• January 2, 2026

ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಸಾಕ್ಷ್ಯ ಚಿತ್ರ  ಅದ್ದೂರಿಯಾಗಿ ತೆರೆಗೆ ಬಂದಿದೆ. ಈಗಾಗ್ಲೆ ಸಾಕಷ್ಟು ಮಂದಿ ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಬೆಳಗ್ಗೆಯಿಂದಲೇ ಚಿತ್ರಮಂದಿರಗಳಲ್ಲಿ ಪರಮಾತ್ಮನ ದರ್ಶನವಾಗುತ್ತಿದೆ. ಸಿನಿಮಾ ಬಿಡುಗಡೆ ಹಿನ್ನೆಲೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯಕ್ಕೆ ಭೇಟಿ ಪೂಜೆ ಸಲ್ಲಿಸಿ ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.  ಈ ವೇಳೆ ಗಂಧದ ಗುಡಿ ಚಿತ್ರದ ನಿರ್ದೇಶಕ ಅಮೋಘ ವರ್ಷ ಕೂಡ ಜೊತೆಗಿದ್ದರು. ಮೈಸೂರಿನೊಂದಿಗೆ ಅಪ್ಪುಗೆ ವಿಶೇಷ ನಟಿಂದೆ. ಅಲ್ಲದೆ ಚಾಮುಂಡೇಶ್ವರಿಯ ಪರಮ ಭಕ್ತರಾಗಿದ್ದ ಅಪ್ಪು ಶೂಟಿಂಗ್ ಗಾಗಿ ಮೈಸೂರಿಗೆ ತೆರಳಿದ ವೇಳೆ ಚಾಮುಂಡಿ ತಾಯಿಯ ದರ್ಶನ ಪಡೆಯುತ್ತಿದ್ದರು. ಅಲ್ಲದೆ ಅಪ್ಪು ಅವರ ಶಕ್ತಿದಾಮ ಕೂಡ ಇರುವುದು ಮೈಸೂರಿನಲ್ಲೇ. ಹೀಗಾಗಿ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲೆಲ್ಲಾ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆಯುತ್ತಿದ್ದರು. ಅಲ್ಲದೆ ಯಾವುದೇ ಹೊಸ ಚಿತ್ರ ಬಿಡುಗಡೆಯಾದಾಗಲು ಬರಿಗಾಲಿನಲ್ಲಿ ಚಾಮುಂಡಿ  ಬೆಟ್ಟ ಹತ್ತಿ ದೇವಿ ದರ್ಶನ ಮಾಡುತ್ತಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now