• June 19, 2026

karnatakaspecial.in

https://karnatakaspecial.in/

ʻನೇತ್ರಾವತಿʼ ಧಾರವಾಹಿಯ 500 ಸಂಚಿಕೆ ಹಿನ್ನೆಲೆ: ಪುನೀತ್‌ ಪುಣ್ಯಭೂಮಿಗೆ ಪೂಜೆ

ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ʻನೇತ್ರಾವತಿʼ ಧಾರಾವಾಹಿ ತಂಡದ ಸದಸ್ಯರು ಇತ್ತೀಚೆಗೆ ಕಂಠೀರವ ಸ್ಟೂಡಿಯೋಗೆ ಭೇಟಿ ನೀಡಿ ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್‌ ಪುಣ್ಯಭೂಮಿಗೆ ಪೂಜೆ ಸಲ್ಲಿಸಿದರು. ಧಾರಾವಾಹಿಯ ಕಲಾವಿದರಾದ ಅಂಜಲಿ, ದುರ್ಗಾಶ್ರೀ, ಮಹೇಶ್‌, ಹೇಮಾ ನಾಡಿಗ್‌, ದೀಪಿಕಾ, ಸಚಿನ್‌, ಪಲ್ಲವಿ, ಮೋನಿಕಾ, ಮಾಲತಿ ಮೈಸೂರು, ಯತೀಶ್, ನಿರ್ದೇಶಕ ಸಂತೋಷ್‌ ಗೌಡ, ಛಾಯಾಗ್ರಾಹಕ ದಯಾಕರ್, ಸಂಕಲನಕಾರ ಗುರುಮೂರ್ತಿ ಹೆಗಡೆ ಮುಂತಾದವರು ಸಮಾಧಿಗೆ ಹೂ ಹಣ್ಣು, ಹಾರ ಅರ್ಪಿಸಿ ಪುನೀತ್‌ ಪುಣ್ಯಸ್ಮರಣೆ ಮಾಡಿಕೊಂಡರು. ಎಲ್ಲರೂ ಪುನೀತ್‌ ಚಿತ್ರವಿರುವ ಷರ್ಟ್‌ ಧರಿಸಿ ಅಭಿಮಾನ […]Read More

ನಾನು ಗಡಿನಾಡ ಕನ್ನಡಿಗ ಎಂದ ರೂಪೇಶ್ ಶೆಟ್ಟಿಗೆ ಬೆದರಿಕೆ: ಕುಟುಂಬಸ್ಥರಿಂದ ದೂರು ದಾಖಲು

ತುಳುನಾಡಿನ ಪ್ರತಿಭೆ ನಟ ರೂಪೇಶ್ ಶೆಟ್ಟಿ ಸದ್ಯ ಬಿಗ್ ಬಾಸ್ ನಲ್ಲಿ ಸದ್ದು ಮಾಡ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಗಮನ ಸೆಳೆದ ರೂಪೇಶ್ ಶೆಟ್ಟಿ ಇದೀಗ ಟಿವಿ ಸೀಸನ್ ನಲ್ಲೂ ಕಮಾಲ್ ಮಾಡ್ತಿದ್ದಾರೆ. ಆದರೆ ರೂಪೇಶ್ ಶೆಟ್ಟಿ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದ್ದು ಅವರ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಕೀಳು ಮಟ್ಟದ ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ರೂಪೇಶ್ ಶೆಟ್ಟಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಬಿಗ್ ಬಾಸ್ ಸೀಸನ್ 9ರಲ್ಲಿ ಇತ್ತೀಚೆಗಷ್ಟೇ ಪ್ರಶಾಂತ್ ಸಂಬರ್ಗಿ ಕನ್ನಡ ಪರ […]Read More

ಅನಾರೋಗ್ಯದ ನಡುವೆಯೂ `ಯಶೋದಾ’ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡ ಸಮಂತಾ

ಟಾಲಿವುಡ್ ಸ್ಟಾರ್ ನಟಿ ಸಮಂತಾ “ಮಯೋಸಿಟಿಸ್” ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಕಾಯಿಲೆ ಬಗ್ಗೆ ಬರೆದುಕೊಂಡಿದ್ದ ಸಮಂತಾ ಯಶೋದ ಚಿತ್ರದ ಡಬ್ಬಿಂಗ್ ನಲ್ಲಿ ತೊಡಗಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದರು. ಇದೀಗ ಕಾಯಿಲೆಯ ನಡುವೆಯೂ ಸಮಂತಾ ಯಶೋದ ಚಿತ್ರದ ಪ್ರಮೋಷನ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಟಾಲಿವುಡ್ ನ ಬಹು ನಿರೀಕ್ಷಿತ ಯಶೋದ ಸಿನಿಮಾ ನವೆಂಬರ್ 11ರಂದು ತೆರೆಗೆ ಬರಲಿದೆ. ಬಹುಭಾಷೆಯಲ್ಲಿ ಬಿಡುಗಡೆ ಆಗುತ್ತಿರುವ ಯಶೋದ ಚಿತ್ರದ ಪ್ರಮೋಷನ್ ಕೆಲಸದಲ್ಲಿ ಸಮಂತಾ ತೊಡಗಿಕೊಂಡಿದ್ದಾರೆ. ಅಲ್ಲದೆ ಕಾಯಿಲೆಯ ಬಳಿಕ ಇದೇ […]Read More

ಹೊಸ ಮನೆಗೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್: ಇಲ್ಲಿದೆ ‘ಕ್ರಿಸ್​ಮಿ ನೆಸ್ಟ್​’

2021ರ ಫೆಬ್ರವರಿ 14ರಂದು ಹಸೆಮಣೆ ಏರಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇದೀಗ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಲವ್ ಮಾಕ್ಟೇಲ್ ಚಿತ್ರದ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡಿದ್ದ ಜೋಡಿಗಳು ಹೊಸ ಮನೆಯ ಗೃಹ ಪ್ರವೇಶದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿ ಹಕ್ಕಿಗಳು ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ಮನೆಗೆ ಕ್ರಿಸ್ ಮಿ ನೆಸ್ಟ್ ಎಂದು ಹೆಸರಿಟ್ಟಿದ್ದಾರೆ. ಕೃಷ್ಣ ಹಾಗೂ ಮಿಲನಾ […]Read More

ಇಂಡೋನೇಷ್ಯಾದಲ್ಲೂ ಕಾಂತಾರದ ಕಮಾಲ್: ಧನ್ಯವಾದ ಹೇಳಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತ ಮುನ್ನಗುತ್ತಿರುವ ಕಾಂತಾರ ಬಿಡುಗಡೆ ಆಗಿ ತಿಂಗಳ ಬಳಿಕ ಸಾಕಷ್ಟು ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ, ಸದ್ಯ ಇಂಡೋನೇಷ್ಯಾದಲ್ಲೂ ಕಾಂತಾರ ಕಮಾಲ್ ಮಾಡುತ್ತಿದ್ದು, ಇಂಡೋನೇಷ್ಯಾದಲ್ಲಿ ರಿಲೀಸ್ ಆಗಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಕಾಂತಾರ ಪಾತ್ರವಾಗಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಸೆಪ್ಟೆಂಬರ್ 30ರಂದು ತೆರೆಕಂಡ ಕಾಂತಾರ ಚಿತ್ರ […]Read More

ಶೂಟಿಂಗ್ ವೇಳೆ ಹೆಜ್ಜೆನ್ನು ದಾಳಿ: ಸ್ಥಳದಲ್ಲೇ ಕುಸಿದು ಬಿದ್ದ ಇಬ್ಬರು ಲೈಟಿಂಗ್ ಸಹಾಯಕರು

ಕಾರವಾರ: ಕನ್ನಡ ಸಿನಿಮಾ ‘ಭಾವಪೂರ್ಣ’ ಚಿತ್ರದ ಚಿತ್ರೀಕರಣದ ವೇಳೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಇಬ್ಬರು ಲೈಟಿಂಗ್ ಸಹಾಯಕರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಜಮಗೋಡಿನ ರೈಲ್ವೆ ನಿಲ್ದಾಣ ರಸ್ತೆಯ ಕ್ರಾಸ್ ಬಳಿ ನಡೆದಿದೆ. ಮಂಡ್ಯ ಮೂಲದ ರಮೇಶ್ ಮತ್ತು ರಾಮು ಹೆಜ್ಜೇನು ಕಡಿತಕ್ಕೊಳಗಾದ ಲೈಟಿಂಗ್ ಸಹಾಯಕರು. ಹೆಜ್ಜೇನು ದಾಳಿ ಮಾಡುತ್ತಲೇ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದದವರು ಅಲ್ಲಿಂದ ಓಡಿ ಹೋಗಿದ್ದಾರೆ.  ಈ ವೇಳೆ ರಮೇಶ್ ಹಾಗೂ ರಾಮು ಮೇಲೆ ನೂರಾರು […]Read More

