ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಲಿವುಡ್ ನಟ ವಿಜಯ್ ಆಂಥೋನಿ ಸಾಂಸಾರಿಕ ಜೀವನದಲ್ಲಿ ಬಿರುಕು
2006ರಲ್ಲಿ ನಿರ್ಮಾಪಕಿ ಫಾತಿಮಾ ಕೈ ಹಿಡಿದ ವಿಜಯ್ ಆಂಥೋನಿ 16 ವರ್ಷದ ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಲಿದೆಯಂತೆ. ಇತ್ತೀಚೆಗೆ ಮದುವೆಯ ಬಗ್ಗೆ ಟ್ವೀಟ್ ಮಾಡಿರುವ ವಿಜಯ್ ಆಂಥೋನಿ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ವಿಜಯ್ ಆಂಥೋನಿ ಪತ್ನಿ ಫಾತಿಮಾಗೆ ಡಿವೋರ್ಸ್ ನೀಡುವು ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ.
ನಿಮ್ಮ ಕುಟುಂಬದಲ್ಲಿ ಏನೇ ಸಮಸ್ಯೆ ಇದ್ದರೂ, ಅದನ್ನು ನಿಮ್ಮಗಳ ನಡುವೆ ಪರಿಹಾರ ಮಾಡಿಕೊಳ್ಳಿ. ಅದು ಸಾಧ್ಯವಿಲ್ಲ ಅಂದರೆ ಬೇರೆಯಾಗಿ. ಇಬ್ಬರೂ ಕಾಲಿಗೆ ಬೀಳುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿ. ಆದರೆ, ಮೂರನೇ ವ್ಯಕ್ತಿಯನ್ನು ನಿಮ್ಮ ಜೀವನದೊಳಗೆ ಪ್ರವೇಶ ಮಾಡಲು ಬಿಡಬೇಡಿ. ಆವರು ನಿಮ್ಮನ್ನು ಮುಗಿಸಿಬಿಡುತ್ತಾರೆ ಎಂದು ವಿಜಯ್ ಆಂಥೋನಿ ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ನಿಂದ ನಟ ವಿಜಯ್ ತಮ್ಮ ಪತ್ನಿಗೆ ಡಿವೋರ್ಸ್ ಕೊಡಲಿದ್ದಾರೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
