• March 16, 2026

ರಣಬೀರ್ ದೇವಸ್ಥಾನ ಪ್ರವೇಶಿಸದಂತೆ ತಡೆದ ಭಜರಂಗ ದಳ ಕಾರ್ಯಕರ್ತರು: ಹೊರಗೆ ನಿಂತು ಕೈ ಮುಗಿದ ಜೋಡಿ

ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಹೀಗಾಗಿ ಇಡೀ ಚಿತ್ರತಂಡ ದೇಶದ ನಾನಾ ಸ್ಥಳಗಳನ್ನು ಸುತ್ತಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಈ ಮಧ್ಯೆ ರಣಬೀರ್ ಕಪೂರ್ ರನ್ನು ದೇವಸ್ಥಾನದೊಳಗೆ ಹೋಗದಂತೆ ಭಜರಂಗ ದಳದ ಕಾರ್ಯಕರ್ತರು ತಡೆದಿರುವ ಘಟನೆಯೂ ನಡೆದಿದೆ. ರಣಬೀರ್ ಹಾಗೂ ಆಲಿಯಾ ಭಟ್ ಬ್ರಹ್ಮಾಸ್ತ್ರ ತಂಡದೊಂದಿಗೆ ಮಧ್ಯಪ್ರದೇಶದಲ್ಲಿರುವ ಸುಪ್ರಸಿದ್ದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲು ಮುಂದಾಗಿದ್ದರು. ಆದರೆ ಈ ಹಿಂದೆ ರಣಬೀರ್ ಭೀಪ್ ತಿಂದ ಹೇಳಿಕೆ ನೀಡಿದ್ದು ಈ ಕಾರಣಕ್ಕೆ ದೇವಸ್ಥಾನ ಪ್ರವೇಶಿಸದಂತೆ ಅಲ್ಲಿನ ಭಜರಂಗ ದಳದ ಕಾರ್ಯಕರ್ತರು ತಡೆದಿದ್ದಾರೆ. ರಣಬೀರ್ ಹಾಗೂ ಆಲಿಯಾ ಸಂಪ್ರದಾಯಿಕ ಉಡುಪಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದು ದೇವಸ್ಥಾನದ ನಿಯಮಗಳನ್ನು ಪಾಲಿಸಿದ್ದಾರೆ. ಆದರೆ ಈ ಹಿಂದೆ ಸಂದರ್ಶನವೊಂದಲ್ಲಿ ಭೀಪ್ ತಿಂದಿದ್ದ ಹೇಳಿಕೆ ನೀಡಿದ ಕಾರಣಕ್ಕೆ ದೇವಸ್ಥಾನ ಪ್ರವೇಶಿಸಲು ಭಜರಂಗ ದಳದ ಸಿಬ್ಬಂದಿಗಳು ಭಹಿಷ್ಕರಿಸಿದ್ದಾರೆ. ಸಡನ್ನಾಗಿ ನಡೆದ ಬೆಳವಣಿಗೆಯಿಂದ ಗಲಿಬಿಲಿಗೊಂಡ ರಣ್ಬೀರ್ ಮತ್ತು ಆಲಿಯಾ ಭಟ್, ಅದೆಷ್ಟೇ ಸಮಾಧಾನ ಹೇಳಿದರೂ ಕೇಳದ ಕಾರಣದಿಂದಾಗಿ ದೇವಸ್ಥಾನದಿಂದ ಅವರು ಹೊರಗುಳಿದಿದ್ದಾರೆ. ಕೇವಲ ನಿರ್ದೇಶಕ ಅಯಾನ್ ಮುಖರ್ಜಿ ಒಬ್ಬರೇ ದೇವಸ್ಥಾನದ  ಒಳಗೆ ಪ್ರವೇಶಿಸಿ ದೇವರ ದರ್ಶನ ಪಡೆದಿದ್ದು ಅದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now