿಕೊಂಡರೆ ಸಾಕು ಫೋಟೋ ತೆಗೆಯಲು ಪಾಪಾ ರಾಜಿಗಳು ಮುಗಿ ಬೀಳುತ್ತಾರೆ.ಚಿತ್ರ ವಿಚಿತ್ರ ಬಟ್ಟೆ ಧರಿಸಿ ಬರುವ ಊರ್ಫಿ ಸಾಕಷ್ಟು ಮಂದಿಯ ಆಕ್ರೋಶಕ್ಕೂ ಕಾರಣವಾಗಿದ್ದಾರೆ.ಆದ್ರೆ ಇದ್ಯಾವದಕ್ಕೂ ತಲೆ ಕೆಡಿಸಿಕೊಳ್ಳದ ಈಕೆ ತರಹೇವಾರಿ ಡ್ರಸ್ ಧರಿಸಿ ಬಂದು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ಊರ್ಫಿ ಅವತಾರಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯುವ ಅದೇ ಪಾಪರಾಜಿಗಳ ವಿರುದ್ಧ ಊರ್ಫಿ ಗರಂ ಆಗಿದ್ದಾರೆ. ಯಾವಾಗಲು ಪಾಪಾರಾಜಿಗಳು ಕಂಡರು ನಗು ನಗುತ್ತಲೆ ಮಾತನಾಡಿ ಕ್ಯಾಮೆರಾಗೆ […]readmore

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸ್ವಯಂ ವಿಮರ್ಶಕ ಕಮಲ್ ಆರ್ ಖಾನ್  ಗೆ ಜಾಮೀನು:

ಬಾಲಿವುಡ್ ನಟ, ಸ್ವಯಂ ವಿಮರ್ಶಕ ಕಮಲ್ ಆರ್ ಖಾನ್ ಗೆ ಸದ್ಯಕ್ಕೆ ಸಂಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ಸೆಲೆಬ್ರಿಟಿಗಳು ಹಾಗೂ ಸಿನಿಮಾಗಳ ಕುರಿತಾಗಿ ಬೇಕಾ ಬಿಟ್ಟಿ ಮಾತನಾಡಿ ಜೈಲು ಸೇರಿದ್ದ ಕಮಲ್ ಜೈಲಿನಿಂದ ಬಿಡುಗಡೆ ಆದ ಒಂದೇ ವಾರಕ್ಕೆ ಮತ್ತೆ ಜೈಲು ಸೇರಿದ್ದಾರೆ. ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಸೇರಿರುವ ಕಮಲ್ ಆರ್ ಖಾನ್ ಗೆ ಜಾಮೀನು ಸಿಕ್ಕಿದ್ದರು ಮತ್ತೊಂದು ಪ್ರಕರಣದಲ್ಲಿ ಜೈಲಿನಲ್ಲೇ ಉಳಿದಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ […]readmore

ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆದ ಧೃವ ಸರ್ಜಾ ಪತ್ನಿ ಪ್ರೇರಣ ಸೀಮಂತ

ಸ್ಯಾಂಡಲ್ ವುಡ್ ನಟ ಧೃವ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಧೃವ ಸರ್ಜಾ ಹಾಗೂ ಪ್ರೇರಣ ದಂಪತಿ ಮುದ್ದು ಮಗುವಿನ ಆಗಮನಕ್ಕೆ ಎದುರು ನೋಡುತ್ತಿದ್ದು ಈ ವಿಷಯವನ್ನು ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ದಂಪತಿಗಳು ಹಂಚಿಕೊಂಡಿದ್ದರು. ಇದೀಗ ಪ್ರೇರಣರ ಅದ್ದೂರಿ ಸೀಮಂತ ಕಾರ್ಯ ಮಾಡಲಾಗಿದೆ. ಇತ್ತೀಚೆಗೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದ ಪ್ರೇರಣ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ನಟ ಧೃವ ಸರ್ಜಾ ಕೂಡ ಬೇಬಿ ಬಂಪ್ ವಿಡಿಯೋವನ್ನು ಹಂಚಿಕೊಂಡು ಆಗಮಿಸಲಿರುವ […]readmore

Phone icon
Call Now
Reach us!
WhatsApp icon
Chat Now