• March 14, 2026

ಮೋಹಕ ತಾರೆ ರಮ್ಯಾ ಮದುವೆಯಾಗೋ ಹುಡುಗ ಹೇಗಿರಬೇಕಂತೆ ಗೊತ್ತಾ?

ಸ್ಯಾಂಡಲ್ ವುಡ್ ನಟಿ, ಮೋಹಕ ತಾರೆ ಯಾವಾಗ ಕಂಬ್ಯಾಕ್ ಮಾಡ್ತಾರೆ ಎಂದು ಅಭಿಮಾನಿಗಳು ಸಾಕಷ್ಟು ವರ್ಷದಿಂದ ಕಾದು ಕೂತಿದ್ದರು. ಇದೀಗ ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರಲು ಭರ್ಜರಿ ತಯಾರಿ ನಡೆಸ್ತಿದ್ದಾರೆ. ಇದೀಗ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬುದನ್ನು ರಮ್ಯಾ ಹೇಳಿದ್ದಾರೆ. ನಟಿ ರಮ್ಯಾ ಮದುವೆಯ ಕುರಿತ ಕೆಲವೊಮ್ಮೆ ಸುದ್ದಿಯಾಗಿತ್ತು, ಇದೀಗ ರಮ್ಯಾ ಕಾರ್ಯಕ್ರಮವೊಂದರಲ್ಲಿ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬುದನ್ನು ರಮ್ಯಾ ಹೇಳಿದ್ದಾರೆ. ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ನಿರೂಪಕ ಅಕುಲ್ ಬಾಲಾಜಿ, ರಮ್ಯಾ ಅವರಿಗೆ ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ರಮ್ಯಾ, ನಾನು ಸಿಂಗಲ್ ಆಗಿದ್ದೇನೆ, ಆತ ಕೂಡ ಸಿಂಗಲ್ ಆಗಿರಬೇಕು. ಆತನಿಗೆ ಮದುವೆ ಆಗಿರಬಾರದು. ಹುಡುಗನ ಲುಕ್ಸ್ ಬಗ್ಗೆ ನಾನು ಯೋಚನೆ ಮಾಡುವುದಿಲ್ಲ. ಅವರು ಒಳ್ಳೆಯ ಮನುಷ್ಯನಾಗಿರಬೇಕು. ಅವನಲ್ಲಿ ಕರುಣೆಯ ಗುಣ ಹೆಚ್ಚಿಗೆ ಇರಬೇಕು ಎಂದು ರಮ್ಯಾ ಹೇಳಿದ್ದಾರೆ. ಸಾಕಷ್ಟು ವರ್ಷಗಳ ಬಳಿಕ ರಮ್ಯಾ ಮತ್ತೆ ತೆರೆ ಮೇಲೆ ಕಮಾಲ್ ಮಾಡಲಿದ್ದಾರೆ. ರಮ್ಯಾರನ್ನು ಮತ್ತೆ ತೆರೆ ಮೇಲೆ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ರಾಜ್ ಬಿ ಶೆಟ್ಟಿ ಜೊತೆ ಸೇರಿ ರಮ್ಯಾ ಒಂದೊಳ್ಳೆ ಕಥೆಯ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ಸದ್ದು ಮಾಡಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now