• March 14, 2026

ಆಲಿಯಾ ಭಟ್, ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರಕ್ಕೂ ಬಾಯ್ಕಾಟ್ ಬಿಸಿ

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಕೊಂಡಿದೆ. ಈಮಧ್ಯೆ ಬ್ರಹ್ಮಾಸ್ತ್ರ ಸಿನಿಮಾಗೆ ಬಾಯ್ಕಾಟ್ ಬಿಸಿ ಕೇಳಿ ಬಂದಿದೆ. ಬಾಲಿವುಡ್ ನಲ್ಲಿ ಬಾಯ್ಕಾಟ್ ಬಿಸಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗ್ಲೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಾಟ್ ಗೆ ಬಲಿಯಾಗಿದೆ. ಇದರ ಜೊತೆಗೆ ಲೈಗರ್ ಸಿನಿಮಾಗೂ ಬಾಯ್ಕಾಟ್ ಬಿಸಿ ಕೇಳಿ ಬಂದಿತ್ತು. ಈ ಮಧ್ಯೆ ಬ್ರಹ್ಮಾಸ್ತ್ರ ಸಿನಿಮಾವನ್ನು ಬಾಯ್ ಕಾಟ್ ಮಾಡಬೇಕು ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ನಲ್ಲಿ ಹಿಂದೂ ದೇವರುಗಳಿಗೆ ರಣಬೀರ್ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಸಿನಿಮಾ ನಿರ್ದೇಶಕರು ಅದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದರು. ಇತ್ತೀಚೆಗೆ ಬಾಯ್ಕಾಟ್ ಕುರಿತಂತೆ ಆಲಿಯಾ ಭಟ್ ಆಡಿದ ಮಾತುಗಳು ಹಲವರ ಕಂಗೆಣ್ಣಿಗೆ ಗುರಿಯಾಗಿತ್ತು. ಬಾಯ್ಕಾಟ್ ಮಾಡುವವರ ವಿರುದ್ಧ ಗುಡುಗಿದ್ದ ಆಲಿಯಾ, ನನ್ನ ಸಿನಿಮಾ ನೋಡದೇ ಇದ್ದರೆ ಬಿಡಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಬಲವಂತವಾಗಿ ನೋಡಿ ಅಂತ ಹೇಳುತ್ತಿರುವವರು ಯಾರು ಎಂದು ಎಂದಿದ್ದರು. ಸದ್ಯ ಟ್ರೈಲರ್ ನಲ್ಲಿ ಉಂಟಾದ ವಿವಾದ ಹಾಗೂ ಆಲಿಯಾ ಭಟ್ ಹೇಳಿಕೆಯಿಂದ ಸಿನಿ ಪ್ರೇಕ್ಷಕರು ರೊಚ್ಚಿಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಹ್ಮಾಸ್ತ್ರ ಸಿನಿಮಾವನ್ನು ಬಾಯ್ ಕಾಟ್ ಮಾಡಬೇಕು ಎನ್ನುವ ಮಾತುಗಳು ಕೇಳಿ ಬರ್ತಿದೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now