• January 1, 2026

ಮದುವೆಯಾಗುವಂತೆ ಕನ್ನಡದ ನಟಿಗೆ ಕಿರುಕುಳ ನೀಡಿದ ಸಿನಿಮಾ ವಿಮರ್ಶಕ: ಮಾನಸಿಕ ಕಿರುಕುಳವಾಗುತ್ತಿದೆ ಎಂದ ಸ್ಟಾರ್ ನಟಿ

ಕನ್ನಡದ 7ಒ ಕ್ಲಾಕ್ ಸಿನಿಮಾದ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಿತ್ಯಾ ಬಳಿಕ ಪರಭಾಷೆಯಲ್ಲಿ ಸಾಕಷ್ಟು ಖ್ಯಾತಿ ಘಳಿಸಿದ್ದರು. ಸ್ಟಾರ್ ನಟಿಯಾಗಿ ಮಿಂಚುತ್ತಿರೋ ನಿತ್ಯಾ ಮೆನನ್ ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ನಿತ್ಯಾ ಮೆನನ್ ಕ್ಲಾರಿಟಿ ಕೊಟ್ಟಿದ್ದು ಆ ಬಳಿಕ ಸುದ್ದಿ ತಣ್ಣಗಾಯಿತು. ಇದೀಗ ಹುಡುಗನೊಬ್ಬ ತನ್ನನ್ನು ಮದುವೆಯಾಗುವಂತೆ ಹಿಂಸಿಸುತ್ತಿದ್ದು ಇದರಿಂದ ಮಾನಸಿಕ ಕಿರುಕುಳವಾಗುತ್ತಿದೆ ಎಂದಿದ್ದಾರೆ. ಕೇರಳದ ಪ್ರಸಿದ್ಧ ಯೂಟ್ಯೂಬ್ ಚಾನೆಲ್ ವೊಂದರಲ್ಲಿ ವಿಮರ್ಶೆ ಮಾಡುವ ಯುವಕನೊಬ್ಬ, ನಿತ್ಯಾ ಮೆನನ್ ರನ್ನು ಮದುವೆಯಾಗುವಂತೆ ನಿತ್ಯವೂ ಕಿರುಕುಳ ನೀಡುತ್ತಿದ್ದಾನೆಂದು. ನಿತ್ಯಾ ಕರೆ ಮಾಡಿ ಪುಡಿಸುತ್ತಿದ್ದರಿಂದ ನಿತ್ಯಾ ಮೆನನ್ ಆತನ ನಂಬರ್ ಗಳನ್ನು ಬ್ಲ್ಯಾಕ್ ಮಾಡಿದ್ದರಂತೆ. ಇದುವರೆಗೂ ಆತನ 30ಕ್ಕೂ ಅಧಿಕ ನಂಬರ್ ಗಳನ್ನ ಬ್ಲ್ಯಾಕ್ ಮಾಡಿರೋದಾಗಿ ನಿತ್ಯಾ ಮೆನನ್ ಹೇಳಿದ್ದಾರೆ. ಯುವಕನ ವಿರುದ್ಧ ದೂರು ದಾಖಲಿಸುವಂತೆ ಹಲವರು ನಿತ್ಯಾ ಮೆನನ್ ಗೆ ಸಲಹೆ ನೀಡಿದ್ದಾರೆ, ಆದರೆ ಯುವಕನ ಭವಿಷ್ಯ ಹಾಳಾಗಬಾರದು ಅನ್ನೋ ಕಾರಣಕ್ಕೆ ನಿತ್ಯಾ ಮೆನನ್ ದೂರು ನೀಡಲು ಹಿಂದೇಟು ಹಾಕಿದ್ದಾರೆ. ಈ ಹಿಂದೆ ಮದುವೆ ವಿಚಾರವಾಗಿ ಯುವಕ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದನಂತೆ. ನನಗೆ ಗೌರವ ಕೊಡದೇ ನಿತ್ಯಾ ಮೆನನ್ ಅನ್ನು ಇನ್ನೆಂದಿಗೂ ಮದುವೆ ಆಗಲಾರೆ. ಅವರೇ ಬಂದು ಕೇಳಿಕೊಂಡರೂ ಮದುವೆ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾಗಿ ನಿತ್ಯಾ ಮೆನನ್ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now