ಮುಂಬೈನ ಬೀದಿಗಳಲ್ಲಿ ಯುವಕರ ಜೊತೆ ಕ್ರಿಕೆಟ್ ಆಡಿದ ಎಬಿಡಿ

ಮುಂಬೈ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಮುಂಬೈನ ಗಲ್ಲಿಯಲ್ಲಿ ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್ ಆಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ಕೆಲ ದಿನಗಳಿಂದ ಎಬಿ ಡಿವಿಲಿಯರ್ಸ್ ಸಖತ್ ಸದ್ದು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ 2023ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಬೆಂಗಳೂರಿಗೆ ಆಗಮಿಸಿದ್ದ ಎಬಿಡಿ ಫ್ರಾಂಚೈಸ್ ಜೊತೆ ಕಾಣಿಸಿಕೊಂಡಿದ್ದರು. ಜೊತೆಗೆ ಕಾಂತಾರ ಚಿತ್ರದ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದು ಈ ವೇಳೆ ಇವರಿಬ್ಬರು ಕಾಂತಾರ […]Read More

ವಿಚ್ಚೇದನಕ್ಕೆ ಮುಂದಾದ ಸಾನಿಯಾ, ಶೋಯೆಬ್: ಅನುಮಾನ ಹುಟ್ಟುಹಾಕಿದ ಮೂಗುತಿ ಸುಂದರಿಯ ಪೋಸ್ಟ್

ನವದೆಹಲಿ: ಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾಕಷ್ಟು ವರ್ಷಗಳೆ ಕಳೆದಿದೆ. ಈ ಜೋಡಿಗೆ ಒಬ್ಬ ಮಗನಿದ್ದು ಇದೀಗ ಸಾನಿಯಾ ಹಾಗೂ ಶೋಯೆಬ್ ದೂರವಾಗುತ್ತಿರುವ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ. ಸಾನಿಯಾ ಮಿರ್ಜಾ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್ ಒಂದು ಅವರಿಬ್ಬರ ಮಧ್ಯೆ ಎಲ್ಲವೂ ಸರಿಯಾಗಿಲ್ಲವ ಎಂಬ ಅನುಮಾನ ಹುಟ್ಟುಹಾಕುವಂತೆ ಮಾಡಿದೆ. 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾನಿಯಾ ಹಾಗೂ ಶೋಯೆಬ್ ಆ ವೇಳೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರು. ಸಾನಿಯಾ ಭಾರತೀಯಳಾಗಿದ್ದು, ಶೋಯೇಬ್ […]Read More

ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ ಹಾಡು ಬಳಕೆ: ಕಾಂಗ್ರೆಸ್ ಟ್ವಿಟ್ಟರ್ ಖಾತೆ ಬ್ಲ್ಯಾಕ್

ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಚಿತ್ರದ ಹಾಡನ್ನು ಬಳಸಿಕೊಂಡು ಕಾಪಿರೈಟ್ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಟ್ವಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಬ್ಯ್ಲಾಕ್ ಮಾಡುವಂತೆ ಬೆಂಗಳೂರಿನ ಸಿಟಿ ಸಿವಿಲ್‌  ಕೋರ್ಟ್‌ ಟ್ವಿಟ್ಟರ್‌ ಕಂಪನಿಗೆ ಆದೇಶ ನೀಡಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಪ್ರಚಾರದಲ್ಲಿ ಯಶ್ ನಟನೆಯ ಕೆಜಿಎಫ್‌ ಚಾಪ್ಟರ್‌-2 ಸಿನಿಮಾದ ಆಡಿಯೋವನ್ನು ಬಳಸಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಸ್ಟುಡಿಯೋಕೋರ್ಟ್‌ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌ ಕಾಂಗ್ರೆಸ್‌ ಮತ್ತು […]Read More

‘ಉತ್ತರಕಾಂಡ’ ಚಿತ್ರದ ಮುಹೂರ್ತದಲ್ಲಿ ಮಿಂಚಿದ ರಮ್ಯಾ, ಡಾಲಿ

ಸ್ಯಾಂಡಲ್ ವುಡ್ ನ ಮೋಹಕ ತಾರೆ ಅಭಿಮಾನಿಗಳಿತೆ ಮತ್ತೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಹಿಂದೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ಕಂಬ್ಯಾಕ್ ಮಾಡುವ ಸುದ್ದಿ ನೀಡಿದ್ದ ರಮ್ಯಾ ಬಳಿಕ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಇದೀಗ ರಮ್ಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದ ಮೂಲಕ ರಮ್ಯಾ ಕಂಬ್ಯಾನ್ ಆಗುವ ಸುದ್ದಿ ನೀಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಅದರಲ್ಲಿ ರಮ್ಯಾ […]Read More

Phone icon
Call Now
Reach us!
WhatsApp icon
Chat Now