ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮುದ್ದು ಮಗಳೊಂದಿಗೆ ಮನೆಗೆ ಆಗಮಿಸಿದ ಆಲಿಯಾ, ರಣ್ಬೀರ್
ಸಾಕಷ್ಟು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ರಣಬೀರ್ ಹಾಗೂ ಆಲಿಯಾ ಕಳೆದ ಏಪ್ರಿಲ್ 14ರಂದು ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಮದುವೆಯಾದ ಎರಡು ತಿಂಗಳಲ್ಲಿ ಈ ಜೋಡಿಗಳು ಪೋಷಕರಾಗುತ್ತಿರುವ ಕುರಿತು ಮಾಹಿತಿ ನೀಡಿದ್ದರು. ಇದೀಗ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗುವಿನೊಂದಿಗೆ ಮನೆಗೆ ಕಾಲಿಟ್ಟಿದ್ದಾರೆ.
ಕಪೂರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಆಲಿಯಾ ಖುಷಿಯಿಂದ ಮಗುವಿನತ್ತ ನೋಡಿದ್ರೆ, ರಣ್‌ಬೀರ್ ಮಗಳನ್ನು ಎತ್ತಿಕೊಂಡು ಕಾರಿನಿಂದ ಇಳಿದಿದ್ದಾರೆ. ಸದ್ಯ ಆಲಿಯಾ ದಂಪತಿ ಮುದ್ದು ಮಗುವಿನೊಂದಿಗೆ ಮನೆಗೆ ಆಗಮಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
