ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್
ಸದ್ಯ ಆಶಿಕಾಗೆ ಸ್ಯಾಂಡಲ್ ವುಡ್ ನಲ್ಲಿ ಸಖತ್ ಡಿಮ್ಯಾಂಡ್ ಇದೆ. ಶರಣ್ ಜೊತೆ ನಾಯಕಿಯಾಗಿ ರ್ಯಾಂಬೋ ಸಿನಿಮಾದಲ್ಲಿ ನಟಿಸಿದ್ದ ಆಶಿಕಾಗೆ ಆ ಬಳಿಕ ಸಾಕಷ್ಟು ಬೇಡಿಕೆ ಶುರುವಾಗಿತ್ತು. ಅದರಲ್ಲೂ ಚುಟು ಚುಟು ಹಾಡಿನಲ್ಲಿ ಸಖತ್ತಾಗಿ ಸೊಂಟ ಬಳುಕಿಸಿದ್ದು ಆ ಹಾಡು ಸಖತ್ ಹಿಟ್ ಆಗಿತ್ತು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇರುವಾಗ್ಲೆ ತಮಿಳು ಚಿತ್ರರಂಗದಿಂದ ಸಾಕಷ್ಟು ಆಫರ್ ಬರೋಕೆ ಶುರುವಾಗಿದೆ.
ಎನ್. ರಾಜಶೇಖರ್ ನಿರ್ದೇಶನದ ಇನ್ನೂ ಹೆಸರಿಡದ ಹೊಸ ಸಿನಿಮದಲ್ಲಿ ಸಿದ್ಧಾರ್ಥ್‌ಗೆ ಜೋಡಿಯಾಗಿ ಆಶಿಕಾ ರಂಗನಾಥ್ ಬಣ್ಣ ಹಚ್ಚಲಿದ್ದಾರೆ. ಚಿತ್ರದ ಮುಹೂರ್ತ ನಿನ್ನೆ ಇಂದು (ಸೆ.15) ಚೆನ್ನೈನಲ್ಲಿ ನೆರವೇರಿದ್ದು ಅದರ ಫೋಟೋಗಳನ್ನು ಆಶಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಭಿನ್ನ ಕಥೆಯ ಮೂಲಕ ಕಾಲಿವುಡ್ ಚಿತ್ರರಂಗದಲ್ಲಿ ಮಿಂಚು ಹರಿಸೋಕೆ ಆಶಿಕಾ ರಂಗನಾಥ್ ರೆಡಿಯಾಗಿದ್ದಾರೆ. ಸದ್ಯ ಆಶಿಕಾಗೆ ಅಭಿಮಾನಿಗಳು ಶುಭ ಹಾರೈಸಿದ್ದು ಸದ್ಯದಲ್ಲೇ ಆಶಿಕಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.
