ಇತ್ತೀಚೆಗೆ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಕಂಡ ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ನ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಥಿಯೇಟರ್ ಗೆ ಎಂಟ್ರಿಕೊಟ್ಟ ಮೊದಲ ದಿನವೇ ಸೈಲೆಂಟ್ ಆಗಿ ಬಿಟ್ಟಿದೆ. ಲೈಗರ್ ಸಿನಿಮಾದ ಸೋಲಿನ ಬಳಿಕ ವಿಜಯ್ ಗೆ ಆಫರ್ ಕಮ್ಮಿ ಆಗಲಿದೆ ಎಂದು ಹೇಳಲಾಗುತ್ತಿತ್ತು.ಆದರೆ ಇದೀಗ ವಿಜಯ್ ಗೆ ಭರ್ಜರಿ ಆಫರ್ ಸಿಕ್ಕಿದೆ.
ವಿಜಯ್ ದೇವರಕೊಂಡ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವರು. ವಿಜಯ್ ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿರ್ತಿದ್ರು. ಹೀಗಾಗಿ ಲೈಗರ್ ಸಿನಿಮಾದ ಬಗ್ಗೆ ಸಹಯವಾಗಿಯೇ ಸಾಕಷ್ಟು ಕುತೂಹಲ ಇಟ್ಟುಕೊಳ್ಳಲಾಗಿತ್ತು. ಜೊತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಲೈಗರ್ ಚಿತ್ರವನ್ನು ಜನರಿಗೆ ತಲುಪಿಸಲು ಇಡೀ ಚಿತ್ರತಂಡ ಹಗಲು ರಾತ್ರಿ ಶ್ರಮಿಸಿತ್ತು. ಆದರೆ ಅದ್ಯಾವುದು ಕೈಗೂಡಲಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಲೈಗರ್ ಸಿನಿಮಾ ಸೋಲನುಭವಿಸಿತ್ತು.
ಲೈಗರ್ ಬಳಿಕ ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ರೆಡಿಯಾಗಬೇಕಿದ್ದ ಜನ ಗಣ ಮನ ಸಿನಿಮಾವೂ ನಿಂತು ಹೋಯಿತು. ಆದರೂ ವಿಜಯ್ ಗೆ ಆಫರ್ ಮಾತ್ರ ಕಮ್ಮಿಯಾಗಿಲ್ಲ. ವಿಜಯ್ ಸಿನಿಮಾಗೆ ಬಂಡವಾಳ ಹೂಡಲು ಖ್ಯಾತ ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ.

ವಿಜಯ್ ದೇವರಕೊಂಡ ಮತ್ತು ನಿರ್ಮಾಪಕ ದಿಲ್ ರಾಜು ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಮೂಡಿ ಬರಲಿದೆಯಂತೆ. ʻಲೈಗರ್ʼ ಸಿನಿಮಾ ಸೋತರೂ ಕೂಡ ತಮ್ಮ ಚಿತ್ರಕ್ಕೆ ವಿಜಯ್ ಅವರೇ ಬೇಕು ಅಂತಾ ದಿಲ್ ರಾಜು ಅಡ್ವಾನ್ಸ್ ಕೂಡ ಕೊಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇತ್ತೀಚೆಗೆ ವಿಜಯ್ ದೇವರಕೊಂಡ ನಟಿಸುತ್ತಿರುವ ಸಿನಿಮಾಗಳು ಸಾಲು ಸಾಲು ಸೋಲನುಭವಿಸುತ್ತಿವೆ. ಹೀಗಾಗಿ ಕಥೆಯಲ್ಲಿ ಬದಲಾವಣೆ ತರಲು ಯೋಚಿಸಿದ್ದಾರೆ. ವಿಜಯ್ ನಟನೆಯ ಹೊಸ ಚಿತ್ರಕ್ಕೆ ಇಂದ್ರಗಟಿ ಮೋಹನ್ ಕೃಷ್ಣ ನಿರ್ದೇಶನ ಮಾಡಲಿದ್ದಾರೆ. ಈಗಾಗ್ಲೆ ಕಥೆ ಕೇಳಿ ಮೆಚ್ಚಿಕೊಂಡಿರೋ ವಿಜಯ್ ದೇವರಕೊಂಡ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ.