• January 1, 2026

ಗಂಧದ ಗುಡಿ ಕುರಿತು ಮೊದಲ ಭಾರಿಗೆ ಮೌನ ಮುರಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಅಭಿಮಾನಿಗಳು ಸಾಕಷ್ಟು ದಿನದಿಂದ ಕಾದು ಕೂತಿರುವ ಗಂಧದ ಗುಡಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈಗಾಗ್ಲೆ ಅದ್ದೂರಿಯಾಗಿ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮ ಮುಗಿದಿದ್ದು ಇದೀಗ ಅಪ್ಪು ಥಿಯೇಟರ್ ಗೆ ಎಂಟ್ರಿಕೊಡೋಕೆ ರೆಡಿಯಾಗಿದ್ದಾರೆ. ಇದೇ ಮೊದಲ ಭಾರಿಗೆ ಗಂಧದ ಗುಡಿ ಹಾಗೂ ಪುನೀತ್ ಪರ್ವದ ಕುರಿತು ಅಶ್ವೀನಿ ಪುನೀತ್ ರಾಜ್ ಕುಮಾರ್ ಮಾತನಾಡಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಸಂದರ್ಶನದಲ್ಲಿ ಭಾಗಿಯಾಗಿದ್ದ ಅಶ್ವೀನಿ ಪುನೀತ್ ರಾಜ್ ಕುಮಾರ್ ಸಿನಿಮಾ ಹಾಗೂ ಶೂಟಿಂಗ್ ಸಂದರ್ಭದ ಸನ್ನಿವೇಶಗಳನ್ನು ಮೆಲುಕು ಹಾಕಿದ್ದಾರೆ. ಪುನೀತ್ ಪರ್ವ ಕಾರ್ಯಕ್ರಮದ ಅನುಭವದ ಕುರಿತಾಗಿ ಮಾತನಾಡಿದ ಅಶ್ವೀನಿ,  ‘ನಾವು ಪುನೀತ ಪರ್ವ ಕಾರ್ಯಕ್ರಮ ಮಾಡಿದ್ದೇ ಅಭಿಮಾನಿಗಳಿಗೋಸ್ಕರ. ಎಲ್ಲರಿಗೂ ಆಹ್ವಾನ ನೀಡಿದ್ದೆವು. ಒಂದು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಚಿತ್ರರಂಗದ ಅನೇಕರು ಬಂದರು. ಅದು ನನಗೆ ಖುಷಿ ನೀಡಿತು. ಅಭಿಮಾನಿಗಳಿಗೆ ನಮ್ಮ ಕುಟುಂಬ ಚಿರಋಣಿ. ಅಪ್ಪು ಅವರ ಕೊನೆಯ ಕಾರ್ಯಕ್ರಮ ಯಶಸ್ವಿ ಆಯಿತು ಅಂತ ನನಗೆ ತೃಪ್ತಿ ಇದೆ. ಮಳೆ ಬರುತ್ತೆ ಎಂಬ ಟೆನ್ಷನ್​ ಇತ್ತು. ಎಲ್ಲರೂ ಚೆನ್ನಾಗಿ ನಡೆಸಿಕೊಟ್ಟರು. ಸರ್ಕಾರ ಮತ್ತು ಪೊಲೀಸರ ಬೆಂಬಲದಿಂದ ನಮ್ಮ ಈ ಕಾರ್ಯಕ್ರಮ ಚೆನ್ನಾಗಿ ಆಯಿತು’ ಎಂದಿದ್ದಾರೆ. ಇನ್ನೂ ಗಂಧದ ಗುಡಿ ಸಾಕ್ಷ್ಯಚಿತ್ರದ ಕುರಿತು ಮಾತನಾಡಿದ ಅಶ್ವೀನಿ ಪುನೀತ್ ರಾಜ್ ಕುಮಾರ್, ಗಂಧದಗುಡಿ ಅಪ್ಪಾಜಿ, ಶಿವಣ್ಣ ಮಾಡಿದ್ದು, ಅದರಲ್ಲಿ ಕಥೆ ಇತ್ತು, ಆದರೇ ಈ ಚಿತ್ರದಲ್ಲಿ ಜರ್ನಿನೇ ಸಿನಿಮಾ. ಚಿತ್ರದಲ್ಲಿ ಅವರು ಅವರಾಗೆ ಇದ್ದರು. ನನಗೆ ತುಂಬ ಹೆಮ್ಮೆ ಅನ್ನಿಸುತ್ತೆ. ನನ್ನ ಜೊತೆ ಟ್ರಕ್ಕಿಂಗ್ ಮಾಡಬೇಕೆಂದು ಅಪ್ಪು ಕಾಲ್ ಮಾಡಿದ್ರು. ನಾನು ಅವರ ತಂಡದ ಜೊತೆ ಟ್ರಕ್ಕಿಂಗ್ ಮಾಡಿದ್ದೆ. ಬಳಿಕ ಒಂದು ಸಣ್ಣ ಹಳ್ಳಿಯಲ್ಲಿ ಊಟ ಮಾಡಿಕೊಂಡು ಬಂದೆವು ಎಂದು ಗಂಧದಗುಡಿ ಚಿತ್ರದ ಚಿತ್ರೀಕರಣ ಸಮಯದ ಘಟನೆಗಳನ್ನು ಮೆಲುಕು ಹಾಕಿದರು. ಗಂಧದ ಗುಡಿ ಪ್ರೀಮಿಯರ್ ಟಿಕೇಟ್ ಸೋಲ್ಡ್ ಔಟ್ ಬಗ್ಗೆ ಪ್ರತಿಕ್ರಿಯಿಸಿದ ಅಶ್ವೀನಿ, ‘ಇದು ನನಗೆ ಹೆಮ್ಮೆ ಕೊಟ್ಟಿರುವ ಪ್ರಾಜೆಕ್ಟ್​. ಒಂದು ಕಡೆ ಬೇಸರ, ಇನ್ನೊಂದು ಕಡೆ ಖುಷಿ ಇದೆ. ಎಲ್ಲರೂ ಗಂಧದ ಗುಡಿ ನೋಡಿ, ಆಶೀರ್ವದಿಸಿ’ ಎಂದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now